Madikeri : ಪ್ರವಾಸಕ್ಕೆಂದು ಬಂದಿದ್ದ ಯುವತಿ ಹೋಮ್‌ಸ್ಟೇನಲ್ಲಿ ನಿಗೂಢ ಸಾವು

ಮಡಿಕೇರಿ : ಮುಂಬೈನಿಂದ ಮಡಿಕೇರಿಗೆ ಪ್ರವಾಸಕ್ಕೆಂದು ಬಂದಿದ್ದ ಯುವತಿಯೋರ್ವಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ನಗರದಲ್ಲಿರುವ ನ್ಯೂ ಕೂರ್ಗ್‌ ವ್ಯಾಲಿ ಹೋಂ ಸ್ಟೇನಲ್ಲಿ ನಡೆದಿದೆ.

ಮುಂಬೈ ನಿವಾಸಿ ವಿಘ್ನೇಶ್ವರಿ ( 24ವರ್ಷ ) ಎಂಬಾಕೆಯೇ ಮೃತ ಯುವತಿ. ನಾಲ್ವರು ಸ್ನೇಹಿತರ ಜೊತೆಯಲ್ಲಿ ಕಳೆದ ಶನಿವಾರ ಕೊಡಗು ಜಿಲ್ಲೆಗೆ ಬಂದಿದ್ದ ಯುವತಿ ಮಡಿಕೇರಿ ನಗರದ ಸುತ್ತಮುತ್ತ ಲಿನ ಹಲವು ಪ್ರವಾಸಿ ತಾಣಗಳಿಗೆ ಭೇಟಿಯನ್ನು ನೀಡಿದ್ದರು. ನಂತರದ ನಗರದಲ್ಲಿರುವ ನ್ಯೂ ಕೂರ್ಗ ಹೋಮ್‌ಸ್ಟೇನಲ್ಲಿ ಉಳಿದುಕೊಂಡಿದ್ದರು.

ಭಾನುವಾರ ಪ್ರವಾಸಿ ತಾಣಗಳಲ್ಲಿ ಸುತ್ತಾಟ ನಡೆಸಿದ್ದ ವಿಘ್ನೇಶ್ವರಿ, ರಾತ್ರಿ ಬಾತ್‌ರೂಮ್‌ನಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ಕೂಡಲೇ ಆಕೆಯ ಸ್ನೇಹಿತರು ಹೋಮ್‌ಸ್ಟೇ ಮಾಲೀಕ ಮುಕ್ತರ್‌ ಗೆ ವಿಷಯ ಮುಟ್ಟಿಸಿದ್ದರು. ಗೀಸರ್‌ನಲ್ಲಿ ಗ್ಯಾಸ್‌ ಲೀಕ್‌ ಆಗಿ ಈ ದುರಂತ ಸಂಭವಿಸಿದೆ ಎನ್ನಲಾಗುತ್ತಿದೆ.

ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಶವದ ಮರಣೋತ್ತರ ಕಾರ್ಯವನ್ನು ನಡೆಸಲಾಗಿದ್ದು, ಪೋಷಕರಿಗೆ ಮೃತ ದೇಹವನ್ನು ಹಸ್ತಾಂತರ ಮಾಡಿದ್ದಾರೆ. ನನ್ನ ಮಗಳು ಆರೋಗ್ಯವಾಗಿದ್ದು, ಖುಷಿ ಖುಷಿಯಾಗಿ ಆಕೆ ಮಡಿಕೇರಿನ ನಗರದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಳು. ಆದರೆ ಆಕೆಯ ಸಾವು ಅನುಮಾನ ಮೂಡಿಸುತ್ತಿದೆ. ಹೀಗಾಗಿ ನನ್ನ ಮಗಳ ಸಾವಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ವಿಘ್ನೇಶ್ವರಿ ಪೋಷಕರಿಗೆ ಮಡಿಕೇರಿ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ : ಕೇಳಿದ್ದು ಗ್ರೈಪ್‌ ವಾಟರ್‌, ಕೊಟ್ಟಿದ್ದು ಪಾಯಿಸನ್ ! ಮೆಡಿಕಲ್‌ ಮಾಲೀಕರ ಮಹಾ ಎಡವಟ್ಟು

ಇದನ್ನೂ ಓದಿ : ಕರ್ನಟಕದಲ್ಲಿ ಅ.27ರ ವರೆಗೂ ಭಾರಿ ಮಳೆ : ಯೆಲ್ಲೋ ಅಲರ್ಟ್‌ ಘೋಷಣೆ

ಇದೀಗ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಆದರೆ ಹೋಮ್‌ಸ್ಟೇ ಮಾಲೀಕ ಗೀಸರ್‌ಗೆ ಗ್ಯಾಸ್‌ ಕನೆಕ್ಷನ್‌ ಮಾಡಿಸಿರಲಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇನ್ನೊಂದೆಡೆಯಲ್ಲಿ ಹೋಮ್‌ಸ್ಟೇ ನೋಂದಣಿ ಮಾಡಿರಲಿಲ್ಲ ಎನ್ನಲಾಗುತ್ತಿದೆ. ಇದೀಗ ಅನುಮಾನಾಸ್ಪದ ಸಾವು ಪ್ರಕರಣ ದಾಖಲು ಮಾಡಿಕೊಂಡಿರುವ ಮಡಿಕೇರಿ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

Young Women Found Dead Body at New Koorg Home Stay Madikeri

Comments are closed.