Omicron Danger : ರಾಜ್ಯದಲ್ಲಿ ಓಮಿಕ್ರಾನ್​ ಆತಂಕ: ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ಸಭೆ

ಬೆಂಗಳೂರು : ಸಂಭವನೀಯ ಕೊರೊನಾ ಮೂರನೇ ಅಲೆಯ ಬಗ್ಗೆ ಈಗಾಗಲೇ ಕಳವಳ ಜೋರಾಗಿದೆ. ದೇಶದ ವಿವಿಧ ರಾಜ್ಯಗಳು ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಪ್ರಕರಣಗಳನ್ನು ದಾಖಲಿಸುತ್ತಿವೆ. ಈ ಪಟ್ಟಿಯಲ್ಲಿ ಕರ್ನಾಟಕ ಕೂಡ ಸೇರಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಡೇಂಜರ್​ ಪಟ್ಟಿಯಲ್ಲಿ (Omicron Danger) ಕರ್ನಾಟಕವನ್ನೂ ಸೇರಿಸಿದೆ. ಹೀಗಾಗಿ ಅಲರ್ಟ್​ ಆಗಿರುವ ಸಿಎಂ ಬಸವರಾಜ ಬೊಮ್ಮಾಯಿ ಎರಡನೇ ಅಲೆಯಲ್ಲಿ ಉಂಟಾದ ಯಾವುದೇ ವೈದ್ಯಕೀಯ ಅಡಚಣೆ ಮೂರನೇ ಅಲೆಯಲ್ಲಿ ಉಂಟಾಗಬಾರದು ಎಂಬ ಕಾರಣಕ್ಕೆ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಕರೆದಿದ್ದಾರೆ.

ಬೆಂಗಳೂರಿನಲ್ಲಿ ಸಭೆ ಮುಗಿದ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸಭೆಯಲ್ಲಿ ಜಿಲ್ಲಾಮಟ್ಟದಲ್ಲಿ ಕೈಗೊಳ್ಳಬಹುದಾದ ಅನೇಕ ಮುನ್ನೆಚ್ಚರಿಕಾ ಕ್ರಮಗಳು, ಅನುಷ್ಠಾನಗಳು ಹಾಗೂ ಆಡಳಿತಾತ್ಮಕ ವಿಚಾರಗಳ ಬಗ್ಗೆ ಚರ್ಚಿಸಿದ್ದೇವೆ. ಹೊಸ ವರ್ಷದಲ್ಲಿ ಹೊಸ ಚೈತನ್ಯ ಹಾಗೂ ಹೊಸ ದಿಕ್ಸೂಚಿಯ ಜೊತೆಯಲ್ಲಿ ಜನರಿಗೆ ಆಡಳಿತವನ್ನು ಇನ್ನಷ್ಟು ಹತ್ತಿರದಿಂದ ನೀಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಡೇಂಜರ್​ ಪಟ್ಟಿಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೂ ಸ್ಥಾನ ನೀಡಿದ್ದರ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಿಎಂ ಬೊಮ್ಮಾಯಿ, ದೇಶದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ದೇಶದ ಟಾಪ್​ 8 ಡೇಂಜರ್​ ರಾಜ್ಯಗಳ ಪೈಕಿ ಕರ್ನಾಟಕ ಕೂಡ ಒಂದಾಗಿದೆ. ಹೀಗಾಗಿ ನಾವು ಅಲರ್ಟ್​ ಆಗಲೇಬೇಕಿದೆ, ವೈದ್ಯಕೀಯ ಸೌಲಭ್ಯಗಳು ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನ ಸೆಳೆಯುವ ಅಗತ್ಯವಿದೆ ಎಂದು ಹೇಳಿದರು.


ಇದೇ ವೇಳೆ ರಾಜ್ಯದ ಜನತೆಗೆ ಹೊಸ ವರ್ಷದ ಶುಭಾಶಯವನ್ನೂ ಕೋರಿದ ಸಿಎಂ ಬೊಮ್ಮಾಯಿ ರಾಜ್ಯವು ಎಲ್ಲಾ ಸವಾಲುಗಳಿಂದ ಮುಕ್ತವಾಗಲಿ, ಜನ ಸಾಮಾನ್ಯರ ಜೀವನ ಉತ್ತಮವಾಗಿ ಇರಲಿ ಎಂದು ಹಾರೈಸಿದರು.

ಇದನ್ನು ಓದಿ : Karnataka Corona Rise Again : ಕರ್ನಾಟಕ ಸೇರಿ 5 ರಾಜ್ಯದಲ್ಲಿ ಮತ್ತೆ ಕೊರೋನಾ ಪ್ರಮಾಣ ಏರಿಕೆ : ಆಘಾತಕಾರಿ ಮಾಹಿತಿ ಕೊಟ್ಟ ಕೇಂದ್ರ

ಇದನ್ನೂ ಓದಿ : Karnataka Cabinet Expansion: ರಾಜ್ಯದಲ್ಲಿ ಸಂಪುಟ ಸಂಕ್ರಾಂತಿ ಸರ್ಕಸ್ : ಸಿಎಂ ಮನೆಗೆ ದೌಡಾಯಿಸಿದ ಅಕಾಂಕ್ಷಿಗಳು

ಇದನ್ನೂ ಓದಿ : cVigil App : ಕಣ್ಣೆದುರೇ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಆಗುತ್ತಿದೆಯೇ? ಮೊಬೈಲಲ್ಲೇ ಆಯೋಗಕ್ಕೆ ದೂರು ದಾಖಲಿಸಲು ಈ ಆ್ಯಪ್‌ ಬಳಸಿ

omicron danger in Karnataka ; cm calls meeting with dc’s

Comments are closed.