Corona third wave : ರಾಜ್ಯದಲ್ಲಿ ಶೀಘ್ರದಲ್ಲೇ ಕೊರೊನಾ ಮೂರನೇ ಅಲೆ:ತಜ್ಞರ ಮಾಹಿತಿ

ಬೆಂಗಳೂರು : Corona third wave :ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಏರಿಕೆ ಕಾಣುತ್ತಿರೋದು ಕಳವಳ ಸೃಷ್ಟಿಸುತ್ತಿದೆ. ಬರೋಬ್ಬರಿ ಮೂರು ತಿಂಗಳ ಬಳಿ ರಾಜ್ಯದಲ್ಲಿ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ 700ರ ಗಡಿ ದಾಟಿದೆ . ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಬರೋಬ್ಬರಿ 707 ಹೊಸ ಕೋವಿಡ್​ ಪ್ರಕರಣಗಳು ವರದಿಯಾಗಿದೆ. ಸೆಪ್ಟೆಂಬರ್​ 30ರಂದು ರಾಜ್ಯದಲ್ಲಿ ಒಂದೇ ದಿನ 933 ಪ್ರಕರಣ ವರದಿಯಾಗಿತ್ತು. ಇದಾದ ಬಳಿಕ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದೈನಂದಿನ ಪ್ರಕರಣ ವರದಿಯಾಗಿದೆ.


ಕೊರೊನಾದಿಂದಾಗಿ ಒಂದು ದಿನದಲ್ಲಿ ರಾಜ್ಯದಲ್ಲಿ ಮೂರು ಮಂದಿ ಸಾವನ್ನಪ್ಪಿದ್ದರೆ 252 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್​ ಆಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಪಾಸಿಟಿವಿಟಿ ದರ 0.61 ಪ್ರತಿಶತದಷ್ಟಾಗಿದೆ. ಇದೂ ಸಹ ಮೂರು ತಿಂಗಳ ಬಳಿಕ ದಾಖಲಾದ ಅತೀ ಹೆಚ್ಚಿನ ಪಾಸಿಟಿವಿಟಿ ದರವಾಗಿದೆ. ಕ್ರಮೇಣವಾಗಿ ರಾಜ್ಯದಲ್ಲಿ ಕೊರೊನಾ ದೈನಂದಿನ ಪ್ರಕರಣದಲ್ಲಿ ಏರಿಕೆ ಕಾಣ್ತಿರೋದು ಮೂರನೇ ಅಲೆಯ ಮುನ್ಸೂಚನೆಯಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.


ಡಿಸೆಂಬರ್​​ 27ರಿಂದ ರಾಜ್ಯದಲ್ಲಿ ಕ್ರಮೇಣವಾಗಿ ದೈನದಿಂದ ಕೊರೊನಾ ಪ್ರಕರಣದಲ್ಲಿ ಏರಿಕೆ ಕಂಡು ಬಂದಿದೆ. ಡಿಸೆಂಬರ್​ 27ರಂದು ರಾಜ್ಯದಲ್ಲಿ 289 ಹೊಸ ಪ್ರಕರಣಗಳು ವರದಿಯಾಗಿದ್ದರು. ಇದಾದ ಬಳಿಕ ಡಿಸೆಂಬರ್​ 28ರಲ್ಲಿ 356 ಪ್ರಕರಣಗಳು ವರದಿಯಾಗಿದ್ದವು. ನಂತರದಲ್ಲಿ ಡಿಸೆಂಬರ್​ 29ರಂದು 566 ಹಾಗೂ ಡಿಸೆಂಬರ್​ 30ರಂದು 707 ಕೊರೊನಾ ಪ್ರಕರಣಗಳು ವರದಿಯಾಗಿವೆ. ಈ ರೀತಿ ಕೊರೊನಾ ಪ್ರಕರಣದಲ್ಲಿ ಏರಿಕೆ ಕಂಡು ಬರ್ತಿರೋದು ಕೊರೊನಾ ಮೂರನೇ ಅಲೆಯ ಮುನ್ಸೂಚನೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಹಾಗೂ ರಾಜ್ಯ ಕೋವಿಡ್​ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ. ಸಿಎಸ್​ ಮಂಜುನಾಥ್​​ ಹೇಳಿದರು.

ಪ್ರಸ್ತುತ ರಾಜ್ಯದಲ್ಲಿ ಕೋವಿಡ್ ತಳಿಯು ಹೆಚ್ಚಾಗಿದೆ. ಆದರೆ ಮುಂದಿನ ದಿನಗಳಲ್ಲಿ ಈ ಜಾಗವನ್ನು ಓಮಿಕ್ರಾನ್​ ಆವರಿಸಿಕೊಳ್ಳಬಹುದು. ಇದೇ ಕೋವಿಡ್​ ಮೂರನೇ ಅಲೆಯನ್ನು ಉಂಟು ಮಾಡಬಹುದು. ಪಾಸಿಟಿವಿಟಿ ದರ ಶೇಕಡಾ 2 ದಾಟಿದರೆ ಹೊಸ ಅಲೆ ಆರಂಭವಾಗಿದೆ ಎಂದು ನೀವು ಊಹಿಸಬಹುದು. ಪ್ರಸ್ತುತ ಪಾಸಿಟಿವಿಟಿ ದರ ಶೇಕಡಾ 0.60ರಷ್ಟಾಗಿದೆ. ಅಲ್ಲದೇ ಕಳೆದ ನಾಲ್ಕೈದು ದಿನಗಳಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಏರಿಕೆ ಕಾಣುತ್ತಲೇ ಇದೆ. ಹೀಗಾಗಿ ನೀವು ಕೊರೊನಾ ಮೂರನೇ ಅಲೆ ಆರಂಭವಾಗಿದೆ ಎಂಬುದರ ಸೂಚನೆಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ಡಾ. ಸಿಎಸ್​ ಮಂಜುನಾಥ್​ ಹೇಳಿದರು.

Dr.C.S Manjunath hints about corona third wave in karnataka

ಇದನ್ನು ಓದಿ : Omicron Danger :ರಾಜ್ಯದಲ್ಲಿ ಓಮಿಕ್ರಾನ್​ ಆತಂಕ: ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ಸಭೆ

ಇದನ್ನೂ ಓದಿ : Bengaluru corona fear: ಬೆಂಗಳೂರಲ್ಲಿ ಕೊರೊನಾ ಸೋಂಕು ಹೆಚ್ಚುವ ಭೀತಿ : ಚಿಕಿತ್ಸೆಗೆ ಮತ್ತೊಂದು ಆಸ್ಪತ್ರೆ ಮೀಸಲಿರಿಸಿದ ಆರೋಗ್ಯ ಇಲಾಖೆ

Comments are closed.