ಮದುವೆ ಮಂಟಪದಿಂದ ವಧು ಕ್ವಾರಂಟೈನ್ ಗೆ : ತಾಳಿಕಟ್ಟುವ ಶುಭಗಳಿಗೆಗೆ ಕುತ್ತು ತಂದ ಕೊರೊನಾ

0

ಹಾವೇರಿ : ಕೊರೊನಾ ವೈರಸ್ ಇನ್ನಿಲ್ಲದಂತೆ ಸಂಕಷ್ಟವನ್ನು ತಂದೊಡ್ಡುತ್ತಿದೆ. ಇದೀಗ ವಧುವಿಗೆ ತಾಳಿಕಟ್ಟುವ ಶುಭಗಳಿಗೆಗೂ ಕೊರೊನಾ ಕುತ್ತು ತಂದಿದ್ದು, ವಧು ಸೇರಿ ಮದುವೆಗೆ ಬಂದಿದ್ದ 20 ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

ಹಾವೇರಿನ ಪಟ್ಟಣದಲ್ಲಿಂದು ಮದುವೆ ನಿಗದಿಯಾಗಿತ್ತು. ವಧು ಹಾಗೂ ವರರ ಸಂಬಂಧಿಗಳು ಮದುವೆ ಮಂಟಪಕ್ಕೆ ಬಂದಿದ್ದಾರೆ. ಇದೇ ಹೊತ್ತಲ್ಲೇ ವಧುನಿನ ಸಂಬಂಧಿ ಮಹಿಳೆಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ವಧು ಹಾಗೂ ವರನ ಕಡೆಯವರಿಗೆ ಮದುವೆಯನ್ನು ಮುಂದೂಡುವಂತೆ ಮನವಿ ಮಾಡಿದ್ದಾರೆ. ಆರಂಭದಲ್ಲಿ ಮದುವೆ ಮಾಡಲು ಅನುಮತಿ ನೀಡುವಂತೆ ಜಿಲ್ಲಾಡಳಿತವನ್ನು ಕೇಳಿಕೊಂಡಿದ್ದಾರೆ.

ಕೊನೆಗೂ ಜಿಲ್ಲಾಡಳಿತ ಮದುವೆಯನ್ನು ಮುಂದೂಡುವಲ್ಲಿ ಯಶಸ್ವಿಯಾಗಿದೆ. ಸಂಬಂಧಿ ಮಹಿಳೆಗೆ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮಹಿಳೆಯ ಜೊತೆಗೆ ಪ್ರಾಥಮಿಕ ಸಂಪರ್ಕವನ್ನು ಹೊಂದಿರುವ ವಧು ಸೇರಿದಂತೆ ಇತರ 19 ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

ಇನ್ನು ಮಹಿಳೆ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದರು. ಈ ವೇಳೆಯಲ್ಲಿ ಮಹಿಳೆಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಹಿಳೆಯ ಜೊತೆಗೆ ಸಂಪರ್ಕದಲ್ಲಿದ್ದವರ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ.

Leave A Reply

Your email address will not be published.