ಅಮೇರಿಕಾದದಲ್ಲಿ 40 ಸಾವಿರ ಗಡಿದಾಟುತ್ತೆ ಸಾವಿನ ಸಂಖ್ಯೆ : ಜಗತ್ತಿನಾದ್ಯಂತ 23 ಲಕ್ಷ ಜನರಿಗೆ ಒಕ್ಕರಿಸಿದ ಮಹಾಮಾರಿ

0

ನ್ಯೂಯಾರ್ಕ್ : ಮಹಾಮಾರಿ ಕೊರೊನಾ ವಿಶ್ವದಾದ್ಯಂತ ಮರಣ ಮೃದಂಗವನ್ನೇ ಬಾರಿಸುತ್ತಿದೆ. ಅಮೇರಿಕಾದಲ್ಲಿ ಸಾವಿನ ಸಂಖ್ಯೆ 39,000 ಕ್ಕೂ ಅಧಿಕವಾಗಿದ್ದು, 40,000 ಗಡಿದಾಟುವ ಆತಂಕ ಎದುರಾಗಿದೆ. ಇನ್ನು ಜಗತ್ತಿನಾದ್ಯಂತ 23 ಲಕ್ಷ ಮಂದಿಗೆ ಮಹಾಮಾರಿ ಒಕ್ಕರಿಸಿಕೊಂಡಿದೆ. ಅಲ್ಲದೇ ಇದುವರೆಗೆ 1.60 ಲಕ್ಷಕ್ಕೂ ಅಧಿಕ ಮಂದಿಯನ್ನು ಡೆಡ್ಲಿ ವೈರಸ್ ಸೋಂಕು ಬಲಿಪಡೆದಿದೆ.

ದೊಡ್ಡಣ್ಣ ಅಂತಾ ಕರೆಯಿಸಿಕೊಳ್ಳುವ ಅಮೇರಿಕಾದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಈಗಾಗಲೇ 7.38 ಲಕ್ಷಕ್ಕೂ ಮಿಕ್ಕಿದೆ. ಅದ್ರಲ್ಲೂ ನ್ಯೂಯಾರ್ಕ್ ನಗರದಲ್ಲಿಯೇ ಅತೀ ಹೆಚ್ಚು ಸಂಖ್ಯೆಯಲ್ಲಿ ಕೊರೊನಾ ಪೀಡಿತರಿದ್ದಾರೆ.

ಅದ್ರಲ್ಲೂ ಅಮೇರಿಕಾದಲ್ಲಿ ಕೊರೊನಾ ಮಹಾಮಾರಿಗೆ ಈಗಾಗಲೇ 39,000ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ.

ಇನ್ನು ಸ್ಪೇನ್ ನಲ್ಲಿಯೂ ಕೊರೊನಾ ಪೀಡಿತರ ಸಂಖ್ಯೆ ಮಿತಿಮೀರಿದೆ. ಸ್ಪೇನ್ ನಲ್ಲಿ ಈಗಾಗಲೇ 1.94 ಲಕ್ಷ ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಅಲ್ಲದೇ 20,000 ಮಂದಿ ಬಲಿಯಾಗಿದ್ದಾರೆ.

ಇಟಲಿಯಲ್ಲಿ 1.75 ಜನರನ್ನು ಡೆಡ್ಲಿ ವೈರಸ್ ಕಾಡುತ್ತಿದ್ದು, ಅಲ್ಲಿಯೂ 23,000ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಫ್ರಾನ್ಸ್ ನಲ್ಲಿಯೂ ಕೊರೊನಾ ಆರ್ಭಟ ಜೋರಾಗಿದೆ.

ಫ್ರಾನ್ಸ್ ನಲ್ಲಿ ಒಟ್ಟು 1.15 ಲಕ್ಷ ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರೆ, 19,000 ಮಂದಿ ಕೊರೊನಾದಿಂದ ಇಹಲೋಕ ತ್ಯೆಜಿಸಿದ್ದಾರೆ.

ಇನ್ನು ಜರ್ಮನಿಯಲ್ಲಿ ಮರಣ ಮೃದಂಗವನ್ನೇ ಬಾರಿಸಿದ್ದ ಕೊರೊನಾಕ್ಕೆ 1.43 ಲಕ್ಷ ಮಂದಿ ತುತ್ತಾಗಿದ್ದಾರೆ. ಆದರೆ ಕೇವಲ 4538 ಮಂದಿ ಮೃತಪಟ್ಟಿದ್ದಾರೆ.

Leave A Reply

Your email address will not be published.