‘ವುವಾನ್ ವೈರಾಲಜಿ ಲ್ಯಾಬ್’ ಎಂಬ ಚೀನಾದ ವಿವಾದಿತ ಲ್ಯಾಬ್ !

0

ಚೀನಾ : ಕೊರೊನಾ (ಕೋವಿಡ್-19) ಅನ್ನೋ ಡೆಡ್ಲಿ ಮಹಾಮಾರಿ ಇಂದು ವಿಶ್ವದ ಜನರನ್ನೇ ನಡುಗಿಸಿಬಿಟ್ಟಿದೆ. ಸಾವಿರಾರು ಮಂದಿಯನ್ನು ಬಲಿ ಪಡೆದಿದ್ದು, ಲಕ್ಷಾಂತರ ಮಂದಿ ಕೊರೊನಾ ಸೋಂಕಿನ ಬಳಲುತ್ತಿದ್ದಾರೆ. ಕೊರೊನಾ ವಿರುದ್ದ ಜಗತ್ತಿನಾದ್ಯಂತ ಹೋರಾಟಗಳು ನಡೆಯುತ್ತಿರೋ ಬೆನ್ನಲ್ಲೇ, ಕೊರೊನಾ ವೈರಸ್ ಹುಟ್ಟಿನ ಬಗ್ಗೆ ವಿವಾದಗಳು ಹುಟ್ಟಿಕೊಂಡಿದೆ. ಅದ್ರಲ್ಲೂ ಚೀನಾದ ವುಹಾನ್ ಪ್ರಾಂತ್ಯದಲ್ಲಿರೋ ವುವಾನ್ ವೈರಾಲಜಿ ಲ್ಯಾಬ್ ಇದೀಗ ವಿವಾದದ ಕೇಂದ್ರಬಿಂದುವಾಗಿದೆ.

ಆರಂಭದಲ್ಲಿ ಚೀನಾದ ವುವಾಹ್ ಮತ್ತು ಹುಬೈ ಪ್ರಾಂತ್ಯದಲ್ಲಿ ಕಾಣಸಿಕೊಂಡಿದ್ದ ಕೊರೊನಾ ಮಹಾಮಾರಿ ಲಕ್ಷಾಂತರ ಜನರನ್ನು ಬಲಿ ಪಡೆದಿದೆ ಎನ್ನಲಾಗುತ್ತಿದೆ. ಕೊರೊನಾ ಹುಟ್ಟಿಗೆ ಕಾರಣವಾಗಿದ್ದ ವುವಾನ್ ನಗರ ಇಂದಿಗೂ ಕೊರೊನಾದಿಂದ ಮುಕ್ತವಾಗಿಲ್ಲ. ಚೀನಾದಲ್ಲೀಗ ಮತ್ತೆ ಕೊರೊನಾ ಭೀತಿ ಎದುರಾಗಿದೆ.

ಈ ನಡುವಲ್ಲೇ ಕೋರೋನ ವನ್ನು ಪ್ರಪಂಚಕ್ಕೆ ಹಬ್ಬಿಸಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಂಭೀರ ಆರೋಪವನ್ನು ಮಾಡುತ್ತಿದ್ದಾರೆ. ಮಾತ್ರವಲ್ಲ ಕೊರೊನಾ ಸೋಂಕಿನ ಹುಟ್ಟಿಗೆ ಚೀನಾದ ‘ವೈರಾಲಜಿ ಲ್ಯಾಬ್’ ಕಾರಣ ಅಂತಾ ಟ್ರಂಪ್ ಕಿಡಿಕಾರುತ್ತಿದ್ದಾರೆ.

ಚೀನಾದಲ್ಲಿ ಕೊರೊನಾ ಸೋಂಕಿಗೆ ತುತ್ತಾದವರು, ಬಲಿಯಾದವರ ಸಂಖ್ಯೆಯಲ್ಲಿಯೂ ಸಾಕಷ್ಟು ಗೊಂದಲಗಳಿವೆ. ವಿಶ್ವ ಆರೋಗ್ಯ ಸಂಸ್ಥೆಯೂ ಚೀನಾದೊಂದಿಗೆ ಕೈ ಜೋಡಿಸಿ ವಿಶ್ವಕ್ಕೆ ಕೊರೊನಾ ವಿಚಾರದಲ್ಲಿ ಸುಳ್ಳು ಮಾಹಿತಿ ನೀಡುತ್ತಿದೆ ಅನ್ನೋ ಆರೋಪವೂ ಇದೆ.

ವುವಾನ್ ನಲ್ಲಿರುವ ವೈರಾಲಜಿ ಲ್ಯಾಬ್ ನಿಂದಲೇ ಕೊರೊನಾ ಸೋಂಕು ಹರಡಿದೆ ಅನ್ನೋ ಆರೋಪ ಕೇಳಿಬಂದ ಬೆನ್ನಲ್ಲೇ, ಅಮೆರಿಕದ ರಾಜ್ಯ ಕಾರ್ಯದರ್ಶಿ ಮೈಕ್ ಪಾಂಪೈ ಇದೀಗ ವುವಾನ್ ವೈರಾಲಜಿ ಲ್ಯಾಬ್ ನಿಂದ ವೈರಾಣು ಸೋರಿಕೆಯ ಬಗ್ಗೆ ತನಿಖೆ ನಡೆಸುವುದಾಗಿ ಘೋಷಿಸಿದ್ದಾರೆ.

ವಿಶ್ವದ ದೊಡ್ಡಣ್ಣಾ ಅಂತ ಕರೆಯಿಸಿಕೊಳ್ಳುವ ಅಮೇರಿಕಾ ಇದೀಗ ಚೀನಾದ ವಿರುದ್ದ ಬೊಟ್ಟು ಮಾಡೋದಕ್ಕೆ ನಿಖರ ಕಾರಣವಿದೆ. ‘ವುವಾನ್ ವೈರಾಲಜಿ ಲ್ಯಾಬ್’ ಏಷ್ಯಾದ ಬಹುದೊಡ್ಡ ವೈರಾಣು ಸಂಗ್ರಹದ ಲ್ಯಾಬ್ ಅಂತಾ ಖ್ಯಾತಿ ಪಡೆದಿದೆ. ಒಟ್ಟಾರೆ 1,500 ವೈರಸ್ ಗಳ ಸಂಗ್ರಹ ಈ ಲ್ಯಾಬ್ ನಲ್ಲಿದೆ.

ವಿಶ್ವದಲ್ಲಿ ಸಾವಿರಾರು ಜನರನ್ನು ಬಲಿ ಪಡೆದಿರೋ ಮಾರಕ ಎಬೋಲಾ ದಂತಹ ಬಹು ಅಪಾಯಕಾರಿ ವೈರಾಣುಗಳು ಸಹ ಈ ಲ್ಯಾಬ್ ನಲ್ಲಿದೆ. 2015ರಲ್ಲಿ ಒಟ್ಟು 300 ಮಿಲಿಯನ್ ಹಣವನ್ನು ಚೀನಾ ಈ ಲ್ಯಾಬ್ ಗೆ ವಿನಿಯೋಗಿಸಿದೆ. 2018 ರಲ್ಲಿ ಈ ಲ್ಯಾಬ್ ಅಧಿಕೃತವಾಗಿ ಕಾರ್ಯವನ್ನು ಆರಂಭಿಸಿತು. ಸುಮಾರು 3000 ಸ್ಕ್ವಾರ್ ಪದರ ಮೀಟರ್ ಅಡಿ ವಿಸ್ತೀರ್ಣ ಹೊಂದಿರುವ ಈ ಲ್ಯಾಬ್ ವುವಾನ್ ಗುಡ್ಡ ಪ್ರದೇಶದಲ್ಲಿ ತಲೆಯೆತ್ತಿ ನಿಂತಿದೆ.

ಚೀನಾದ ವಿಜ್ಞಾನಿಗಳ ಒಂದು ತಂಡ ಜನವರಿಯಲ್ಲಿ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ‘ವುವಾನ್’ ನ ಪ್ರಾಣಿ ಮಾರುಕಟ್ಟೆಯಿಂದ ವೈರಸ್ ಬಂದಿಲ್ಲ ಎಂದಿದೆ. ಈ ಕಾರಣದಿಂದ ವೈರಸ್ ಲ್ಯಾಬ್ ನಿಂದ ಸೋರಿಕೆಯಾಗಿದೆ ಎಂಬ ಗುಮಾನಿಗೆ ಪುಷ್ಟಿ ದೊರಕಿದೆ. ಲಂಡನ್ ನ ಖ್ಯಾತ ಸೋಂಕಿನ ಬಗ್ಗೆ ಅಧ್ಯಯನದ ತಜ್ಞ ಕೂಡ ಬಾವಲಿಗಳಿಂದ ಮನುಷ್ಯರಿಗೆ ಹರಡಿರುವ ಬಗ್ಗೆ ಯಾವುದೇ ಪೂರಕ ದಾಖಲೆಗಳು ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದ ‘ವುವಾನ್ ವೈರಾಲಜಿ’ ಲ್ಯಾಬ್ ಈಗ ಪ್ರಪಂಚದ ವಿವಾದದ ಕೇಂದ್ರಬಿಂದುವಾಗಿದೆ.

Leave A Reply

Your email address will not be published.