ಗುಜರಾತ್ ಟೈಟನ್ಸ್ ವಿರುದ್ಧ ರಣರೋಚಕ ವಿಜಯ : ಸತತ 2ನೇ ಬಾರಿ ಕಪ್ ಎತ್ತಿ ಹಿಡಿದ ಆರ್ಸಿಬಿ
ಗುಜರಾತ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಫೈನಲ್ ಕಾದಾಟದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸೆಣೆಸಿದ ಆರ್ಸಿಬಿ, ರಣರೋಚಕ ಜಯ ದಾಖಲಿಸಿದೆ.ಈ ಮೂಲಕ ಆರ್ಸಿಬಿ ತಂಡವು ಐಪಿಎಲ್ ಚಾಂಪಿಯನ್ ಟ್ರೋಫಿಗೆ 2ನೇ ಬಾರಿಗೆ ಮುತ್ತಿಡುವ ಮೂಲಕ ಅಭಿಮಾನಿಗಳ ಮೊಗದಲ್ಲಿ ಸಂತಸ ಮೂಡಿಸಿದೆ.
ಗುಜರಾತ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಫೈನಲ್ ಕಾದಾಟದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸೆಣೆಸಿದ ಆರ್ಸಿಬಿ, ರಣರೋಚಕ ಜಯ ದಾಖಲಿಸಿದೆ.ಈ ಮೂಲಕ ಆರ್ಸಿಬಿ ತಂಡವು ಐಪಿಎಲ್ ಚಾಂಪಿಯನ್ ಟ್ರೋಫಿಗೆ 2ನೇ ಬಾರಿಗೆ ಮುತ್ತಿಡುವ ಮೂಲಕ ಅಭಿಮಾನಿಗಳ ಮೊಗದಲ್ಲಿ ಸಂತಸ ಮೂಡಿಸಿದೆ. ಕಳೆದ 17 ವರ್ಷಗಳಲ್ಲಿ ಒಂದೆ ಒಂದು ಕಪ್ ಗೆಲ್ಲದಿದ್ದರೂ ಅಭಿಮಾನಿಗಳಿಂದ ಅತೀವ ಪ್ರೀತಿ ಸಂಪಾದಿಸಿಕೊಂಡೇ ಬಂದಿದ್ದ ಆರ್ಸಿಬಿ, ಇದೀಗ ಸತತ 2 ಬಾರಿ ಕಪ್ ಗೆಲ್ಲುವ ಮೂಲಕ ಅಭಿಮಾನಿಗಳ ಋಣ ತೀರಿಸುವ ಕಾರ್ಯ ಮಾಡಿದೆ.
ಟಾಸ್ ಗೆದ್ದ ಆರ್ಸಿಬಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.ಗುಜರಾತ್ ಟೈಟನ್ಸ್ನ ಜೋಡೆತ್ತುಗಳಾದ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ಗೆ ಹೆಚ್ಚು ಕಾಲ ಜೊತೆಯಾಟವಾಡಲು ಬಿಡದ ಆರ್ಸಿಬಿ ಬೌಲರ್ಸ್ ಇಬ್ಬರನ್ನು ಬೇಗ ಔಟ್ ಮಾಡಿತು. ಗಿಲ್ ಕೇವಲ 10 ರನ್ಗಳಿಗೆ ಪೆವಿಲಿಯನ್ಗೆ ಮರಳಿದ್ರೆ, ಸಾಯಿ ಸುದರ್ಶನ್ 12 ರನ್ಗಳಿಸಿ ಔಟ್ ಆದರು.
ಈ ರೀತಿಯಾಗಿ ಗುಜರಾತ್ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದ ಆರ್ಸಿಬಿ 156 ರನ್ಗಳ ಸವಾಲನ್ನು ಪಡೆದುಕೊಂಡಿತು. ವಿರಾಟ್ ಕೊಹ್ಲಿ ಅವರ ಅಜೇಯ ಅರ್ಧಶತಕದ ನೆರವಿನಿಂದ 18 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಫಿನಾಲೆ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಇತ್ತ ಗುಜರಾತ್ ಟೈಟನ್ಸ್ ಐಪಿಎಲ್ ಆವೃತ್ತಿಯಲ್ಲಿ 2ನೇ ಬಾರಿಗೆ ತವರು ಮೈದಾನದಲ್ಲೇ ನಡೆದ ಫೈನಲ್ ಕಾದಾಟದಲ್ಲಿ ಸೋಲು ಕಂಡಂತಾಗಿದೆ.
Also Read: RCB vs GT IPL 2026 Final: ಸತತ 2ನೇ ಬಾರಿ ಟ್ರೋಫಿ ಗೆದ್ದ RCB; ಯಾರಿಗೆ ಸಿಕ್ತು Tata EV ಕಾರ್?
ಇನ್ನು ಈ ಗೆಲುವಿನ ಜೊತೆಯಲ್ಲಿ ಆರ್ಸಿಬಿ, ಐಪಿಎಲ್ ಇತಿಹಾಸದಲ್ಲಿ ಹಲವು ಇತಿಹಾಸಗಳನ್ನು ಬರೆದಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಬಳಿಕ ಸತತ 2ನೇ ಬಾರಿ ಐಪಿಎಲ್ ಫೈನಲ್ ಪಂದ್ಯ ಗೆದ್ದ ತಂಡ ಎಂಬ ಕೀರ್ತಿಗೆ ಪಾತ್ರವಾಗಿದೆ. ಮಾತ್ರವಲ್ಲದೇ ಆರ್ಸಿಬಿ ಫ್ರಾಂಚೈಸಿಗೆ ಕಳೆದ ಮೂರು ವರ್ಷಗಳಲ್ಲಿ ಒಲಿದು ಬಂದ 4ನೇ ಟ್ರೋಫಿ ಇದಾಗಿದೆ. ಅಲ್ಲದೇ ಮಹಿಳಾ ಹಾಗೂ ಪುರುಷರ ಆವೃತ್ತಿಗಳೆರಡರಲ್ಲಿಯೂ ಸತತ 2 ವರ್ಷಗಳಿಂದ ಆರ್ಸಿಬಿಯೇ ಚಾಂಪಿಯನ್ ಸ್ಥಾನದಲ್ಲಿ ಭದ್ರವಾಗಿ ಬೇರೂರಿದೆ.
A thrilling victory over Gujarat Titans RCB lifts the cup for the second time in a row



