ಐಪಿಎಲ್ನ ಶ್ರೀಮಂತ ತಂಡವಾಗಿ ಹೊರಹೊಮ್ಮಿದ ಆರ್ಸಿಬಿ: ದಾಖಲೆಯ ಮೊತ್ತಕ್ಕೆ ಮಾರಾಟ
ಬಿಲಿಯನೇರ್ ಕುಮಾರ್ ಮಂಗಲಂ ಬಿರ್ಲಾ ನೇತೃತ್ವದ ಭಾರತದ ಪ್ರಸಿದ್ಧ ಬಹುರಾಷ್ಟ್ರೀಯ ಸಮೂಹ ಆದಿತ್ಯ ಬಿರ್ಲಾ ಗ್ರೂಪ್ ಆರ್ಸಿಬಿ ತಂಡವನ್ನು 16,896 ಕೋಟಿ ರೂಪಾಯಿಗಳಿಗೆ ಖರೀದಿ ಮಾಡಿದೆ.
ಬೆಂಗಳೂರು : ಈ ಬಾರಿ ಮಾರಾಟಕ್ಕಿದ್ದ ಆರ್ಸಿಬಿ ತಂಡ ಯಾರ ಪಾಲಾಗಲಿದೆ ಎಂಬ ಬಿಲಿಯನ್ ಡಾಲರ್ ಪ್ರಶ್ನೆಗೆ ಕೊನೆಗೂ ಉತ್ತರ ದೊರಕಿದೆ. ದಾಖಲೆಯ ಮೊತ್ತದಲ್ಲಿ ಆರ್ಸಿಬಿ ತಂಡವು ಮಾರಾಟಗೊಳ್ಳುವ ಮೂಲಕ ಕ್ರಿಕೆಟ್ ಲೋಕದಲ್ಲಿಯೇ ಹೊಸ ಇತಿಹಾಸ ಬರೆದಿದೆ.
ಬಿಲಿಯನೇರ್ ಕುಮಾರ್ ಮಂಗಲಂ ಬಿರ್ಲಾ ನೇತೃತ್ವದ ಭಾರತದ ಪ್ರಸಿದ್ಧ ಬಹುರಾಷ್ಟ್ರೀಯ ಸಮೂಹ ಆದಿತ್ಯ ಬಿರ್ಲಾ ಗ್ರೂಪ್ ಆರ್ಸಿಬಿ ತಂಡವನ್ನು 16,896 ಕೋಟಿ ರೂಪಾಯಿಗಳಿಗೆ ಖರೀದಿ ಮಾಡಿದೆ.
ಬಿರ್ಲಾ ಗ್ರೂಪ್ಸ್ ಜೊತೆಯಲ್ಲಿ ಆರ್ಸಿಬಿ ತಂಡದ ಮಾಲೀಕತ್ವದ ಪಾಲುದಾರಿಕೆಯನ್ನು ಅಮೆರಿಕದ ಕ್ರೀಡಾ ಹೂಡಿಕೆದಾರರಾದ ಡೇವಿಡ್ ಬ್ಲಿಟ್ಜರ್, ಅಮೆರಿಕದ ಖಾಸಗಿ ಇಕ್ವಿಟಿ ಸಂಸ್ಥೆ ಬ್ಲಾಕ್‌ಸ್ಟೋನ್ ಮತ್ತು ಟೈಮ್ಸ್ ಆಫ್ ಇಂಡಿಯಾ ಕೂಡ ಹೊಂದಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: IPL 2026: “ಈ ಬಾರಿ ಸವಾಲು ಅಷ್ಟು ಸುಲಭವಲ್ಲ : ಸಹ ಆಟಗಾರರಿಗೆ ವಿರಾಟ್ ಕೊಹ್ಲಿ ಖಡಕ್ ಎಚ್ಚರಿಕೆ
ಇನ್ನು ಐಪಿಎಲ್ನ ಮತ್ತೊಂದು ತಂಡ ರಾಜಸ್ಥಾನ ರಾಯಲ್ಸ್ ಕೂಡ ದಾಖಲೆಯ ಮೊತ್ತಕ್ಕೆ ಸೇಲ್ ಆಗಿದೆ. 15297 ಕೋಟಿ ರೂಪಾಯಿಗೆ ರಾಜಸ್ಥಾನ ರಾಯಲ್ಸ್ ತಂಡವನ್ನು ಖರೀದಿ ಮಾಡಲಾಗಿದೆ. ಈ ಮೂಲಕ ಐಪಿಎಲ್ನ ಎರಡು ತಂಡಗಳು ಬಿಲಿಯನ್ ಸ್ಥಾನಕ್ಕೆ ಬಡ್ತಿ ಪಡೆದಿವೆ.
ರಾಜಸ್ಥಾನ ರಾಯಲ್ಸ್ ತಂಡವನ್ನು ಭಾರತೀಯ ಮೂಲದ ಅಮೆರಿಕ ಟೆಕ್ ಉದ್ಯಮಿ ಕಲ್ ಸೋಮಾನಿ ಅವರ ನೇತೃತ್ವದ ತಂಡ ಖರೀದಿ ಮಾಡಿದೆ. ಈ ಮೂಲಕ ರಾಜಸ್ಥಾನ ರಾಯಲ್ಸ್ ಐಪಿಎಲ್ ಪಂದ್ಯಾವಳಿಯ ಎರಡನೇ ದುಬಾರಿ ತಂಡ ಎನಿಸಿದೆ.



