ವೈಭವ್ ಸೂರ್ಯವಂಶಿಗೆ ಬಿಸಿಸಿಐ ವಿಶೇಷ ಗಿಫ್ಟ್: ಪೋಷಕರೊಂದಿಗೆ ವಿದೇಶ ಪ್ರವಾಸಕ್ಕೆ ಗ್ರೀನ್ ಸಿಗ್ನಲ್; ಕ್ರಿಕೆಟ್ ಒತ್ತಡಕ್ಕೆ ಬ್ರೇಕ್!

ಮುಂಬರುವ ಇಂಗ್ಲೆಂಡ್ ಹಾಗೂ ಐರ್ಲೆಂಡ್ ಪ್ರವಾಸಗಳ ವೇಳೆ ವೈಭವ್ ತಮ್ಮ ಪೋಷಕರೊಂದಿಗೆ ಪ್ರಯಾಣಿಸಲು ಮಂಡಳಿ ವಿಶೇಷ ಅನುಮತಿ ಕಲ್ಪಿಸಿದೆ.

ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಡಿಮೆ ವಯಸ್ಸಿಗೆ ಅಪ್ರತಿಮ ಬ್ಯಾಟಿಂಗ್ ಪ್ರದರ್ಶಿಸಿ ರಾಷ್ಟ್ರೀಯ ಟಿ20 ತಂಡಕ್ಕೆ ಆಯ್ಕೆಯಾಗಿರುವ ಬಿಹಾರದ ಉದಯೋನ್ಮುಖ ತಾರೆ ವೈಭವ್ ಸೂರ್ಯವಂಶಿ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭರ್ಜರಿ ಕೊಡುಗೆಯೊಂದನ್ನು ನೀಡಿದೆ. ಮುಂಬರುವ ಇಂಗ್ಲೆಂಡ್ ಹಾಗೂ ಐರ್ಲೆಂಡ್ ಪ್ರವಾಸಗಳ ವೇಳೆ ವೈಭವ್ ತಮ್ಮ ಪೋಷಕರೊಂದಿಗೆ ಪ್ರಯಾಣಿಸಲು ಮಂಡಳಿ ವಿಶೇಷ ಅನುಮತಿ ಕಲ್ಪಿಸಿದೆ. ಸಾಮಾನ್ಯವಾಗಿ ಹಿರಿಯರ ತಂಡದ ಪ್ರವಾಸಗಳಲ್ಲಿ ಇಂತಹ ನಿಯಮಗಳು ಇರುವುದಿಲ್ಲವಾದರೂ, ವೈಭವ್ ಅವರ ವಯಸ್ಸನ್ನು ಪರಿಗಣಿಸಿ ಈ ವಿನಾಯಿತಿ ನೀಡಲಾಗಿದೆ.

ಇದನ್ನೂ ಓದಿ : “ಬ್ಯಾಟ್‌ನಲ್ಲಿ ಚಿಪ್‌ ಇದೆ ಅಂದವರಿಗೆ ಬ್ಯಾಟ್‌ನಲ್ಲೇ ಉತ್ತರ ಕೊಟ್ಟ ವೈಭವ್​ ಸೂರ್ಯವಂಶಿ !

ಪ್ರಸ್ತುತ ಕೇವಲ 15 ವರ್ಷದ ಅಪ್ರಾಪ್ತ ಬಾಲಕನಾಗಿರುವ ವೈಭವ್ ಅವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ವಾತಾವರಣ ತೀರಾ ಹೊಸದಾಗಿದೆ. ಹಿರಿಯ ಆಟಗಾರರ ನಡುವೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವಾಗ ಹಾಗೂ ಜಾಗತಿಕ ಮಟ್ಟದ ಪಂದ್ಯಗಳ ಒತ್ತಡವನ್ನು ನಿಭಾಯಿಸುವಾಗ ಅವರಿಗೆ ಮಾನಸಿಕ ಧೈರ್ಯ ತುಂಬಲು ಕುಟುಂಬದ ಸದಸ್ಯರು ಜೊತೆಗಿರಬೇಕಾದುದು ಅತ್ಯಗತ್ಯ ಎಂದು ಬಿಸಿಸಿಐ ಭಾವಿಸಿದೆ. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ಬಗ್ಗೆ ಮಾತನಾಡಿ, ವೈಭವ್ ಅವರ ಮಾನಸಿಕ ನೆಮ್ಮದಿಯ ದೃಷ್ಟಿಯಿಂದ ಈ ಹೆಜ್ಜೆ ಇಡಲಾಗಿದ್ದು, ಇದು ಕೇವಲ ಈ ಆಟಗಾರನಿಗೆ ಮಾತ್ರ ಸೀಮಿತವಾಗಿರುವ ಅಪರೂಪದ ವಿನಾಯಿತಿಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ : Shreyas Iyer T20I Captain: ಭಾರತ ಟಿ20 ತಂಡಕ್ಕೆ ಶ್ರೇಯಸ್ ಅಯ್ಯರ್‌ ನಾಯಕ : ರೋಹಿತ್‌ -ಸೂರ್ಯ ಬಿಗ್ ರಿಯಾಕ್ಷನ್

ವೈಭವ್ ಸೂರ್ಯವಂಶಿ ಅವರ ಇತ್ತೀಚಿನ ಐಪಿಎಲ್ ಪ್ರದರ್ಶನ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಟೂರ್ನಿಯುದ್ದಕ್ಕೂ ಭರ್ಜರಿ ಫಾರ್ಮ್‌ನಲ್ಲಿದ್ದ ಅವರು ಬರೋಬ್ಬರಿ 776 ರನ್ ಸಿಡಿಸುವ ಮೂಲಕ ಆರೆಂಜ್ ಕ್ಯಾಪ್ ಹಾಗೂ ಟೂರ್ನಿಯ ಅತ್ಯಮೂಲ್ಯ ಆಟಗಾರ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದರು. ಈ ಅಸಾಧಾರಣ ಆಟದ ನೆರವಿನಿಂದಲೇ ಅವರಿಗೆ ಭಾರತ ತಂಡದ ಬಾಗಿಲು ತೆರೆದಿದೆ. ಸದ್ಯ ಶ್ರೀಲಂಕಾದಲ್ಲಿ ಭಾರತ ‘ಎ’ ತಂಡದೊಂದಿಗೆ ಸರಣಿಯಲ್ಲಿ ಪಾಲ್ಗೊಂಡಿರುವ ಇವರನ್ನು ಶೀಘ್ರದಲ್ಲೇ ಅವರ ತಂದೆ ಕೂಡ ಅಲ್ಲಿ ಭೇಟಿಯಾಗಲಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನ ಈ ಅಗ್ನಿಪರೀಕ್ಷೆಯಲ್ಲಿ ವೈಭವ್ ಹೇಗೆ ಮಿಂಚಲಿದ್ದಾರೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories