Shreyas Iyer T20I Captain: ಭಾರತ ಟಿ20 ತಂಡಕ್ಕೆ ಶ್ರೇಯಸ್ ಅಯ್ಯರ್ ನಾಯಕ : ರೋಹಿತ್ -ಸೂರ್ಯ ಬಿಗ್ ರಿಯಾಕ್ಷನ್
ಹೊಸ ನಾಯಕನಾಗಿ ಆಯ್ಕೆಯಾಗಿರುವ ಶ್ರೇಯಸ್ ಅಯ್ಯರ್ ಅವರಿಗೆ ಆರಂಭದಲ್ಲೇ ಬಿಸಿಸಿಐ ಮೂರು ಪ್ರಮುಖ ಸರಣಿಗಳ ಹೊಣೆಗಾರಿಕೆಯನ್ನು ನೀಡಿದೆ. ಜೂನ್ ಕೊನೆಯ ವಾರದಿಂದ ಆರಂಭವಾಗಲಿರುವ ಪ್ರವಾಸಗಳಲ್ಲಿ ಅಯ್ಯರ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ:

ಮುಂಬೈ: ಭಾರತದ ಕ್ರಿಕೆಟ್ ತಂಡದ ನಾಯಕತ್ವಕ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ಚರ್ಚೆಗೆ ಬಿಸಿಸಿಐ ಕೊನೆಗೂ ಬ್ರೇಕ್ ಹಾಕಿದೆ. ಭಾರತ ಕೈಗೊಳ್ಳಲಿರುವ ಮೂರು ಟಿ20 ಸರಣಿಗಳಿಗೆ ಶ್ರೇಯಸ್ ಅಯ್ಯರ್ (Shreyas Iyer) ಅವರನ್ನು ಅಧಿಕೃತ ನಾಯಕರನ್ನಾಗಿ ನೇಮಕ ಮಾಡಿದೆ. ಇದರ ಬೆನ್ನಲ್ಲೇ ಮಾಜಿ ನಾಯಕರಾದ ರೋಹಿತ್ ಶರ್ಮಾ ಹಾಗೂ ಸೂರ್ಯ ಕುಮಾರ್ ಯಾದವ್ ಮಹತ್ವದ ಹೇಳಿಕೆ ನೀಡಿರುವುದು ಕ್ರಿಕೆಟ್ ವಲಯದಲ್ಲಿ ಚರ್ಚೆ ಹುಟ್ಟು ಹಾಕಿದೆ.
ಕಳಪೆ ಫಾರ್ಮ್ ಹಿನ್ನೆಲೆಯಲ್ಲಿ ಬಿಸಿಸಿಐ ಸೂರ್ಯಕುಮಾರ್ ಯಾದವ್ಗೆ ಕೋಕ್ ನೀಡಿದೆ. ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಐರ್ಲೆಂಡ್, ಇಂಗ್ಲೆಂಡ್ ಹಾಗೂ ಏಷ್ಯನ್ ಕಪ್ಗೆ ಭಾರತ ತಂಡವನ್ನು ಪ್ರಕಟಿಸಿದೆ. ಭಾರತ ಟಿ20 ತಂಡಕ್ಕೆ ಶ್ರೇಯಸ್ ಅಯ್ಯರ್ ಅವರನ್ನು ನಾಯಕನನ್ನಾಗಿ ನೇಮಕ ಮಾಡಿದೆ.
ಶ್ರೇಯಸ್ ಅಯ್ಯರ್ ನಾಯಕನಾಗಿ ಆಯ್ಕೆಯಾಗುತ್ತಲೇ ರೋಹಿತ್ ಶರ್ಮಾ ಹಾಗೂ ಮಾಜಿ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಅವರು ಮುಂಬೈನಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವಕ್ಕೆ ಸಂಪೂರ್ಣ ಬೆಂಬಲ ಸೂಚಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಹೊಸ ನಾಯಕನಾಗಿ ಆಯ್ಕೆಯಾಗಿರುವ ಶ್ರೇಯಸ್ ಅಯ್ಯರ್ ಅವರಿಗೆ ಆರಂಭದಲ್ಲೇ ಬಿಸಿಸಿಐ ಮೂರು ಪ್ರಮುಖ ಸರಣಿಗಳ ಹೊಣೆಗಾರಿಕೆಯನ್ನು ನೀಡಿದೆ. ಜೂನ್ ಕೊನೆಯ ವಾರದಿಂದ ಆರಂಭವಾಗಲಿರುವ ಪ್ರವಾಸಗಳಲ್ಲಿ ಅಯ್ಯರ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ:
- ಐರ್ಲೆಂಡ್ ಪ್ರವಾಸ: ಜೂನ್ 26 ಮತ್ತು 28 ರಂದು ನಡೆಯಲಿರುವ 2 ಪಂದ್ಯಗಳ ಟಿ20 ಸರಣಿ.
- ಇಂಗ್ಲೆಂಡ್ ಪ್ರವಾಸ: ಜುಲೈ 1 ರಿಂದ ಜುಲೈ 11 ರವರೆಗೆ ನಡೆಯಲಿರುವ 5 ಪಂದ್ಯಗಳ ಹೈವೋಲ್ಟೇಜ್ ಟಿ20 ಸರಣಿ.
- ಏಷ್ಯನ್ ಗೇಮ್ಸ್ 2026: ಜಪಾನ್ನಲ್ಲಿ ಸೆಪ್ಟೆಂಬರ್ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ನಲ್ಲೂ ಶ್ರೇಯಸ್ ಅಯ್ಯರ್ ಅವರೇ ಭಾರತ ತಂಡದ ಕ್ಯಾಪ್ಟನ್ ಆಗಿರಲಿದ್ದಾರೆ.
ಮುಂಬೈ ಕ್ರಿಕೆಟ್ ಹೆಮ್ಮೆಪಡುವ ವಿಚಾರ : ರೋಹಿತ್ ಮತ್ತು ಸೂರ್ಯ ಕುಮಾರ್
ಜೂನ್ 7ರ ಭಾನುವಾರ ರಾತ್ರಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಟಿ20 ಮುಂಬೈ ಲೀಗ್ ಪಂದ್ಯದ ವೇಳೆ ರೋಹಿತ್ ಶರ್ಮಾ, ಸೂರ್ಯಕುಮಾರ್ ಮತ್ತು ಶ್ರೇಯಸ್ ಅಯ್ಯರ್ ಮುಖಾಮುಖಿಯಾಗಿದ್ದರು. ಈ ವೇಳೆ ಮಾತನಾಡಿದ ರೋಹಿತ್ ಶರ್ಮಾ, ಮುಂಬೈನಲ್ಲಿ ಕ್ರಿಕೆಟ್ ಆಡುವುದು ಸುಲಭವಲ್ಲ, ಇಲ್ಲಿ ಪ್ರತಿಯೊಂದನ್ನೂ ಕಷ್ಟಪಟ್ಟು ಗಳಿಸಬೇಕು. ನಾಯಕತ್ವ ಎನ್ನುವುದು ಶ್ರೇಯಸ್ ತನ್ನ ಕಠಿಣ ಪರಿಶ್ರಮದಿಂದ ಗಳಿಸಿಕೊಂಡಿರುವ ಗೌರವ. ಅವನು ತಂಡವನ್ನು ಯಶಸ್ವಿಯಾಗಿ ಮುನ್ನಡೆಸಲಿದ್ದಾನೆ” ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ.
Also Read : Vaibhav suryavanshi : ಸಚಿನ್ 36 ವರ್ಷದ ರೆಕಾರ್ಡ್ ಬ್ರೇಕ್: ಇಲ್ಲಿದೆ ವೈಭವ್ ಸೂರ್ಯವಂಶಿ ಕಣ್ಣೀರ ಕಥೆ
ಮತ್ತೊಂದೆಡೆಯಲ್ಲಿ ನಾಯಕತ್ವ ಕೈತಪ್ಪಿದರೂ ಕೂಡ ಬೇಸರ ಪಡದ ಸೂರ್ಯಕುಮಾರ್ ಕುಮಾರ್ ಯಾದವ್ ತಮ್ಮ ಸಹ ಆಟಗಾರನ ಯಶಸ್ಸಿಗೆ ಬಾರೀ ಸಂತೋಷ ವ್ಯಕ್ತಪಡಿಸಿದ್ದಾರೆ. ನನ್ನ ಮುಂಬೈ ಗೆಳೆಯ ಭಾರತ ತಂಡದ ನಾಯಕನಾಗಿರುವುದಕ್ಕೆ ನನಗೆ ಅತ್ಯಂತ ಹೆಮ್ಮೆಯಿದೆ ಎಂದು ಸೂರ್ಯ ಹೇಳಿರುವುದು ಕ್ರಿಕೆಟ್ ವಲಯದಲ್ಲಿ ಸೌಹಾರ್ದತೆಗೆ ಸಾಕ್ಷಿಯಾಗಿದೆ.
ಯಾರಿಗೆಲ್ಲಾ ಸಿಕ್ಕಿದೆ ಟಿ20 ತಂಡದಲ್ಲಿ ಚಾನ್ಸ್ ?
ಶ್ರೇಯಸ್ ಅಯ್ಯರ್ ಸಾರಥ್ಯದ ಭಾರತ ಟಿ20 ತಂಡದಲ್ಲಿ ಐಪಿಎಲ್ 2026 ರಲ್ಲಿ ಧೂಳೆಬ್ಬಿಸಿದ ಯುವ ಆಟಗಾರರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದ ಕಂಪ್ಲೀಟ್ ಟೀಮ್ ಹೀಗಿದೆ:
ಟೀಮ್ ಇಂಡಿಯಾ ಟಿ20 : ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಸಿರಾಜ್, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್ ಮತ್ತು ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ.
Shreyas iyer official india t20 captain bcci squad announcement rohit sharma reaction



