ಐಪಿಎಲ್ ಬೆನ್ನಲ್ಲೇ ಟೆಸ್ಟ್ ಪಂದ್ಯಕ್ಕೆ ಸಜ್ಜಾದ ಟೀಂ ಇಂಡಿಯಾ : ಕೆಎಲ್ ರಾಹುಲ್ ಜೊತೆ ಪ್ಲೇಯಿಂಗ್ XI ಇಲ್ಲಿದೆ
ಭಾರತ ತಂಡ ಶ್ರೀಲಂಕಾ, ನ್ಯೂಜಿಲೆಂಡ್ ಹಾಗೂ ಬಾರ್ಡರ್ -ಗವಾಸ್ಕರ್ ಟ್ರೋಫಿಯನ್ನು ಆಡಲಿದೆ. ಇದಕ್ಕಾಗಿ ಟೀ ಇಂಡಿಯಾವನ್ನು ಸಜ್ಜುಗೊಳಿಸಬೇಕಾಗಿದೆ. ಹೀಗಾಗಿ ಅಪ್ಘಾನಿಸ್ತಾನ ವಿರುದ್ದದ ಏಕೈಕ ಟೆಸ್ಟ್ ಪಂದ್ಯ ನಮಗೆ ಮುಖ್ಯವಾಗಿದೆ ಎಂದು ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ತಿಳಿಸಿದ್ದಾರೆ.

ಚಂಡೀಗಢ: ಇಂಡಿಯನ್ ಪ್ರೀಮಿಯರ್ ಲೀಗ್ ಮುಗಿದು ಒಂದು ವಾರ ಕಳೆದಿದೆ. ಇದೀಗ ಟೀಂ ಇಂಡಿಯಾ ಟೆಸ್ಟ್ ಪಂದ್ಯವನ್ನಾಡಲು ಸಜ್ಜಾಗಿದೆ. ನಾಳೆ ಜೂನ್ 6 ರಿಂದ (ಶನಿವಾರ) ಚಂಡೀಗಢದ ಮುಲ್ಲನ್‌ಪುರದಲ್ಲಿ ಪ್ರವಾಸಿ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ಪಂದ್ಯ ಟೀಮ್ ಇಂಡಿಯಾ ಹೊಸ ಸವಾಲಿಗೆ ಸಜ್ಜಾಗಿದೆ.
ಭಾರತ ತಂಡ ಶ್ರೀಲಂಕಾ, ನ್ಯೂಜಿಲೆಂಡ್ ಹಾಗೂ ಬಾರ್ಡರ್ -ಗವಾಸ್ಕರ್ ಟ್ರೋಫಿಯನ್ನು ಆಡಲಿದೆ. ಇದಕ್ಕಾಗಿ ಟೀ ಇಂಡಿಯಾವನ್ನು ಸಜ್ಜುಗೊಳಿಸಬೇಕಾಗಿದೆ. ಹೀಗಾಗಿ ಅಪ್ಘಾನಿಸ್ತಾನ ವಿರುದ್ದದ ಏಕೈಕ ಟೆಸ್ಟ್ ಪಂದ್ಯ ನಮಗೆ ಮುಖ್ಯವಾಗಿದೆ ಎಂದು ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ತಿಳಿಸಿದ್ದಾರೆ.
ಟೀಮ್ ಇಂಡಿಯಾಕ್ಕೆ ಕೆಎಲ್ ರಾಹುಲ್ ಉಪ ನಾಯಕ
ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಭಾರತ ಕ್ರಿಕೆಟ್ ತಂಡ ಕಣಕ್ಕೆ ಇಳಿಯುತ್ತಿದೆ. ಕರ್ನಾಟಕದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಟೀ ಇಂಡಿಯಾದ ಉಪ ನಾಯಕರಾಗಿದ್ದು, ಯಶಸ್ವಿ ಜೈಸ್ವಾಲ್ ಜೊತೆಗೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
ಆದರೆ ಮೂರನೇ ಕ್ರಮಾಂಕದಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಬದಲು ಸಾಯಿ ಸುದರ್ಶನ್‌ಗೆ ಅವಕಾಶ ಕಲ್ಪಿಸುವ ಸಾಧ್ಯತೆಯಿದೆ. ಉಳಿದಂತೆ ರಿಷಬ್ ಪಂತ್ ವಿಕೆಟ್ ಕೀಪರ್ ಆಗಿ ಕಣಕ್ಕೆ ಇಳಿಯಲಿದ್ದಾರೆ. ಉಳಿದಂತೆ ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್ ಹಾಗೂ ಮೂರನೇ ಸ್ಪಿನ್ನರ್ ಸ್ಥಾನಕ್ಕೆ ಮಾನವ್ ಸುತಾರ್ ಮತ್ತು ಹರ್ಷ ದುಬೆ ಅವರ ನಡುವೆ ಪೈಪೋಟಿಯಿದೆ.
ಪಿಚ್ ರಿಪೋರ್ಟ್, ಹವಾಮಾನ ವರದಿ
ಭಾರತ – ಅಪ್ಘಾನಿಸ್ತಾನ ವಿರುದ್ದ ಪಂದ್ಯವು ನೂತನ ‘ಮಹಾರಾಜ ಯಾದವೀಂದ್ರ ಸಿಂಗ್ ಇಂಟರ್ನ್ಯಾಷನಲ್ ಸ್ಟೇಡಿಯಂ’ (ಮುಲ್ಲನ್‌ಪುರ) ನಲ್ಲಿ ನಡೆಯುತ್ತಿದ್ದು, ಈ ಕ್ರೀಡಾಂಗಣ ಇತಿಹಾಸದಲ್ಲಿಯೇ ಮೊದಲ ಟೆಸ್ಟ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಪಿಚ್ ಮೇಲೆ ಸ್ವಲ್ಪ ಹಸಿರು ಹುಲ್ಲು ಕಾಣಿಸುತ್ತಿದ್ದರೂ, ಚಂಡೀಗಢದ ಭೀಕರ ಶಾಖಕ್ಕೆ (38 ರಿಂದ 42 ಡಿಗ್ರಿ ಸೆಲ್ಸಿಯಸ್) ಪಿಚ್ ಬೇಗನೇ ಒಣಗಿ ಸ್ಪಿನ್ನರ್‌ಗಳಿಗೆ ಭಾರಿ ನೆರವು ನೀಡುವ ನಿರೀಕ್ಷೆಯಿದೆ. ಅದ್ರಲ್ಲೂ ಸುಡು ಬಿಸಿಲಿನಲ್ಲಿ ಐದು ದಿನದ ಪಂದ್ಯ ಆಡುವುದು ಆಟಗಾರರ ದೈಹಿಕ ಸಾಮರ್ಥ್ಯಕ್ಕೆ ದೊಡ್ಡ ಸವಾಲಾಗಲಿದೆ.
Also Read : ಆರ್‌ಸಿಬಿ ಸೇರ್ತಾರಾ ವೈಭವ್ ಸೂರ್ಯವಂಶಿ ? IPL 2027 ಹರಾಜಿನ ನಿಯಮಗಳೇನು?
ಅಫ್ಘಾನಿಸ್ತಾನಕ್ಕೆ ‘ರಿಚರ್ಡ್ ಪೈಬಸ್’ ಹೊಸ ಸಾರಥಿ
ವೆಸ್ಟ್ ಇಂಡೀಸ್ ಕ್ರಿಕೆಟ್‌ನ ಮಾಜಿ ನಿರ್ದೇಶಕ ರಿಚರ್ಡ್ ಪೈಬಸ್ ಇದೀಗ ಅಫ್ಘಾನಿಸ್ತಾನ ತಂಡದ ಮುಖ್ಯ ತರಬೇತುದಾರರಾಗಿ ಈ ಪಂದ್ಯದ ಮೂಲಕ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಗೈರುಹಾಜರಿಯಲ್ಲೂ ಖೈಸ್ ಅಹ್ಮದ್ ಮತ್ತು ಶರಾಫುದ್ದೀನ್ ಅಶ್ರಫ್ ಅವರಂತಹ ಗುಣಮಟ್ಟದ ಸ್ಪಿನ್ನರ್ಸ್ ಆಫ್ಘನ್ ತಂಡದಲ್ಲಿದ್ದಾರೆ. ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಜಗತ್ತನ್ನೇ ನಡುಗಿಸಿರುವ ಅಫ್ಘಾನಿಸ್ತಾನ, ಈಗ ರೆಡ್-ಬಾಲ್ ಕ್ರಿಕೆಟ್‌ನಲ್ಲೂ ತನ್ನ ಛಾಪು ಮೂಡಿಸಲು ಕಾತರರಾಗಿದ್ದಾರೆ.
2018 ರಲ್ಲಿ ಭಾರತದ ವಿರುದ್ಧವೇ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅಫ್ಘಾನಿಸ್ತಾನ, ಇದುವರೆಗೆ ಕೇವಲ 12 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 4 ಗೆಲುವು ಹಾಗೂ 7 ಸೋಲು ಕಂಡಿದೆ. 2018 ರ ಆ ಚೊಚ್ಚಲ ಟೆಸ್ಟ್ ಆಡಿದ್ದ ಭಾರತ ತಂಡದ ಪೈಕಿ ಪ್ರಸ್ತುತ ತಂಡದಲ್ಲಿ ಉಳಿದಿರುವ ಏಕೈಕ ಆಟಗಾರ ಎಂದರೆ ಅದು ಕೆ.ಎಲ್. ರಾಹುಲ್ ಮಾತ್ರ.
ಭಾರತ – ಅಪ್ಘಾನಿಸ್ತಾನ : ಸಂಭಾವ್ಯ ಪ್ಲೇಯಿಂಗ್ XI (Probable XI)
ಭಾರತ ಪ್ಲೇಯಿಂಗ್ XI : ಕೆ.ಎಲ್. ರಾಹುಲ್ ( ಉಪನಾಯಕ), ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಶುಭ್‌ಮನ್ ಗಿಲ್ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ನಿತೀಶ್ ರೆಡ್ಡಿ, ಹರ್ಷ್ ದುಬೆ / ಮಾನವ್ ಸುತಾರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಅಫ್ಘಾನಿಸ್ತಾನ ಪ್ಲೇಯಿಂಗ್ XI : ಅಬ್ದುಲ್ ಮಲಿಕ್, ರಹಮಾನುಲ್ಲಾ ಗುರ್ಬಾಜ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ಸಿದ್ದೀಕುಲ್ಲಾ ಅಟಲ್, ಅಫ್ಸರ್ ಜಜಾಯ್ (ವಿಕೆಟ್ ಕೀಪರ್), ಅಜ್ಮತುಲ್ಲಾ ಒಮರ್ಜಾಯ್, ಶರಾಫುದ್ದೀನ್ ಅಶ್ರಫ್, ಖೈಸ್ ಅಹ್ಮದ್, ಜಿಯಾ ಶರೀಫಿ, ನಂಗೇಯಾಲಿಯಾ ಖರೋಟೆ.
ಪಂದ್ಯದ ಸಮಯ: ಜೂನ್ 6 ರಿಂದ 10 ರವರೆಗೆ, ಪ್ರತಿದಿನ ಬೆಳಿಗ್ಗೆ 9:30 ಕ್ಕೆ ಆರಂಭ.
ಭಾರತ ತಂಡ: ಶುಭ್‌ಮನ್ ಗಿಲ್ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ) , ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ಹರ್ಷ್ ದುಬೆ, ಮಾನವ್ ಸುತಾರ್.
ಅಫ್ಘಾನಿಸ್ತಾನ ತಂಡ: ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಾಜ್, ರಹಮತ್ ಶಾ, ಅಬ್ದುಲ್ ಮಲಿಕ್, ಅಜ್ಮತುಲ್ಲಾ ಒಮರ್ಜಾಯ್, ಅಫ್ಸರ್ ಜಜಾಯ್ (ವಿಕೆಟ್ ಕೀಪರ್), ಇಕ್ರಾಮ್ ಅಲಿಖೇಲ್, ಸಿದ್ದೀಕುಲ್ಲಾ ಅಟಲ್, ರಹಮಾನುಲ್ಲಾ, ಶರಾಫುದ್ದೀನ್ ಅಶ್ರಫ್, ಖೈಸ್ ಅಹ್ಮದ್, ನಂಗೇಯಾಲಿಯಾ ಖರೋಟೆ, ಜಿಯಾವುರ್ ರೆಹಮಾನ್ ಶರೀಫಿ, ಬಿಲಾಲ್ ಸಾಮಿ, ಮೊಹಮ್ಮದ್ ಸಲೀಮ್ ಸಫಿ.
india vs Afghanistan test squad 2026 kl Rahul shubman gill Playing 11



