Maharaja Trophy KSCA T20 Auction 2026 : 2 ಲಕ್ಷ ಮೂಲ ಬೆಲೆ ಇದ್ರೂ ಕೆಎಲ್‌ ರಾಹುಲ್‌ ಖರೀದಿಸದ ಪ್ರಾಂಚೈಸಿಗಳು, ಇಲ್ಲಿದೆ ಅಸಲಿ ಕಾರಣ

Maharaja Trophy Auction 2026 :  ಬೆಂಗಳೂರು : ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಅಬ್ಬರಿಸಿದ್ದ ಕೆಎಲ್‌ ರಾಹುಲ್‌ ಇದೀಗ ಮಹಾರಾಜ ಟ್ರೋಫಿಯಲ್ಲಿ ಅನ್‌ಸೋಲ್ಡ್‌ ಆಗಿದ್ದಾರೆ. 2 ಲಕ್ಷ ರೂಪಾಯಿ ಮೂಲ ಬೆಲೆ ಹೊಂದಿದ್ದರೂ ಕೂಡ ಯಾವೊಂದು ಪ್ರಾಂಚೈಸಿ ಕೂಡ ಕೆಎಲ್‌ ರಾಹುಲ್‌ ಅವರನ್ನು ಖರೀದಿ ಮಾಡಿಲ್ಲ.

Maharaja Trophy KSCA T20 Auction 2026 :  ಬೆಂಗಳೂರು : ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಅಬ್ಬರಿಸಿದ್ದ ಕೆಎಲ್‌ ರಾಹುಲ್‌ ಇದೀಗ ಮಹಾರಾಜ ಟ್ರೋಫಿಯಲ್ಲಿ ಅನ್‌ಸೋಲ್ಡ್‌ ಆಗಿದ್ದಾರೆ. 2 ಲಕ್ಷ ರೂಪಾಯಿ ಮೂಲ ಬೆಲೆ ಹೊಂದಿದ್ದರೂ ಕೂಡ ಯಾವೊಂದು ಪ್ರಾಂಚೈಸಿ ಕೂಡ ಕೆಎಲ್‌ ರಾಹುಲ್‌ ಅವರನ್ನು ಖರೀದಿ ಮಾಡಿಲ್ಲ. ಅಷ್ಟಕ್ಕೂ ಟೀಂ ಇಂಡಿಯಾದ ಖ್ಯಾತ ಆಟಗಾರ ಮಹಾರಾಜ ಟ್ರೋಫಿಯಲ್ಲಿ ಹರಾಜಿನಲ್ಲಿ ಅನ್‌ಸೋಲ್ಡ್‌ ಆಗಿದ್ದು ಯಾಕೆ ಅನ್ನೋ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ.

ಕೆಎಲ್‌ ರಾಹುಲ್‌ ಐಪಿಎಲ್‌ 2026ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಪ್ರತಿನಿಧಿಸಿದ್ದು, 14 ಪಂದ್ಯಗಳಲ್ಲಿ 593 ರನ್‌ ಬಾರಿಸಿದ್ದರು, ಇದರಲ್ಲಿ ಒಂದು ಶತಕ ಒಳಗೊಂಡಿತ್ತು. ಕೆಎಲ್‌ ರಾಹುಲ್‌ ಅವರು ಸತತವಾಗಿ ಕ್ರಿಕೆಟ್‌ ಆಡುತ್ತಿರುವುದರಿಂದ ಮುಂಬರುವ ಆಂತರಾಷ್ಟ್ರೀಯ ಸರಣಿಗಾಗಿ ತಮ್ಮ ವರ್ಕ್‌ ಲೋಡ್‌ ಮ್ಯಾನೇಜ್‌ ಮಾಡಲು ಬಯಸಿದ್ದಾರೆ.

ಇನ್ನು ಮಹಾರಾಜ ಟ್ರೋಫಿ ಜೂನ್‌ 12ರಿಂದ ಜುಲೈ 12ರ ವರೆಗೆ ನಡೆಯಲಿದೆ. ಈ ಸಮಯದಲ್ಲಿ ಕೆಎಲ್‌ ರಾಹುಲ್‌ ರಾಷ್ಟ್ರೀಯ ತಂಡದ ಭಾಗವಾಗಿ ಇರಲಿದ್ದಾರೆ. ಹೀಗಾಗಿ ಅವರು ಮಹಾರಾಜ ಟ್ರೋಫಿಯ ಬಹುತೇಕ ಪಂದ್ಯಗಳಿಗೆ ಕೆಎಲ್‌ ರಾಹುಲ್‌ ಅಲಭ್ಯರಾಗಲಿದ್ದಾರೆ.

Also Read : ಮಹಾರಾಜ ಟ್ರೋಫಿ 2026 : ಕೆಎಲ್‌ ರಾಹುಲ್‌ ಅನ್‌ಸೋಲ್ಡ್‌ : ಯಾವ ಆಟಗಾರ, ಯಾವ ತಂಡಕ್ಕೆ

ಜೂನ್‌ ಹಾಗೂ ಜುಲೈ ತಿಂಗಳಿನಲ್ಲಿ ರಾಹುಲ್‌ ಅವರು ಟೀಂ ಇಂಡಿಯಾದ ಸರಣಿಯಲ್ಲಿ ಬ್ಯುಸಿ ಆಗಿರಲಿದ್ದಾರೆ. ಅಪ್ಘಾನಿಸ್ತಾನ ವಿರುದ್ದದ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಉಪನಾಯಕರಾಗಿದ್ದಾರೆ. ಅಲ್ಲದೇ ಅಪ್ಘಾನಿಸ್ತಾನ ವಿರುದ್ದದ ಏಕದಿನ ಸರಣಿಯ ಜೊತೆಗೆ ಇಂಗ್ಲೆಂಡ್‌ ವಿರುದ್ದ ಪ್ರವಾಸದಲ್ಲಿಯೂ ಕೆಎಲ್‌ ರಾಹುಲ್‌ ಟೀಂ ಇಂಡಿಯಾದ ಜೊತೆಗೆ ಇರಲಿದ್ದಾರೆ.

ಮಹಾರಾಜ ಟ್ರೋಫಿಯಲ್ಲಿ ಈ ಬಾರಿ ಕರ್ನಾಟಕ ರಣಜಿ ತಂಡದ ಆಟಗಾರರು ಹಾಗೂ ಐಪಿಎಲ್‌ ತಂಡದ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಅದ್ರಲ್ಲೂ ಟೂರ್ನಿಗೆ ಪೂರ್ಣ ಪ್ರಮಾಣದಲ್ಲಿ ಲಭ್ಯ ಇರದ ಆಟಗಾರನ ಮೇಲೆ ಯಾವ ತಂಡಗಳು ಕೂಡ ಹೂಡಿಕೆ ಮಾಡುವುದಿಲ್ಲ. ಮಹಾರಾಜ ಟ್ರೋಫಿಯ ಅವಧಿಯಲ್ಲಿ ಕೆಎಲ್‌ ರಾಹುಲ್‌ ಬ್ಯುಸಿ ಆಗಿರುವ ಕಾರಣದಿಂದಲೇ ಅವರು ಮಹಾರಾಜ ಟ್ರೋಫಿಯ ಹರಾಜಿನಲ್ಲಿ ಅನ್‌ ಸೋಲ್ಡ್‌ ಆಗಿದ್ದಾರೆ ಎನ್ನಲಾಗುತ್ತಿದೆ.

Also Read : RCB vs GT IPL 2026 Final: ಸತತ 2ನೇ ಬಾರಿ ಟ್ರೋಫಿ ಗೆದ್ದ RCB; ಯಾರಿಗೆ ಸಿಕ್ತು Tata EV ಕಾರ್?

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories