Rohit Sharma Retirement : ರೋಹಿತ್‌ ಶರ್ಮಾ ನಿವೃತ್ತಿಗೆ ಬ್ರೇಕ್‌ ಹಾಕಿದ ಬಿಸಿಸಿಐ

ಭಾರತ ಕ್ರಿಕೆಟ್‌ ತಂಡ ದಲ್ಲಿ ರೊಟೇಷನ್‌ ಪದ್ದತಿಯನ್ನು ಜಾರಿಗೆ ತರುವ ಕುರಿತು ಕೋಚ್‌ ಗೌತಮ್‌ ಗಂಭೀರ್‌ ಹಾಗೂ ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್‌ ಅಗರ್‌ಕರ್‌ ಅವರು ಯೋಜನೆ ರೂಪಿಸಿದ್ದಾರೆ.

Rohit Sharma Retirement: : ಮುಂಬೈ: ಇಂಗ್ಲೆಂಡ್‌ ಪ್ರವಾಸದಲ್ಲಿರುವ ಹಿಟ್‌ ಮ್ಯಾನ್‌ ರೋಹಿತ್‌ ಶರ್ಮಾ ( Rohit Sharma)  ವಿಚಾರದಲ್ಲಿ ಬಿಸಿಸಿಐ ( BCCI)  ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಇಂಗ್ಲೆಂಡ್‌ ವಿರುದ್ದದ ಮೂರನೇ ಏಕದಿನ ಪಂದ್ಯದ ವೇಳೆಯಲ್ಲಿ ರೋಹಿತ್‌ ಶರ್ಮಾ ನಿವೃತ್ತಿ ಘೋಷಣೆ ಮಾಡ್ತಾರೆ ಅನ್ನೋ ವದಂತಿಯನ್ನು ಬಿಸಿಸಿಐ ತಳ್ಳಿ ಹಾಕಿದೆ. ಬಿಸಿಸಿಐ ಆಡಳಿತ ಮಂಡಳಿಯ ಕಾರ್ಯದರ್ಶಿ ದೇವಜಿತ್‌ ಸೈಕಿಯಾ ಅವರು, ರೋಹಿತ್‌ ಶರ್ಮಾ ಟೀಂ ಇಂಡಿಯಾದಲ್ಲೇ ಮುಂದುವರಿಯುವ ಸುಳಿವು ಕೊಟ್ಟಿದ್ದಾರೆ.

ಇಂಗ್ಲೆಂಡ್‌ನ ಲಾರ್ಡ್ಸ್‌ ಅಂಗಳದಲ್ಲಿಯೇ ರೋಹಿತ್‌ ಶರ್ಮಾ ಅವರು ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಹೇಳ್ತಾರೆ ಅನ್ನೋ ಸುದ್ದಿ ಎಲ್ಲೆಡೆಯಲ್ಲಿಯೂ ಹದಿದಾಡಿತ್ತು. ಆದರೆ ಇಂಗ್ಲೆಂಡ್‌ ವಿರುದ್ದದ ಅಂತಿಮ ಏಕದಿನ ಪಂದ್ಯ ರೋಹಿತ್‌ ಶರ್ಮಾ ಅವರ ಪಾಲಿಗೆ ವಿದಾಯ ಪಂದ್ಯ ಆಗೋದಿಲ್ಲ ಅನ್ನೋದನ್ನು ಬಿಸಿಸಿಐ ಖಚಿತ ಪಡಿಸಿದೆ.

ಭಾರತ ಕ್ರಿಕೆಟ್‌ ತಂಡ ದಲ್ಲಿ ರೊಟೇಷನ್‌ ಪದ್ದತಿಯನ್ನು ಜಾರಿಗೆ ತರುವ ಕುರಿತು ಕೋಚ್‌ ಗೌತಮ್‌ ಗಂಭೀರ್‌ ಹಾಗೂ ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್‌ ಅಗರ್‌ಕರ್‌ ಅವರು ಯೋಜನೆ ರೂಪಿಸಿದ್ದಾರೆ. ಇದೇ ಕಾರಣದಿಂದಲೇ ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಅವರಿಗೆ ವಿಶ್ರಾಂತಿಯನ್ನು ನೀಡಲಾಗುತ್ತದೆ. ಮುಂಬರುವ ವಿಶ್ವಕಪ್‌ಗೆ ಬದಲಿ ಆಟಗಾರರನ್ನು ಸಿದ್ದಪಡಿಸುವುದು ಈ ಯೋಜನೆ ಉದ್ದೇಶ ಎನ್ನಲಾಗಿತ್ತು.

ಇದೇ ಕಾರಣದಿಂದಲೇ ರೋಹಿತ್‌ ಶರ್ಮಾ ಅವರು ಏಕದಿನ ಕ್ರಿಕೆಟ್‌ಗೂ ವಿದಾಯ ಹೇಳುತ್ತಾರೆ ಎನ್ನಲಾಗಿತ್ತು. ಆದರೆ ನಿವೃತ್ತಿಯನ್ನು ತಳ್ಳಿ ಹಾಕಿರುವ ಬಿಸಿಸಿಐ ಇದೀಗ, ರೋಹಿತ್‌ ಶರ್ಮಾ ಅವರು ಮುಂಬರುವ 2027ರ ವಿಶ್ವಕಪ್‌ನಲ್ಲಿ ಆಡ್ತಾರಾ ಇಲ್ಲವಾ ಅನ್ನೋದು ಅವರ ಫಾರ್ಮ್‌ ಮತ್ತು ದೈಹಿಕ ಫಿಟ್‌ನೆಟ್‌ ಮೇಲೆಯೇ ಅವಲಂಭಿಸಿ ಇರಲಿದೆ. ಈ ಕುರಿತು ಮುಂದೆ ತೀರ್ಮಾ ಕೈಗೊಳ್ಳಲಾಗುತ್ತದೆ ಎಂದು ಸೈಕಿಯಾ ತಿಳಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.

ಟೀಂ ಇಂಡಿಯಾದ ಬ್ಯಾಟಿಂಗ್‌ ಕೋಚ್‌ ಆಗಿರುವ ಸಿತಾಂಶು ಕೋಟಕ್‌ ಅವರು ಕೂಡ ರೋಹಿತ್‌ ಶರ್ಮಾ ಅವರು ಲಾರ್ಡ್ಸ್‌ ಅಂಗಳದಲ್ಲಿ ಭರ್ಜರಿ ಕಂಬ್ಯಾಕ್‌ ಮಾಡಲಿದ್ದಾರೆ ಎಂದಿದ್ದಾರೆ. ಆದರೆ ಹಿಟ್‌ ಮ್ಯಾನ್‌ ನಿವೃತ್ತಿ ಆಗ್ತಾರೆ ಅನ್ನುವ ವದಂತಿಯನ್ನು ತಳ್ಳಿ ಹಾಕಿದ್ದಾರೆ.

ರೋಹಿತ್‌ ಶರ್ಮಾ ಅವರ ನಿವೃತ್ತಿಗೆ ಹಿರಿಯ ಆಟಗಾರರಿಗೆ ತುರ್ತಾಗಿ ನಿವೃತ್ತಿ ಅಗತ್ಯವಿಲ್ಲ ಎಂದಿದ್ದಾರೆ. ಇದರ ಬೆನ್ನಲ್ಲೇ ಇದೀಗ ಬಿಸಿಸಿಐ ಅಧಿಕೃತ ಹೇಳಿಕೆಯನ್ನು ನೀಡಿದ್ದು, ರೋಹಿತ್‌ ಶರ್ಮಾ ನಿವೃತ್ತಿ ವಿಚಾರವನ್ನು ತಳ್ಳಿ ಹಾಕಿದೆ.

Rohit Sharma retirement Updates bcci big Statment

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »