ಸಿದ್ದಾಪುರ ಜ್ಯೋತಿಷಿ ಕಮಲಾಕರ್ ಭಟ್ ಸೇರಿ 7 ಆರೋಪಿಗಳಿಗೆ ಫೆಬ್ರವರಿ 11ರವರೆಗೆ ನ್ಯಾಯಾಂಗ ಬಂಧನ

Astrologer Kamalakar Bhat case update: ಬಂಧಿತರಾಗಿರುವ ಏಳೂ ಆರೋಪಿಗಳನ್ನು ಸಿದ್ದಾಪುರದಿಂದ ಕಾರವಾರದ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಪೊಲೀಸರು, ಕೊಲೆಗೆ ಬಳಸಿದ ಆಯುಧಗಳು ಮತ್ತು ಸಾಕ್ಷ್ಯಧಾರಗಳನ್ನು ಸಂಗ್ರಹಿಸುವಲ್ಲಿ ನಿರತರಾಗಿದ್ದಾರೆ.

Astrologer Kamalakar Bhat and 7 others will be judicial custody until February 11

Astrologer Kamalakar Bhat case update: ಸಿದ್ದಾಪುರದ ವಸಂತ ನಾಯ್ಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ ಏಳು ಜನ ಆರೋಪಿಗಳಿಗೆ ಈಗ ಜೈಲು ವಾಸ ಆರಂಭವಾಗಿದೆ. ಸಿದ್ದಾಪುರದ ಜೆಎಂಎಫ್‌ಸಿ (JMFC) ನ್ಯಾಯಾಲಯವು ಈ ಎಲ್ಲ ಆರೋಪಿಗಳಿಗೆ ಫೆಬ್ರವರಿ 11ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಮಹತ್ವದ ಆದೇಶ ಹೊರಡಿಸಿದೆ.

ಈ ಪ್ರಕರಣದಲ್ಲಿ ಸುಚಿತ್ರಾ ಮೊದಲ ಆರೋಪಿ (A1) ಆಗಿದ್ದರೆ, ಲೋಕನಾಥ ನಾಯ್ಕ ಎರಡನೇ ಆರೋಪಿ (A2) ಮತ್ತು ಜ್ಯೋತಿಷಿ ಕಮಲಾಕರ್ ಭಟ್ ಮೂರನೇ ಆರೋಪಿಯಾಗಿದ್ದಾನೆ (A3). ಇವರೊಂದಿಗೆ ಇತರ ನಾಲ್ವರು ಆರೋಪಿಗಳಿಗೂ ಎಂಟು ದಿನಗಳ ಕಾಲ ನ್ಯಾಯಾಂಗ ಬಂಧನ ಆಗಿದೆ. ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ನ್ಯಾಯಾಧೀಶರು ಈ ತೀರ್ಪು ನೀಡಿದ್ದಾರೆ.

ಬಂಧಿತರಾಗಿರುವ ಏಳೂ ಆರೋಪಿಗಳನ್ನು ಸಿದ್ದಾಪುರದಿಂದ ಕಾರವಾರದ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಪೊಲೀಸರು, ಕೊಲೆಗೆ ಬಳಸಿದ ಆಯುಧಗಳು ಮತ್ತು ಸಾಕ್ಷ್ಯಧಾರಗಳನ್ನು ಸಂಗ್ರಹಿಸುವಲ್ಲಿ ನಿರತರಾಗಿದ್ದಾರೆ.

ಖ್ಯಾತ ಟಿವಿ ಜ್ಯೋತಿಷಿ ಕಮಲಾಕರ್‌ ಭಟ್‌ ಬಂಧನ; ಅಕ್ರಮ ಸಂಬಂಧದ ದೂರು ನೀಡಿದ್ದಕ್ಕೆ ಕೊಲೆ ಸಂಚು ಮಾಡಿದ್ರಾ ಗುರೂಜಿ?

ಜ್ಯೋತಿಷ್ಯದ ಹೆಸರಿನಲ್ಲಿ ಹೆಸರು ಮಾಡಿದ್ದ ಕಮಲಾಕರ್ ಭಟ್, ಈಗ ತನ್ನ ಮೇಲಿರುವ ಕೊಲೆ ಆರೋಪದ ಹಿನ್ನೆಲೆಯಲ್ಲಿ ಕಂಬಿ ಎಣಿಸುವಂತಾಗಿದೆ. ಪ್ರಕರಣದ ತನಿಖೆ ಮುಂದುವರಿಯುತ್ತಿದ್ದು, ಫೆಬ್ರವರಿ 11ರ ನಂತರ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯುವ ಸಾಧ್ಯತೆಯೂ ಇದೆ.

Scroll to Top