Heggunje Chamundeshwari temple : ಬ್ರಹ್ಮಾವರದ ದೇವಸ್ಥಾನದಲ್ಲಿ ಕಳವಿಗೆ ಯತ್ನ, ಕಳ್ಳರು ಪರಾರಿ

ಬ್ರಹ್ಮಾವರ : ದೇವಸ್ಥಾನದವೊಂದರ ಕಾಣಿಕೆ ಡಬ್ಬಿಯಿಂದ ಹಣವನ್ನು ಕಳವು ಮಾಡಲು ಯತ್ನಿಸಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದ ಹೆಗ್ಗುಂಜೆ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ (Heggunje Chamundeshwari temple ) ನುಗ್ಗಿದ ಕಳ್ಳರು ಕಾಣಿಕೆ ಡಬ್ಬ ಕಳವಿಗೆ ಯತ್ನಿಸಿ, ನಂತರ ಮೂವರು ಕಳ್ಳರು ಪರಾರಿಯಾಗಿದ್ದಾರೆ.

ತಡರಾತ್ರಿಯ ವೇಳೆಯಲ್ಲಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ನುಗ್ಗಿದ್ದ ಕಳ್ಳರು ಕಾಣಿಕೆ ಡಬ್ಬವನ್ನು ಒಡೆದಿದ್ದಾರೆ. ಅದರಲ್ಲಿದ್ದ ಕಾಣಿಕೆ ಹಣವನ್ನು ಗೋಣಿ ಚೀಲದಲ್ಲಿ ತುಂಬಿಸಿಕೊಂಡು ಪರಾರಿಯಾಗಲು ಯತ್ನಿಸುವ ವೇಳೆಯಲ್ಲಿ ದೇವಸ್ಥಾನದ ಕಾವಲುಗಾರ ಕಿರಣ್‌ ಕಳ್ಳರನ್ನು ಹಿಡಿಯಲು ಯತ್ನಿಸಿದ್ದಾನೆ. ಈ ವೇಳೆಯಲ್ಲಿ ಮೂವರು ಕಳ್ಳರು ಸ್ಥಳದಿಂದ ಪರಾರಿ ಯಾಗಿದ್ದಾರೆ.

ಕೂಡಲೇ ದೇವಸ್ಥಾನದ ಆಡಳಿತ ಮಂಡಳಿಯವರಿಗೆ (Heggunje Chamundeshwari temple) ಕಿರಣ್‌ ಈ ವಿಚಾರವನ್ನು ತಿಳಿಸಿದ್ದಾರೆ. ಸ್ಥಳೀಯರು ದೇವಸ್ಥಾನಕ್ಕೆ ಬಂದು ನೋಡುವಾಗ ಕಾಣಿಕೆಯ ಹಣ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ದೇವಸ್ಥಾನದ ಕಾಣಿಕೆ ಡಬ್ಬಿಯನ್ನು ಅಳವಡಿಸಿರುವ ಒಂದು ಗೋಡೆಯನ್ನು ಒಡೆದು ಕಾಣಿಕೆ ಡಬ್ಬವನ್ನು ಒಡೆದಿದ್ದಾರೆ. ಅಲ್ಲದೇ ಕೃತ್ಯಕ್ಕೆ ಬಳಸಿದ್ದ ಸುತ್ತಿಗೆ, ಹಾರೆ, ಕಬ್ಬಿಣದ ಸಲಾಕೆಯನ್ನು ಸ್ಥಳದಲ್ಲಿಯೇ ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ.

ಈ ಕುರಿತು ಚಾಮುಂಡೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಚ್.‌ ಧನಂಜಯ ಶೆಟ್ಟಿ ಅವರು ಬ್ರಹ್ಮಾವರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಕಳ್ಳರಿಗಾಗಿ ಬಲೆ ಬೀಸಿದ್ದಾರೆ.

ಇದನ್ನೂ ಓದಿ : ಮದುವೆಯಿಂದ ಮನೆಗೆ ಹೊರಟವರು ಮಸಣ ಸೇರಿದ್ರು : ವಾಹನ ಕಂದಕಕ್ಕೆ ಉರುಳಿ 14 ದುರ್ಮರಣ

ಇದನ್ನೂ ಓದಿ : ಕೋಟಾದಲ್ಲಿ ನದಿಗೆ ಉರುಳಿದ ದಿಬ್ಬಣದ ಕಾರು : ವರ ಸೇರಿ 9 ಮಂದಿ ದುರ್ಮರಣ

Brahamavar Thieves attempt to steal Heggunje Chamundeshwari temple

Comments are closed.