ಬೈಂದೂರಿನಲ್ಲಿ ಆನ್‌ಲೈನ್ ವಂಚನೆ: ಜಿಮ್ ಟ್ರೈನರ್‌ನಿಂದ 61,013 ರೂ. ಸುಲಿಗೆ !
Byndoor Online Fraud : ಬೈಂದೂರು : ಆನ್‌ಲೈನ್ ಮೂಲಕ ವಸ್ತು ಖರೀದಿಸಿದ್ದ ಜಿಮ್ ಟ್ರೈನರ್‌ಗೆ ತಾಂತ್ರಿಕ ದೋಷ ಸರಿಪಡಿಸುವ ನೆಪದಲ್ಲಿ ₹61,013 ರೂಪಾಯಿ ವಂಚಿಸಿರುವ ಪ್ರಕರಣ ಬೈಂದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಬೈಂದೂರಿನ ನಾವುಂದ ಗ್ರಾಮದ ಮಲ್ಟಿ ಪವರ್ ಜಿಮ್‌ನಲ್ಲಿ ಟ್ರೈನರ್ ಆಗಿ ಕೆಲಸ ಮಾಡುತ್ತಿರುವ ಶರಣ್ (19 ವರ್ಷ) ಎಂಬುವವರು ಈ ವಂಚನೆಗೆ ಒಳಗಾದವರು.
ಜಿಮ್ ಗ್ರಾಹಕರಿಗೆ ಸಪ್ಲಿಮೆಂಟ್‌ಗಳನ್ನು ಕಂಪನಿಗಳಿಂದ ತರಿಸಿ ಕೊಡುವ ಕೆಲಸ ಮಾಡುವ ಶರಣ್, ಜುಲೈ 18ರಂದು ರಾತ್ರಿ 8 ಗಂಟೆಗೆ guardian.in ನಲ್ಲಿ ಸಪ್ಲಿಮೆಂಟ್ ಬುಕ್ ಮಾಡಿದ್ದರು.
ಜುಲೈ 19 ರಂದು ಬೆಳಿಗ್ಗೆ 10:30 ಗಂಟೆಗೆ ಆಯುಷಾ ಎಂದು ಪರಿಚಯಿಸಿಕೊಂಡ 9589968342 ನಂಬರ್‌ನಿಂದ ಶರಣ್‌ಗೆ ಕರೆ ಬಂದಿದೆ. ನೀವು ಬುಕ್ ಮಾಡಿದ ಸಪ್ಲಿಮೆಂಟ್‌ಗೆ ಕಳುಹಿಸಿದ ಹಣ ತಾಂತ್ರಿಕ ದೋಷದಿಂದ ‘ಸ್ಟಕ್’ ಆಗಿದೆ.
ಅದನ್ನು ಮರಳಿ ಪಡೆಯಲು UPI ID: mohammed.507@supenyes ಗೆ ₹1,804 ಕಳುಹಿಸಿ” ಎಂದು ತಿಳಿಸಿದ್ದಾರೆ.
ಶರಣ್ ಹಣ ಕಳುಹಿಸಿದಾಗ, “ಪೈಸೆ ಸೇರಿಸಿ ಕಳುಹಿಸಿ” ಎಂದು ಹೇಳಿ ₹1,804.90 ಅನ್ನು UPI ID: 7439775602@naviaxis ಗೆ ಕಳುಹಿಸುವಂತೆ ಮಾಡಿದ್ದಾರೆ.
ಇದನ್ನೂ ಓದಿ : ಸಾಸ್ತಾನ : ಮನೆ ಕೆಲಸದಾಕೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ಹಣ ಕಳವು
Byndoor Online Fraud : ಆನ್‌ಲೈನ್ ಖರೀದಿ : ಇರಲಿ ಎಚ್ಚರ
ನಂತರ, 90 ಪೈಸೆ ಅಲ್ಲ 09 ಪೈಸೆ ಹಾಕುವಂತೆ ತಿಳಿಸಿ, ₹1,804.09 ಅನ್ನು 6296529223@ibl ಗೆ ಕಳುಹಿಸುವಂತೆ ಪ್ರೇರೇಪಿಸಿದ್ದಾರೆ. ಹೀಗೆ ಹಂತ ಹಂತವಾಗಿ ಶರಣ್ ಒಟ್ಟು ₹7,219.92 ಹಣವನ್ನು ವಂಚಕರಿಗೆ ವರ್ಗಾಯಿಸಿದ್ದಾರೆ.
ನಂತರ, ವಂಚಕರು ಒಟ್ಟು ಹಣ ರೀಫಂಡ್ ಆಗಲು ನಿಮ್ಮ ಖಾತೆಯಲ್ಲಿ ₹40,000 ಮೈಂಟೆನೆನ್ಸ್ ಅಮೌಂಟ್ ಇರಬೇಕು” ಎಂದು ಹೇಳಿದ್ದಾರೆ.
ಶರಣ್ ಅದರಂತೆ ಮಾಡಿದಾಗ, IndusInd Bank 1192 ಗೆ ಅವರು ಕಳುಹಿಸಿದ ‘ರೀಫಂಡ್ ಕೋಡ್’ ಆದ ADD NOTE ಹಾಕಿ ಓಪನ್ ಮಾಡಿದಾಗ 39221 ಅನ್ನು ಅಮೌಂಟ್‌ನಲ್ಲಿ ಹಾಕುವಂತೆ ತಿಳಿಸಿದ್ದಾರೆ.
ಇಲ್ಲವಾದರೆ ಹಣ ‘ಸ್ಟಕ್’ ಆಗುತ್ತದೆ ಎಂದು ಹೆದರಿಸಿದ್ದಾರೆ. ಇದರಂತೆ GOOGLE PAY ಮೂಲಕ ಅಶ್ವಿತ್ ಹಣ ಹಾಕಿಸಿದ್ದಾರೆ.
ಇದಾದ ನಂತರವೂ ವಂಚಕರು ನೀವು ಹಣ ಹಾಕಿದ ಸಮಯ ಮೀರಿ ಹೋಗಿದೆ, ಮೊದಲಿನಂತೆ ₹20,000 ಮೈಂಟೆನೆನ್ಸ್ ಅಮೌಂಟ್ ಇಡಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ : ತಲೆಬುರುಡೆ ರಹಸ್ಯ : ಎಸ್‌ಐಟಿಯಿಂದ ಹೊರ ನಡೆದ ಇಬ್ಬರು ಐಪಿಎಸ್ ಅಧಿಕಾರಿಗಳು
ಶರಣ್ ಅದರಂತೆ ಹಣ ಹಾಕಿದಾಗ, ಸಂಜೆ 6 ಗಂಟೆಗೆ ಹಣ ರೀಫಂಡ್ ಆಗುತ್ತದೆ ಎಂದು ತಿಳಿಸಿದ್ದಾರೆ. ಆದರೆ, ಸಂಜೆ ಶರಣ್ ಕರೆ ಮಾಡಿದಾಗ ಆ ನಂಬರ್ ಸ್ವಿಚ್ ಆಫ್ ಆಗಿದೆ.
ಶರಣ್ ಅವರಿಂದ ಒಟ್ಟು ₹61,013.09 ಹಣವನ್ನು ಆನ್‌ಲೈನ್‌ನಲ್ಲಿ ವಂಚಿಸಲಾಗಿದೆ. ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಸೈಬರ್ ವಂಚನೆಗಳಿಂದ ಎಚ್ಚರ:
ಆನ್‌ಲೈನ್‌ನಲ್ಲಿ ಹಣ ಹಿಂತಿರುಗಿಸುವ ನೆಪದಲ್ಲಿ ಬ್ಯಾಂಕ್ ಖಾತೆ ವಿವರಗಳು, ಪಿನ್‌ಗಳು, ಒಟಿಪಿ ಅಥವಾ ಯಾವುದೇ ವೈಯಕ್ತಿಕ ಮಾಹಿತಿಯನ್ನು ಕೇಳುವ ಕರೆಗಳು, ಸಂದೇಶಗಳು ಅಥವಾ ಇಮೇಲ್‌ಗಳಿಗೆ ಪ್ರತಿಕ್ರಿಯಿಸಬೇಡಿ.
ಸೈಬರ್ ವಂಚನೆಗೆ ಒಳಗಾದರೆ, ತಕ್ಷಣವೇ 1930 ಗೆ ಕರೆ ಮಾಡಿ ಅಥವಾ http://www.cybercrime.gov.in ವೆಬ್‌ಸೈಟ್ ಮೂಲಕ ದೂರು ನೀಡಿ.
Byndoor Online Fraud Gym Trainer Loses 61013 Kannada News



