ಲಾಕ್‌ಡೌನ್ ನಡುವಲ್ಲೇ ಕೋಳಿ ಅಂಕ : ಪೊಲೀಸರ ದಾಳಿ, ಐವರ ಬಂಧನ

ಪುತ್ತೂರು : ಲಾಕ್ ಡೌನ್ ನಡುವಲ್ಲೇ‌ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕದ ಮೇಲೆ ಪೊಲೀಸರು ದಾಳಿ ‌ನಡೆಸಿ ಐವರನ್ನು ಬಂಧಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.

ಪುತ್ರೂರು ತಾಲೂಕಿನ ಬಲ್ನಾಡಿನ‌ ಸರಕಾರಿ ಜಾಗದಲ್ಲಿ ಕೋಳಿ ಅಂಕ‌ ನಡೆಯುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು, ಲಿಂಗಪ್ಪ ಮೂಲ್ಯ, ನಾರಾಯಣ ನಾಯ್ಕ, ಸಂಜೀವ, ಚಂದ್ರಶೇಖರ ಗೌಡ, ಸುಮಂತ್ ಸೇರಿದಂತೆ ಐವರನ್ನು ವಶಕ್ಕೆ ಪಡೆದಿದ್ದಾರೆ.

ಬಂದಿತರಿಂದ 7  ಕೋಳಿಯ‌ ಹುಂಜ ಹಾಗೂ ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.