Shankha Pushpa dosa recipe:ಶಂಖ ಪುಷ್ಪ ದೋಸೆಯಿಂದ ಹೆಚ್ಚುತ್ತೆ ಮಕ್ಕಳ ನೆನಪಿನ ಶಕ್ತಿ

(Shankha Pushpa dosa recipe)ಶಿವನಿಗೆ ಅತ್ಯಂತ ಪ್ರಿಯವಾಗಿರುವ ಶಂಖ ಪುಷ್ಪ ಪೂಜೆಗೆ ಸಿಮಿತವಾಗಿರದೆ ಇದರಲ್ಲಿ ಸಾಕಷ್ಟು ಔಷಧೀಯ ಗುಣವಿದೆ. ಶಂಕ ಪುಷ್ಪವನ್ನು ಸೇವನೆ ಮಾಡುವುದರಿಂದ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬಹುದು. ಆಯುರ್ವೇದದ ಪ್ರಕಾರ ಶಂಖ ಪುಷ್ಪ ಹಲವು ರೋಗಗಳನ್ನು ನಿವಾರಣೆ ಮಾಡುವಂತಹ ಶಕ್ತಿಯನ್ನು ಹೊಂದಿದೆ. ಹಾಗಾಗಿ ಶಂಖ ಪುಷ್ಪದ ದೋಸೆ ಮಾಡಿಕೊಂಡು ತಿಂದರೆ ರುಚಿಯ ಜೊತೆಗೆ ಆರೋಗ್ಯಕ್ಕೆ ಉತ್ತಮ. ಶಂಖ ಪುಷ್ಪದ ದೋಸೆ ಮಾಡುವುದು ಹೇಗೆ ಎಂಬ ಮಾಹಿತಿಯ ಕುರಿತು ತಿಳಿಯೋಣ.

(Shankha Pushpa dosa recipe)ಬೇಕಾಗುವ ಸಾಮಾಗ್ರಿಗಳು:
ಶಂಖ ಪುಷ್ಪ
ನೀರು
ದೊಸೆ ಹಿಟ್ಟು

ಮಾಡುವ ವಿಧಾನ:
ಒಂದು ಬೌಲ್ ಗೆ ಆರು ಶಂಖ ಪುಷ್ಪ , ನೀರು ಹಾಕಿ ರಾತ್ರಿ ನೆನಸಿಡಬೇಕು. ನೆನಸಿಟ್ಟ ಶಂಖ ಪುಷ್ಪದ ನೀರು ಬೌಲ್‌ ನಲ್ಲಿ ಸೊಸಿಕೊಳ್ಳಬೇಕು. ಸೊಸಿಕೊಂಡ ಶಂಖ ಪುಷ್ಪದ ನೀರನ್ನು ಮುಂಚಿತವಾಗಿ ಮಾಡಿಟ್ಟುಕೊಂಡ ದೋಸೆ ಹಿಟ್ಟಿಗೆ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ತವಾದ ಮೇಲೆ ದೋಸೆ ಹಾಕಿದರೆ ಆರೋಗ್ಯವನ್ನು ಹೆಚ್ಚಿಸುವ ಶಂಖ ಪುಷ್ಪ ಹೂವಿನ ದೋಸೆ ತಿನ್ನಲು ರೆಡಿ.

ಶಂಖ ಪುಷ್ಪವನ್ನು ಸೇವಿಸುವುದರಿಂದ ಹಲವು ಆರೋಗ್ಯದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಶಂಖ ಪುಷ್ಪವನ್ನು ತಿನ್ನುವುದರಿಂದ ಹಸಿವು ಹೆಚಾಗುವಂತೆ ಮಾಡುತ್ತದೆ. ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇತರ ಗಿಡಮೂಲಿಕೆಯೊಂದಿಗೆ ಬೆರೆಸಿ ಸೇವನೆ ಮಾಡುವುದರಿಂದ ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಎಕಾಗ್ರತೆ ಸಾಮರ್ಥ್ಯ ಹೆಚ್ಚಾಗುವಂತೆ ಮಾಡುತ್ತದೆ. ಶಂಖ ಪುಷ್ಪದ ಹೂವು , ಎಲೆ, ಮತ್ತು ಬೇರುಗಳಿಂದ ಮಾಡಿದ ಪುಡಿಯನ್ನು ಸೇವನೆ ಮಾಡುವುದರಿಂದ ಮಕ್ಕಳಲ್ಲಿ ಬುದ್ದಿ ಶಕ್ತಿ ಹೆಚ್ಚಿಸುತ್ತದೆ. ಶಂಖ ಪುಷ್ಪವನ್ನು ತಿನ್ನುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಅರೆತಲೆನೋವು ನಿವಾರಣೆ ಮಾಡಿಕೊಳ್ಳಲು ಎಲೆಗಳ ರಸವನ್ನು ಬಿಸಿ ಮಾಡಿ ಲೇಪನ ಮಾಡಿಕೊಂಡರೆ ನೋವು ಕಡಿಮೆ ಆಗುತ್ತದೆ.

ಇದನ್ನೂ ಓದಿ:Winter And Sesame Seeds : ಚಳಿಗಾಲದಲ್ಲಿ ಎಳ್ಳನ್ನು ಬಳಸುವುದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ…

ಇದನ್ನೂ ಓದಿ:Amla Murabba Recipe:ನೆಲ್ಲಿಕಾಯಿ ಮುರಬ್ಬ ತಿಂದ್ರೆ ಹೆಚ್ಚುತ್ತೆ ರೋಗ ನಿರೋಧಕ ಶಕ್ತಿ

ಶಂಖ ಪುಷ್ಪ ಹೂವು ಬಿಳಿ, ನೀಲಿ, ಮತ್ತು ಕೆಂಪು ಬಣ್ಣಗಳಲ್ಲಿ ಬೆಳೆಯುತ್ತದೆ. ಶಂಖ ಪುಷ್ಪ ಹೂವನ್ನು ಹವಮಾನಕ್ಕೆ ತಕ್ಕಂತೆ ವಿವಿಧ ತಳಿಗಳಲ್ಲಿ ಬೆಳೆಸಬಹುದು. ಶಂಖ ಪುಷ್ಪ ಗಿಡ ಬಳ್ಳಿಯ ರೂಪದಲ್ಲಿ ಹಬ್ಬಿಕೊಳ್ಳುತ್ತದೆ. ಶಂಖ ಪುಷ್ಪ ಹೂವನ್ನು ಇಂಗ್ಲಿಷ್‌ ನಲ್ಲಿ ಬಟರ್‌ ಫ್ಲೆಪಿಯೆ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

Shankha Pushpa dosa recipe Children’s memory increases with Shanka Pushpa Dosa

Comments are closed.