Viral Video:ದರೋಡೆಕೋರನನ್ನು ಹಿಮ್ಮೆಟ್ಟಿಸಿದ ಮಹಿಳಾ ಬ್ಯಾಂಕ್ ಮ್ಯಾನೇಜರ್ : ವಿಡಿಯೋ ವೈರಲ್

ಶ್ರೀಗಂಗಾನಗರ : (robber Viral Video) ದರೋಡೆಕೋರನೋರ್ವ ಹಾಡುಹಗಲಲ್ಲೇ ದರೋಡೆ ಮಾಡಲು ಬ್ಯಾಂಕ್ ಗೆ ನುಗ್ಗಿದ್ದಾನೆ. ಶಸ್ತ್ರಾಸ್ತ್ರವನ್ನು ಹಿಡಿದು ಹೆದರಿಸಿದ ದುಷ್ಕರ್ಮಿ ಸಿಬ್ಬಂದಿಗಳನ್ನು ಬೆದರಿಸಿ ಬ್ಯಾಂಕ್ ಲೂಟಿಗೆ ಮುಂದಾಗಿದ್ದ. ಬ್ಯಾಂಕ್ ನಲ್ಲಿದ್ದ ಗ್ರಾಹಕರು ಹಾಗೂ ಸಿಬ್ಬಂದಿಗಳಿಗೆ ಅಲ್ಲಿ ಏನು ನಡೆಯುತ್ತಿದೆ ಅನ್ನೋದು ಅರಿವಿಗೆ ಬಾರದಾಗಿತ್ತು.ಈ ವೇಳೆ ಬ್ಯಾಂಕಿನ ಮಹಿಳಾ ಮ್ಯಾನೇಜರ್ ಧೈರ್ಯದಿಂದ ದರೋಡೆಕೋರನನ್ನು ಹಿಮ್ಮೆಟ್ಟಿಸಿದ್ದಾರೆ. ಈ ಘಟನೆ ನಡೆದಿರೋದು ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಾಜಸ್ಥಾನದ ಶ್ರೀ (Viral Video) ಗಂಗಾನಗರದಲ್ಲಿರುವ ಮರುಧರ ಗ್ರಾಮೀಣ ಬ್ಯಾಂಕ್‌ ನಲ್ಲಿ ಈ ಘಟನೆ ನಡೆದಿದೆ. ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿಯ ಪ್ರಕಾರ, ಮುಸುಕು ಧರಿಸಿದ ಅಪರಿಚಿತ ವ್ಯಕ್ತಿ ಒಬ್ಬ ಚಾಕನ್ನು ಹಿಡಿದು ಬ್ಯಾಂಕ್‌ ಒಳಗೆ ನುಗ್ಗಿದ್ದಾನೆ. ಅಲ್ಲಿರುವ ಸಿಬ್ಬಂದಿಯನ್ನು ಹೆದರಿಸಿ ದರೋಡೆ ಮಾಡಲು ಮ್ಯಾನೇಜರ್‌ ಕೋಣೆಗೆ ನುಗ್ಗಿದ್ದಾನೆ. ಈ ವೇಳೆಯಲ್ಲಿ ಬ್ಯಾಂಕ್ ನ ಮಹಿಳಾ ಮ್ಯಾನೇಜರ್ ದರೋಡೆಕೊರನಿಂದ ಚಾಕುವನ್ನು ಕಸಿದುಕೊಳ್ಳುವ ಧೈರ್ಯ ತೋರಿದ್ದಾರೆ. ಆ ಸಂದರ್ಭದಲ್ಲಿ ದರೋಡೆಕೋರನ ಜೆಬಿನಿಂದ ಕಟಿಂಗ್‌ ಪ್ಲೆಯರ್‌ ಉದುರಿ ಬಿದ್ದಿತ್ತು. ಮಹಿಳಾ ಬ್ಯಾಂಕ್‌ ಮ್ಯಾನೇಜರ್ ಕಟಿಂಗ್‌ ಪ್ಲೆಯರ್‌ ಕೈಯಲ್ಲಿ ಎತ್ತಿಕೊಂಡು ದರೋಡೆಕೊರನ ಮೇಲೆ ಮರು ದಾಳಿಗೆ ಮುಂದಾಗಿದ್ದಾರೆ. ಈ ವೇಳೆಯಲ್ಲಿ ದರೋಡೆಕೋರ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.

ಈ ಕುರಿತು ಜವಾಹರ್‌ ಪೊಲೀಸ್‌ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಅಲ್ಲದೇ ಆರೋಪಿಯನ್ನು ಸದ್ಯ ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆಯಲ್ಲಿ ದರೋಡೆಕೋರ ತಾನು ಶ್ರೀಗಂಗಾ ನಗರದ ದಾವ್ಡಾ ನಿವಾಸಿಯಾಗಿದ್ದು, ದರೋಡೆಕೋರರ ನಾಯಕ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನವನು ಎಂದು ತಿಳಿಸಿದ್ದಾರೆ. ಇದೀಗ ಪೊಲೀಸರು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.

ಇದನ್ನೂ ಓದಿ:Dog Attack Noida : 7 ತಿಂಗಳ ಮಗುವನ್ನು ಕಚ್ಚಿ ಕೊಂದ ಬೀದಿ ನಾಯಿ

ಇದನ್ನೂ ಓದಿ:tollgate virodhi horata :ಸುರತ್ಕಲ್​ ಟೋಲ್​ ತೆರವು ವಿವಾದ : ಪ್ರತಿಭಟನಾಕಾರರು ಖಾಕಿ ವಶಕ್ಕೆ

ಗ್ರಾಮೀಣ ಬ್ಯಾಂಕಿನಲ್ಲಿ ನಡೆದಿರುವ ಎಲ್ಲಾ ಘಟನಾವಳಿಗಳು ಬ್ಯಾಂಕಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಹಿಳೆಯಾಗಿದ್ದರೂ ಕೂಡ ದರೋಡೆಕೋರನನ್ನು ಹಿಮ್ಮೆಟ್ಟಿಸುವ ಧೈರ್ಯ ತೋರಿದ ಬ್ಯಾಂಕ್ ಮ್ಯಾನೇಜರ್ ಸಾಹಸವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗಿದೆ.

Female bank manager who repelled the robber: video viral

Comments are closed.