Dog Attack Noida : 7 ತಿಂಗಳ ಮಗುವನ್ನು ಕಚ್ಚಿ ಕೊಂದ ಬೀದಿ ನಾಯಿ

ನೊಯ್ಡಾ : (Dog Attack Noida)ಏಳು ತಿಂಗಳ ಹಸುಗೂಸನ್ನು ಬೀದಿ ನಾಯಿ ಎಳೆದೊಯ್ದು ಕಚ್ಚಿ ಕೊಂದಿರುವ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ಹೌಸಿಂಗ್ ಸೊಸೈಟಿಯಲ್ಲಿ ನಡೆದಿದೆ. ಸ್ಥಳೀಯರು ನಾಯಿಯ ಬಾಯಿಯಲ್ಲಿದ್ದ ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸುವ ಕಾರ್ಯವನ್ನು ಮಾಡಿದ್ದರು. ಆದರೆ ತೀವ್ರ ರಕ್ತಶ್ರಾವದಿಂದಾಗಿ ಮಗು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ.

ಮಗುವಿನ ಪೋಷಕರು ಕಟ್ಟಡ ಕಾರ್ಮಿಕರಾಗಿದ್ದರು.ಇಬ್ಬರೂ ಕೂಡ ಗ್ರೂಪ್‌ ಹೌಸಿಂಗ್‌ ಸೊಸೈಟಿಯೊಳಗೆ ನಡೆಯುತ್ತಿದ್ದ ಕಟ್ಟಡ ನಿರ್ಮಾಣ (Dog Attack Noida)ಕಾರ್ಯದಲ್ಲಿ ನಿರತರಾಗಿದ್ದರು. ಪೋಷಕರು ತಮ್ಮ ಮಗುವನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಆದರೆ ಸಂಜೆಯ ವೇಳೆಗೆ ಮಗುವ ಬಳಿಗೆ ಬಂದ ಬೀದಿ ನಾಯಿಯು ಮಗುವನ್ನು ಎಳೆದೊಯ್ದಿದೆ. ಮಗುವನ್ನು ಕಚ್ಚಿ ತೀವ್ರವಾಗಿ ಗಾಯಗೊಳಿಸಿರುತ್ತದೆ. ಸೋಮವಾರದಂದು ಘಟನೆ ಸಂಭವಿಸಿದ್ದರೂ ಕೂಡ ನಿನ್ನೆಯ ತನಕ ಯಾವುದೇ ದೂರನ್ನು ದಾಖಲಿಸಿಕೊಂಡಿರಲಿಲ್ಲ. ಬೀದಿ ನಾಯಿಯಿಂದ ಸಂಬಂಧಿಸಿದ ಹಿನ್ನೆಲೆಯಲ್ಲಿ ದೂರು ದಾಖಲಾಗಿರುವುದಿಲ್ಲ.

ಇದನ್ನೂ ಓದಿ : Big Breaking : ಕೇದಾರನಾಥ ಬಳಿ ಹೆಲಕಾಪ್ಟರ್ ಪತನ : ಪೈಲೆಟ್ ಸೇರಿ 6 ಮಂದಿ ದುರ್ಮರಣ

ಇದನ್ನೂ ಓದಿ : Jayalalitha Death Case : ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಸಾವಿಗೆ ಶಶಿಕಲಾ ಕಾರಣ : 4 ಮಂದಿ ವಿರುದ್ದ ತನಿಖೆಗೆ ಆದೇಶ

ಇದನ್ನೂ ಓದಿ : rape accused:‘ಅತ್ಯಾಚಾರ ಸಂತ್ರಸ್ತೆಯನ್ನು ಒಂದು ವರ್ಷದೊಳಗಾಗಿ ಮದುವೆಯಾಗಬೇಕು’ : ವಿಚಿತ್ರ ಷರತ್ತು ವಿಧಿಸಿ ಜಾಮೀನು ನೀಡಿದ ಹೈಕೋರ್ಟ್​

ಇದನ್ನೂ ಓದಿ : tollgate virodhi horata :ಸುರತ್ಕಲ್​ ಟೋಲ್​ ತೆರವು ವಿವಾದ : ಪ್ರತಿಭಟನಾಕಾರರು ಖಾಕಿ ವಶಕ್ಕೆ

ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಬೀದಿ ನಾಯಿಗಳನ್ನು ಹಿಡಿಯಲು ಸಂಬಂಧಿಸಿದ ಏಜೆನ್ಸಿಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರುತ್ತಿದೆ. ಇನ್ನು ಗಾಜಿಯಾಬಾದ್‌ ಮುನ್ಸಿಪಲ್‌ ಕಾರ್ಪೊರೇಷನ್‌ನ ನಿವಾಸಿಗಳು ಉಗ್ರವಾದ ಪಿಟ್‌ಬುಲ್‌, ರೊಟ್‌ವೀಲರ್‌ ಮತ್ತು ಡೋಗೊ ಅರ್ಜೆಂಟಿನೋ ತಳಿಗಳನ್ನು ಸಾಕುಪ್ರಾಣಿಗಳಾಗಿ ಸಾಕುವುದನ್ನು ನಿಷೇಧಿಸಿದ್ದಾರೆ. ಅಲ್ಲದೇ ಗಾಜಿಯಾಬಾದ್‌ನಲ್ಲಿ ಸಾಕುಪ್ರಾಣಿ ಮಾಲೀಕರಿಗೆ ಅವುಗಳನ್ನು ಸಾಕುವ ಮಾರ್ಗದರ್ಶಿಗಳನ್ನು ಕೂಡ ನೀಡಿದ್ದಾರೆ. ಅಷ್ಟೇ ಅಲ್ಲದೇ ಈ ಹಿಂದೆ ಕಾನ್ಪುರ್‌ ಮುನ್ಸಿಪಲ್‌ ಕಾರ್ಪೊರೇಶನ್‌ ಮತ್ತು ಪಂಚಕುಲ ಮುನ್ಸಿಪಲ್‌ ಕಾರ್ಪೊರೇಷನ್‌ ಕೂಡ ಪಿಟ್‌ಬುಲ್‌ ಮತ್ತು ರಾಟ್‌ವೀಲರ್‌ ತಳಿಯ ನಾಯಿಗಳನ್ನು ನಗರ ವ್ಯಾಪ್ತಿಯಲ್ಲಿ ಸಾಕುಪ್ರಾಣಿಗಳನ್ನಾಗಿ ಸಾಕುವುದಕ್ಕೆ ಸಂಪೂರ್ಣ ನಿಷೇಧಿಸಲಾಗಿದೆ.

Dog Attack Noida A stray dog bit a 7-month-old baby

Comments are closed.