Drug Peddler Arrest : ಡ್ರಗ್ ಪೆಡ್ಲರ್ ಬುದಾರಾಮ್ ಬಂಧನ, 20 ಲಕ್ಷ ಮೌಲ್ಯದ ಮಾದಕ ವಸ್ತು ವಶ

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಡ್ರಗ್ಸ್‌ ಜಾಲ ಸಕ್ರೀಯವಾಗಿದೆ. ಇದೀಗ ಹಲಸೂರು ಠಾಣೆಯ ಪೊಲೀಸರು ಮತ್ತೊಂದು ಡ್ರಗ್ಸ್‌ ಜಾಲವನ್ನು ಬೇಧಿಸಿದ್ದಾರೆ. ಮಾರಾಟ ಮಾಡಲು ಯತ್ನಿಸುತ್ತಿದ್ದ 20 ಲಕ್ಷ ಮೌಲ್ಯದ 2.6 ಕೆ.ಜಿ.ಆಫೀಮ್ ವಶ ಪಡಿಸಿಕೊಂಡಿದ್ದಾರೆ.

ಬೆಂಗಳೂರಲ್ಲಿ ಮಾದಕ ವಸ್ತು ಮಾರಾಟ ಜಾಲದ ವಿರುದ್ದ ಕಾರ್ಯಾಚರಣೆ ನಡೆಯುತ್ತಿದೆ. ಇದೀಗ ಬೃಹತ್‌ ಪ್ರಮಾಣದಲ್ಲಿ ಮಾದಕ ವಸ್ತುಗಳನ್ನ ಮಾರಾಟ ಮಾಡುತ್ತಿದ್ದ ರಾಜಸ್ಥಾನ ಮೂಲದ ಡ್ರಗ್ ಪೆಡ್ಲರ್ ಬುದಾರಾಮ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಬುದಾರಾಮ್‌ ಹಲಸೂರು ಬಿಬಿಎಂಪಿ ಬಾಲಕಿಯರ ಪ್ರೌಢಶಾಲೆ ಬಳಿ ಮಾರಾಟ ಮಾಡಲು ಯತ್ನಿಸುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಆರೋಪಿ ಬಂಧಿಸಿದ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

( Drug Peddler Bhudharam Arrest Halasoor police in Bangalore )

Comments are closed.