ಚಿಕ್ಕಮಗಳೂರು : ಕೆಎಸ್‌ಆರ್‌ಟಿಸಿ ಬಸ್ಸಿನಲ್ಲೇ ಗರ್ಭಿಣಿಗೆ ಹೆರಿಗೆ ಮಾಡಿಸಿದ ಮಹಿಳಾ ಕಂಡಕ್ಟರ್‌

ಚಿಕ್ಕಮಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸಿನಲ್ಲಿ ಗರ್ಭಿಣಿ ಮಹಿಳೆಯೊಬ್ಬಳು ಪ್ರಯಾಣಿಸುತ್ತಿದ್ದು, ಆ ಸಂದರ್ಭದಲ್ಲಿ ಮಾರ್ಗ ಮಧ್ಯದಲ್ಲೇ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಬಸ್ಸ್‌ನಲ್ಲಿದ್ದ ಮಹಿಳಾ ಕಂಡೆಕ್ಟರ್‌ ಗರ್ಭಿಣಿ ಮಹಿಳೆಗೆ ಹೆರಿಗೆ ಮಾಡಿದ್ದಾರೆ. ಸದ್ಯ ಕೆಎಸ್‌ಆರ್‌ಟಿಸಿ ಬಸ್ಸ್‌ ಮಹಿಳಾ ಕಂಡೆಕ್ಟರ್‌ (KSRTC Bus Female Conductor) ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಚಿಕ್ಕಮಗಳೂರು ವಿಭಾಗದ ಅದೇ ಘಟಕದ ವಾಹನ ನಂಬರ್ ಕೆಎ 18 ಎಫ್‌ 0865ರಲ್ಲಿ ಬೆಂಗಳೂರು ಚಿಕ್ಕಮಗಳೂರು ಮಾರ್ಗ ಕಾರ್ಯಾಚರಣೆಯ ವೇಳೆ ಉದಯಪುರ ಸಮೀಪವಿರುವ ಕೃಷಿ ಕಾಲೆಜು ಹತ್ತಿರ ನಿಗಮದ ವಾಹನದಲ್ಲಿ ಮಹಿಳೆಯು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಂತರ ಕೂಡಲೇ ಮಹಿಳೆಯನ್ನು ಅಂಬುಲೆನ್ಸ್‌ ಮೂಲಕ ಶಾಂತಿಗ್ರಾಮ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಸಕಾಲದಲ್ಲಿ ಮಹಿಳಾ ಪ್ರಯಾಣಿಕರಿಗೆ ಸ್ಪಂದಿಸಿ ಮಗು ಮತ್ತು ತಾಯಿಯನ್ನು ಉಳಿಸಿ ಮಾನವಿಯತೆ ಮರೆದ ಮಹಿಳಾ ನಿರ್ವಾಹಕಿ ಕಾರ್ಯವನ್ನು ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಜಿ.ಸತ್ಯವತಿ ತಿಳಿಸಿದ್ದಾರೆ.

ಇದನ್ನೂ ಓದಿ : ಇಮ್ರಾನ್ ಖಾನ್‌ಗೆ ಜೂನ್ 8ವರೆಗೆ ಜಾಮೀನು ಮಂಜೂರು ಮಾಡಿದ ಲಾಹೋರ್ ಹೈಕೋರ್ಟ್

ಸದ್ಯ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ. ಇಂತಹ ಸಂದರ್ಭದಲ್ಲಿ ಧೈರ್ಯದಿಂದ ಮುನ್ನಚ್ಚರಿಕೆ ವಹಸಿ ಹೆರಿಗೆ ಮಾಡಿದ ಮಹಿಳಾ ಕಂಡೆಕ್ಟರ್‌ಗೆ ಮಹಿಳೆ ಕುಟುಂಬದರವರು ಧನ್ಯವಾದ ತಿಳಿಸಿದ್ದಾರೆ.

ಬಿಸಿಲಿನ ತಾಪಕ್ಕೆ ಒಂಬತ್ತು ತಿಂಗಳ ಗರ್ಭಿಣಿ ಸಾವು

ಮಹಾರಾಷ್ಟ್ರ: ತನ್ನ ಗ್ರಾಮದಿಂದ ಕಿಲೋಮೀಟರ್ ದೂರ ನಡೆದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಮನೆಗೆ ಮರಳುತ್ತಿದ್ದ ಒಂಬತ್ತು ತಿಂಗಳ ಗರ್ಭಿಣಿಯೊಬ್ಬಳು (Pregnant death) ಬಿಸಿಲ ತಾಪಕ್ಕೆ ಬಲಿಯಾಗಿದ್ದಾರೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ ಎಂದು ಆರೋಗ್ಯ ಅಧಿಕಾರಿಗಳು ಸೋಮವಾರ ಮಾಹಿತಿ ನೀಡಿದ್ದಾರೆ.

ದಹನಿ ತಾಲೂಕಿನ ಓಸರ್ ವೀರಾ ಗ್ರಾಮದ ಸೋನಾಲಿ ವಾಘಾಟ್ ಎಂಬ 21 ವರ್ಷದ ಬುಡಕಟ್ಟು ಮಹಿಳೆ ಸುಡುವ ಬಿಸಿಲಿನಲ್ಲಿ 3.5 ಕಿಲೋಮೀಟರ್ ನಡೆದು ಸಮೀಪದ ಹೆದ್ದಾರಿಯನ್ನು ತಲುಪಿದಾಗ, ಅಲ್ಲಿಂದ ತಾವಾ ಪಿಎಚ್‌ಸಿಗೆ ಆಟೋ ರಿಕ್ಷಾವನ್ನು ತೆರಳಿದ್ದಾಳೆ. ನಂತರ ಪಿಎಚ್‌ಸಿಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಮನೆಗೆ ಕಳುಹಿಸಲಾಗಿದೆ ಎಂದು ಪಾಲ್ಘರ್ ಜಿಲ್ಲಾ ಸಿವಿಲ್ ಸರ್ಜನ್ ಡಾ ಸಂಜಯ್ ಬೋಡಾಡೆ ತಿಳಿಸಿದರು. ಅಲ್ಲಿಂದ ಬೇಸಗೆಯ ಸೆಖೆಯ ನಡುವೆ ಮತ್ತೆ ಮನೆಗೆ ಮರಳಿ 3.5 ಕಿಮೀ ಕಾಲ್ನಡಿಗೆಯಲ್ಲಿ ಹೋಗಿದ್ದಾಳೆ ಎನ್ನಲಾಗಿದೆ.

ಸಂಜೆ ನಂತರ, ಆಕೆಯ ಆರೋಗ್ಯದ ತೊಂದರೆಗಳನ್ನು ಉಲ್ಭಣಗೊಂಡಿದ್ದು, ಧುಂಡಲವಾಡಿ ಪಿಎಚ್‌ಸಿಗೆ ಕರೆದೊಯ್ಯಲಾಗಿದ್ದು, ನಂತರ ಅಲ್ಲಿಂದ ಆಕೆಯನ್ನು ಕಳಸ ಉಪವಿಭಾಗೀಯ ಆಸ್ಪತ್ರೆಗೆ (SDH) ಉಲ್ಲೇಖಿಸಲಾಗಿದೆ. ಅಲ್ಲಿ ಆಕೆ ಅರೆ ಪ್ರಜ್ಞಾ ಸ್ಥಿತಿಯಲ್ಲಿ ಕಂಡು ಬಂದಳು ಎಂದು ಅಧಿಕಾರಿ ಹೇಳಿದರು. ಆಕೆಗೆ ಹೆಚ್ಚಿನ ತಾಪಮಾನ ಇದ್ದ ಕಾರಣ ವೈದ್ಯರು ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದಹಾನುವಿನ ಧುಂಡಲವಾಡಿಯ ವಿಶೇಷ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಹೇಳಿದರು.

ಆದರೆ, ಆಂಬ್ಯುಲೆನ್ಸ್‌ನಲ್ಲಿ ತೆರಳುವ ಮಾರ್ಗ ಮಧ್ಯೆ ಆಕೆ ಮೃತಪಟ್ಟಿದ್ದು, ಮಗುವನ್ನೂ ಕಳೆದುಕೊಂಡಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿಲ್ಲ ಮತ್ತು ಕಳಸ ಪಿಎಚ್‌ಸಿ ವೈದ್ಯರು ತಕ್ಷಣ ಗಮನ ಹರಿಸಿದ್ದರು. ಆಕೆಯ “ಅರೆ ಪ್ರಜ್ಞಾ ಸ್ಥಿತಿ” ಯಿಂದ ಅವರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗದ ಕಾರಣ, ಅವರು ಆಕೆಯನ್ನು ವಿಶೇಷ ಆಸ್ಪತ್ರೆಗೆ ಕಳುಹಿಸಿದ್ದಾರೆ ಎಂದು ಅವರು ಹೇಳಿದರು.

ಬಿಸಿಲಿನ ವಾತಾವರಣದಲ್ಲಿ ಗರ್ಭಿಣಿ ಮಹಿಳೆ ಏಳು ಕಿಲೋಮೀಟರ್ ನಡೆದುಕೊಂಡು ಹೋಗುತ್ತಿದ್ದಾಗ, ಆಕೆಯ ಪರಿಸ್ಥಿತಿಯನ್ನು ಉಲ್ಬಣಗೊಳಿಸಿತು. ಸೂರ್ಯನ ತಾಪಮಾನ ಆಕೆಯ ಸಾವಿಗೆ ಕಾರಣವಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ. ಡಾ ಬೊಡಾಡೆ ಅವರು ಪಿಎಚ್‌ಸಿಗಳು ಮತ್ತು ಎಸ್‌ಡಿಎಚ್‌ಗೆ ಭೇಟಿ ನೀಡಿ ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸಿದರು. ಸೋಮವಾರ ಬೆಳಗ್ಗೆ ಕಸ ಎಸ್‌ಡಿಎಚ್‌ನಲ್ಲಿದ್ದ ಪಾಲ್ಘರ್ ಜಿಲ್ಲಾ ಪರಿಷತ್ ಅಧ್ಯಕ್ಷ ಪ್ರಕಾಶ್ ನಿಕಮ್, ಮಹಿಳೆಗೆ ರಕ್ತಹೀನತೆ ಇತ್ತು ಮತ್ತು ಆಶಾ (ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆ) ಕಾರ್ಯಕರ್ತೆ ಆಕೆಯನ್ನು ಎಸ್‌ಡಿಎಚ್‌ಗೆ ಕರೆತಂದಿದ್ದಾರೆ ಎಂದು ತಿಳಿಸಿದರು. ಅಲ್ಲಿನ ವೈದ್ಯರು ಆಕೆಯನ್ನು ಪರೀಕ್ಷಿಸಿ ಔಷಧಗಳನ್ನು ಕೊಟ್ಟರೂ ಪ್ರಯೋಜನವಾಗಿಲ್ಲ ಎಂದರು.

ಕಸ ಎಸ್‌ಡಿಎಚ್‌ನಲ್ಲಿ ತೀವ್ರ ನಿಗಾ ಘಟಕ (ಐಸಿಯು) ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಅಂತಹ ರೋಗಿಗಳಿಗೆ ಚಿಕಿತ್ಸೆ ನೀಡಲು ತಜ್ಞ ವೈದ್ಯರು ಇಲ್ಲ ಎಂದು ಹೇಳಿದರು. ಈ ಸೌಲಭ್ಯಗಳು ಇದ್ದಿದ್ದರೆ ಆದಿವಾಸಿ ಮಹಿಳೆಯ ಪ್ರಾಣ ಉಳಿಸಬಹುದಿತ್ತು ಎಂದರು. ನಿಕಮ್ ಅವರು ಈ ವಿಷಯವನ್ನು ಸೂಕ್ತ ಮಟ್ಟದಲ್ಲಿ ತೆಗೆದುಕೊಂಡು ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವುದಾಗಿ ಹೇಳಿದರು.

KSRTC Bus Female Conductor: Chikkamagaluru: A female conductor gave birth to a pregnant woman in the KSRTC bus.

Comments are closed.