ವಿವಾದ ಹುಟ್ಟಿಸಿದ ಕಾಡೆಮ್ಮೆ ಸಂಶಯಾಸ್ಪದ ಸಾವು : ಇಂತದ್ದು ಮೊದಲೇನಲ್ಲಾ ಅಂತಿದ್ದಾರೆ ಪ್ರಾಣಿಪ್ರಿಯರು !

0

ಮಂಗಳೂರು : ಮೊನ್ನೆಯಷ್ಟೇ ಮಂಗಳೂರು ನಗರಕ್ಕೆ ನುಗ್ಗಿದ್ದ ಕಾಡೆಮ್ಮೆಯನ್ನು ಸೆರೆ ಹಿಡಿಯಲಾಗಿತ್ತು. ಅರಣ್ಯ ಇಲಾಖೆಯ ಸಿಬ್ಬಂಧಿ ಕಾಡೆಮ್ಮೆಯನ್ನು ಚಾರ್ಮಾಡಿ ಘಾಟಿಗೆ ಬಿಟ್ಟು ಬಂದಿದ್ರು. ನಂತರ ನಡೆದ ಕಾಡೆಮ್ಮೆ ಸಾವಿನ ಪ್ರಕರಣವೀಗ ವಿವಾದದ ಕೇಂದ್ರಬಿಂದುವಾಗಿದೆ.

ಕಳೆದೆರಡು ದಿನಗಳ ಹಿಂದೆಯಷ್ಟೇ ಬೆಳ್ಳಂಬೆಳಗ್ಗೆ ಮಂಗಳೂರು ನಗರದಲ್ಲಿ ಕಾಡೆಮ್ಮೆಯೊಂದು ಪ್ರತ್ಯಕ್ಷವಾಗಿತ್ತು. ನಗರದ ಬಿಜೈ, ಅಳಕೆ, ಮಣ್ಣಗುಡ್ಡೆ ಪರಿಸರದಲ್ಲಿ ತನ್ನ ರಂಪಾಟ ಮೆರೆದಿತ್ತು. ರಸ್ತೆಯಲ್ಲಿ ಬರುವ ವಾಹನಗಳಿಗೂ ಹಾನಿಯುಂಟು ಮಾಡಿತ್ತು. ಕೂಡಲೇ ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಸಿಬ್ಬಂಧಿ ಸುಮಾರು 2 ಗಂಟೆಗಳ ಕಾಲ ಕಾರ್ಯಾಚಾರಣೆಯನ್ನು ನಡೆಸಿ ಕಾಡೆಮ್ಮೆಯನ್ನು ಮಣ್ಣಗುಡ್ಡೆಯಲ್ಲಿ ಸೆರೆಹಿಡಿದಿದ್ದರು.

ಕಾಡೆಮ್ಮೆಗೆ ಅರೆವಳಿಕೆ ಚುಚ್ಚುಮದ್ದು ನೀಡಿ ನಿಯಂತ್ರಣಕ್ಕೆ ತಂದಿದ್ದಾರೆ. ನಂತರ ಕಾಡೆಮ್ಮೆಯನ್ನು ಚಾರ್ಮಾಡಿ ಘಾಟಿಗೆ ಕೊಂಡೊಯ್ದು ಬಿಟ್ಟು ಬರಲಾಗಿತ್ತು. ಆದರೆ ಕಾಡೆಮ್ಮೆ ಸಾವನ್ನಪ್ಪಿತ್ತು. ಕಾಡೆಮ್ಮೆಯ ಸಾವಿಗೆ ಅರೆವಳಿಕೆ ಚುಚ್ಚುಮದ್ದು ಓವರ್ ಡೋಸ್ ಆಗಿರುವುದೇ ಕಾರಣವೆನ್ನಲಾಗುತ್ತಿದೆ. ಪ್ರಕರಣದಲ್ಲಿ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಎದ್ದು ಕಾಣಿಸುತ್ತಿದೆ. ಆದ್ರೀಗ ಕಾಡೆಮ್ಮೆಯ ಸಾವಿನ ಪ್ರಕರಣ ಹಲವು ವಿವಾದಗಳನ್ನು ಹುಟ್ಟುಹಾಕಿದೆ.

ಕಾಡೆಮ್ಮೆ ಸಾವಿನ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ಪ್ರಾಣಿಪ್ರಿಯರಾದ ಪ್ರಕಾಶ್ ಶೆಟ್ಟಿ ಆಗ್ರಹಿಸಿದ್ದಾರೆ. ಮಾತ್ರವಲ್ಲ ಕರಾವಳಿ ಭಾಗದಲ್ಲಿ ಕಾಡೆಮ್ಮೆ, ಕಾಡುಕೋಣಗಳು ಸಾವನ್ನಪ್ಪುತ್ತಿರುವುದು ಸಾಮಾನ್ಯ ವಿಷಯ. ಇದುವರೆಗೂ ಕರಾವಳಿಯ ಪ್ರಮುಖ ಪ್ರಾಣಿ ಸಂಗ್ರಹಾಲಯದಲ್ಲಿಯೇ ಇಂತಹ ಪ್ರಕರಣಗಳು ಸಾಕಷ್ಟು ನಡೆದಿದೆ. ಇಂತಹ ಪ್ರಕರಣಗಳನ್ನು ಮುಚ್ಚು ಹಾಕುವ ಕಾರ್ಯವೂ ನಡೆದಿದೆ ಎನ್ನುತ್ತಿದ್ದಾರೆ.

ಮಂಗಳೂರಿನ ಪ್ರಮುಖ ಝೂಗಳಿಗೆ ಭೇಟಿಕೊಟ್ರೆ ಅಲ್ಲಿ ಒಮ್ಮೆ ಕಂಡುಬಂದ ಪ್ರಾಣಿಗಳು ಕೆಲವು ದಿನಗಳಲ್ಲಿ ನಾಪತ್ತೆಯಾಗುತ್ತಿವೆ. ಪ್ರಾಣಿಸಂಗ್ರಹಾಲಯಗಳಲ್ಲಿ ಪ್ರಾಣಿಗಳು ಸಾವನ್ನಪ್ಪಿದ್ರೆ ಸರಕಾರದ ಕಾನೂನು, ನೀತಿ ನಿಯಮಾವಳಿಗಳ ಅನ್ವಯ ಅಂತ್ಯಕ್ರಿಯೆ ನಡೆಸದೆ ಮುಚ್ಚಿ ಹಾಕಲಾಗುತ್ತಿದೆ.

ಅಲ್ಲದೇ ಕಾಡೆಮ್ಮೆಯ ಸಂಶಯಾಸ್ಪದ ಸಾವಿನ ಪ್ರಕರಣಗಳ ಸಾಲಿಗೆ ಇದೀಗ ಕಾಡೆಮ್ಮೆ ಪ್ರಕರಣ ಸೇರ್ಪಡೆಯಾಗಿದೆ. ಕಾಡೆಮ್ಮೆಗೆ ಅರವಳಿಕೆ ಮದ್ದು ನೀಡುವಾಗ ತಾಂತ್ರಿಕವಾಗಿ ತಜ್ಞರಲ್ಲದವರನ್ನು ಬಳಕೆ ಮಾಡಲಾಗಿರುವುದೇ ಪ್ರಮುಖ ಕಾರಣವೆಂದು ಪ್ರಾಣಿಪ್ರಿಯರು ಆರೋಪಿಸುತ್ತಿದ್ದಾರೆ.

ಕಾಡೆಮ್ಮೆ ಸಾವಿನ ಪ್ರಕರಣವೀಗ ಕೊನೆಗೂ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಪ್ರಾಣಿಗಳನ್ನು ಹಿಡಿಯುವ ಮತ್ತು ಆರೈಕೆ ಮಾಡುವ ನೆಪದಲ್ಲಿ ಕೋಟ್ಯಾಂತ ರೂಪಾಯಿಗಳನ್ನು ಗುಳುಂ ಮಾಡುವ ದಂಧೆ ನಡೆಯುತ್ತಿದೆ. ಅರಣ್ಯ ಇಲಾಖೆ ಪ್ರಾಣಿಗಳ ಆರೈಕೆಯ ಬಗ್ಗೆ ಗಮನಹರಿಸುತ್ತಿಲ್ಲವೆಂಬ ಆರೋಪಗಳು ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕ ತನಿಖೆ ನಡೆಯಬೇಕಾದ ಅಗತ್ಯವಿದೆ.

Leave A Reply

Your email address will not be published.