Calcium Deficient:ನಿಮಗೆ ಕ್ಯಾಲ್ಸಿಯಮ್ ಕೊರತೆಯೇ ? ಸೇವಿಸಿ ಈ ಮೂರು ಪದಾರ್ಥಗಳು

(Calcium Deficient)ಸಾಮಾನ್ಯವಾಗಿ ವ್ಯಕ್ತಿಗೆ ಮೂವತ್ತರ ನಂತರ ಮೂಳೆ ಸಮಸ್ಯೆ ಕಾಡಲು ಪ್ರಾರಂಭಿಸುತ್ತದೆ. ಮೂಳೆಯ ಕೊಂಡಿಗಳ ನಡುವೆ ಸಾಕಷ್ಟು ನೋವುಗಳು ಕಾಣಿಸಿಕೊಳ್ಳುವುದರಿಂದ ಮೆಟ್ಟಿಲು ಹತ್ತುವುದಕ್ಕೂ ಕಷ್ಟವಾಗುತ್ತದೆ. ಕ್ಯಾಲ್ಸಿಯಮ್‌ ಅಂಶ ಇರುವಂತಹ ಆಹಾರವನ್ನು ನಾವು ಸೇವಿಸದೆ ಇದ್ದಾಗ ದೇಹಕ್ಕೆ ಬೇಕಾಗುವ ಕ್ಯಾಲ್ಸಿಯಂ ಕಡಿಮೆಯಾಗಿ ನಮ್ಮ ದೇಹದಲ್ಲಿ ಮೂಳೆ ಸಮಸ್ಯೆ ಕಾಡಲು ಪ್ರಾರಂಭಿಸುತ್ತದೆ. ಮುಂದೆ ಕ್ಯಾಲ್ಸಿಯಮ್‌ ಸಮಸ್ಯೆ ಬರದಂತೆ ತಡೆಯಲು ಈ ಮೂರು ಪದಾರ್ಥಗಳನ್ನು ತಪ್ಪದೇ ತಿನ್ನಿ. ಯಾವೆಲ್ಲಾ ಪದಾರ್ಥಗಳನ್ನು ಸೇವಿಸಬೇಕು ಎನ್ನುವ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

(Calcium Deficient)ಬಿಳಿ ಎಳ್ಳು
ಪ್ರತಿನಿತ್ಯ ಒಂದು ಚಮಚ ಬಿಳಿ ಎಳ್ಳನ್ನು ಯಾವುದಾದರೂ ರೂಪದಲ್ಲಿ ಸೇವನೆ ಮಾಡುವುದರಿಂದ ದೇಹಕ್ಕೆ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಮ್‌ ಸಿಗುತ್ತದೆ. ದೇಹದಲ್ಲಿ ಕೊಲೆಸ್ಟ್ರಾಲ್‌ ಕಡಿಮೆ ಮಾಡುವುದಕ್ಕೆ ಸಹಕಾರಿಯಾಗಿದೆ. ಎಳ್ಳಿನಲ್ಲಿ ಇರುವ ಅಮಿನೋ ಆಸಿಡ್‌ ಅಂಶ ಇರುವುದರಿಂದ ಕುತ್ತಿಗೆ ಮತ್ತು ಬೆನ್ನು ನೋವಿನ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ.

ಗಸಗಸೆ
ಗಸಗಸೆಯಲ್ಲಿ ಇರುವ ಒಮೆಗಾ 3,ಒಮೆಗಾ 6, ಪ್ರೋಟಿನ್‌ ,ಪೈಬರ್‌ ಅಂಶಗಳು ಇರುವುದರಿಂದ ಜೀರ್ಣಕ್ರಿಯೆಗೆ ಉಪಯುಕ್ತವಾಗಿದೆ. ಗಸಗಸೆಯಲ್ಲಿರುವ ಕ್ಯಾಲ್ಸಿಯಮ್‌ ಮತ್ತು ಮೆಗ್ನೀಶಿಯಂ ಅಂಶ ಇರುವುದರಿಂದ ನಿದ್ರಾಹೀನತೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಇದು ನಮ್ಮ ದೇಹದಲ್ಲಿನ ಮೂಳೆಗಳನ್ನು ಸಧೃಡಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನೆನಪಿನ ಶಕ್ತಿಯನ್ನು ಹೆಚ್ಚಿಸುವುದಕ್ಕೂ ಸಹಾಯ ಮಾಡುತ್ತದೆ.

ಬಾದಾಮಿ
ಪ್ರತಿನಿತ್ಯ ನೆನಸಿಟ್ಟ ಬಾದಾಮಿಯನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಉತ್ತಮ. ಇದರಲ್ಲಿ ಪೈಬರ್‌, ವಿಟಮಿನ್‌ ಡಿ, ಕ್ಯಾಲ್ಸಿಯಮ್‌ ಅಂಶ ಇರುವುದರಿಂದ ಸಾಕಷ್ಟು ಪ್ರಯೋಜನವಿದೆ. ಜ್ಞಾಪಕ ಶಕ್ತಿಯನ್ನು ವೃದ್ಧಿಸುತ್ತದೆ, ಸುಸ್ತನ್ನು ನಿವಾರಣೆ ಮಾಡುತ್ತದೆ, ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಬಿಳಿಎಳ್ಳು,ಗಸಗಸೆ,ಬಾದಾಮಿಯನ್ನು ಪುಡಿಮಾಡಿಕೊಂಡು ಡಬ್ಬಿಯಲ್ಲಿ ಶೇಖರಣೆ ಮಾಡಿ ಪ್ರತಿನಿತ್ಯ ಸೇವಿಸುವುದರಿಂದ ದೇಹದ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುವುದರ ಜೊತೆಗೆ ಕ್ಯಾಲ್ಸಿಯಮ್‌ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.

ಇದನ್ನೂ ಓದಿ:Onion Beauty Tips:ನೀಳವಾದ ಕೂದಲು ಬೇಕಾ ಹಾಗಾದ್ರೆ ಈರುಳ್ಳಿ ಬಳಸಿ

ಇದನ್ನೂ ಓದಿ:Banana Face Pack:ಮುಖದ ಕಾಂತಿ ಹೆಚ್ಚಿಸಲು ಬಳಸಿ ಬಾಳೆ ಹಣ್ಣಿನ ಫೇಸ್ ಪ್ಯಾಕ್

ಬೇಕಾಗುವ ಸಾಮಗ್ರಿಗಳು:

  • ಬಿಳಿ ಎಳ್ಳು
  • ಗಸಗಸೆ
  • ಬಾದಾಮಿ

ಮಾಡುವ ವಿಧಾನ:
ಒಂದು ಮಿಕ್ಸಿ ಜಾರಿಯಲ್ಲಿ ಬಿಳಿ ಎಳ್ಳು, ಗಸಗಸೆ, ಬಾದಾಮಿ ಯನ್ನು ಹಾಕಿ ಪುಡಿ ಮಾಡಿಕೊಂಡು ಒಂದು ಡಬ್ಬಿ ಯಲ್ಲಿ ಶೇಖರಿಸಿ ಇಟ್ಟುಕೊಳ್ಳಬೇಕು. ಈ ಪುಡಿಯನ್ನು ಪ್ರತಿ ನಿತ್ಯ ಹಾಲಿಗೆ ಹಾಕಿ ಕುಡಿಯುವುದರಿಂದ ಆರೋಗ್ಯಕ್ಕೆ ಉತ್ತಮ. ಹಾಲನ್ನು ಕುಡಿಯಲು ಇಷ್ಟ ಪಡೆದವರು ನೀರಿನೊಂದಿಗೆ ಬೆರೆಸಿ ಕುಡಿಯಬಹುದು. ಒಂದು ಪಾತ್ರೆಯಲ್ಲಿ ಒಂದು ಲೋಟ ಹಾಲನ್ನು ಹಾಕಿ ಈ ಪುಡಿಯನ್ನು ಹಾಕಿ ಕುದಿಸಿಕೊಳ್ಳಬೇಕು. ರುಚಿಗೆ ಸಿಹಿ ಬೇಕೆಂದರೆ ಕಲ್ಲು ಸಕ್ಕರೆ ಅಥವಾ ಬೆಲ್ಲವನ್ನು ಹಾಕಿಕೊಂಡು ಕುಡಿಯಬಹುದು.

Are you calcium deficient? Consume these three ingredients

Comments are closed.