Praveen Nettaru murder case : ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣ : ಐವರು ಶಂಕಿತ ಆರೋಪಿಗಳು ವಶಕ್ಕೆ

ಮಂಗಳೂರು : Praveen Nettaru murder case: ಬಿಜೆಪಿ ಯುವ ಮುಖಂಡ, ಭಜರಂಗದಳದ ನಾಯಕ ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ದುಷ್ಕರ್ಮಿಗಳು ನಡೆಸಿದ ದಾಳಿಯಲ್ಲಿ ಜಿಲ್ಲೆಯ ಬಿಜೆಪಿ ಯುವ ಮೋರ್ಛಾದ ಮುಖಂಡ ಪ್ರವೀಣ್​ ನೆಟ್ಟಾರು ಸಾವನ್ನಪ್ಪಿದ್ದಾರೆ. ಈ ಪ್ರಕರಣ ಸಂಬಂಧ ಪೊಲೀಸರು ಐವರು ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ. ಸುಳ್ಯ ತಾಲೂಕು ಬೆಳ್ಳಾರೆ ಮೂಲದ ಐವರನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ಸಂಬಂಧ ವಿಚಾರಣೆ ನಡೆಸುತ್ತಿದ್ದಾರೆ.


ಮರಣೋತ್ತರ ಪರೀಕ್ಷೆಯ ಬಳಿಕ ಮೃತ ಪ್ರವೀಣ್​ ನೆಟ್ಟಾರು ಮೃತದೇಹವನ್ನು ಮೆರವಣಿಗೆಯ ಮೂಲಕ ಪುತ್ತೂರು ಸರ್ಕಾರಿ ಆಸ್ಪತ್ರೆಯಿಂದ ಪ್ರವೀಣ್​ ಸ್ವಗ್ರಾಮ ಸುಳ್ಯ ತಾಲೂಕಿನ ಬೆಳ್ಳಾರೆ ಕರೆ ತರಲಾಗಿದೆ. ಪ್ರವೀಣ್​ ನೆಟ್ಟಾರು ಮನೆಯ ಸುತ್ತ ಜನಸಾಗರವೇ ಹರಿದು ಬಂದಿದೆ. ಮೆರವಣಿಗೆಯುದ್ಧಕ್ಕೂ ಪ್ರವೀಣ್​ ನೆಟ್ಟಾರು ಪರ ಘೋಷಣೆಗಳು ಮೊಳಗಿದ್ದು ಮಾತ್ರವಲ್ಲದೇ ಆಂಬುಲೆನ್ಸ್​ಗೆ ದಾರಿಯುದ್ಧಕ್ಕೂ ಜನತೆ ಪುಷ್ಪವನ್ನು ಅರ್ಪಿಸಿದ್ದಾರೆ. ಪತಿಯ ಸಾವಿನ ಬಗ್ಗೆ ಪ್ರತಿಕ್ರಿಯಿಸಿದ ನೂತನಾ ನೆಟ್ಟಾರು ಯಾವ ವೈದ್ಯರಿಂದಲೂ ನನ್ನ ಪತಿಯನ್ನು ಉಳಿಸಲು ಆಗಲಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ. ಪ್ರವೀಣ್​ ನೆಟ್ಟಾರು ಸಾವಿನ ವಾರ್ತೆ ಕೇಳುತ್ತಿದ್ದಂತೆಯೇ ಸಂಪೂರ್ಣ ಪುತ್ತೂರು ಹಾಗೂ ಸುಳ್ಯ ತಾಲೂಕಿನಲ್ಲಿ ನೀರವ ಮೌನ ಆವರಿಸಿದೆ.


ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಪ್ರವೀಣ್​ ನೆಟ್ಟಾರು ಕೋಳಿ ಅಂಗಡಿಯನ್ನು ನಡೆಸುತ್ತಿದ್ದರು. ರಾತ್ರಿ ವೇಳೆ ಕೋಳಿ ಅಂಗಡಿಯನ್ನು ಬಂದ್​ ಮಾಡಿ ಮನೆಗೆ ಹೋಗಲು ಅಣಿಯಾಗುತ್ತಿದ್ದ ವೇಳೆಯಲ್ಲಿ ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ತಲ್ವಾರ್​​ನಿಂದ ಪ್ರವೀಣ್​​ರ ಕುತ್ತಿಗೆಗೆ ಇರಿದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಪ್ರವೀಣ್​ ನೆಟ್ಟಾರುರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದರು.

ಇದನ್ನು ಓದಿ : Praveen Nettar Murder : ಪ್ರವೀಣ್‌ ಹತ್ಯೆ : ಸಿಎಂ ಬೊಮ್ಮಾಯಿ, ನಳಿನ್‌ ವಿರುದ್ದ ಹಿಂದೂ ಕಾರ್ಯಕರ್ತರ ಆಕ್ರೋಶ

ಇದನ್ನೂ ಓದಿ : Rahul Dravid: “ರಾಹುಲ್ ದ್ರಾವಿಡ್ ಅಲ್ಲ ರಾಹುಲ್ ‘ಡೇವಿಡ್’..” ದಿ ಗ್ರೇಟ್ ವಾಲ್ ಬಿಚ್ಚಿಟ್ಟ “ಹೆಸರು” ರಹಸ್ಯ

ಇದನ್ನೂ ಓದಿ : Praveen Nettarus final darshan : ಪ್ರವೀಣ್​ ನೆಟ್ಟಾರು ಅಂತಿಮ ದರ್ಶನದಲ್ಲಿ ಹಿಂದೂ ಕಾರ್ಯಕರ್ತರ ಆಕ್ರೋಶ : ಥಂಡಾ ಹೊಡೆದ ಬಿಜೆಪಿ ನಾಯಕರು

Praveen Nettaru murder case: Five suspects arrested

Comments are closed.