ಸಿಲಿಕಾನ್ ಸಿಟಿಯಲ್ಲಿ ಸಿನಿಮಾ ನಟಿ ಮೇಲೆ ಅತ್ಯಾಚಾರ

0

ಬೆಂಗಳೂರು : ಕನ್ನಡ, ತಮಿಳು ಚಿತ್ರ ನಟಿಯೋರ್ವರಿಗೆ ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಕುಡಿಸಿ ಅತ್ಯಾಚಾರವೆಸಗಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಆರೋಪಿ ಖಾಸಗಿ ಕಂಪೆನಿಯೊಂದರ ಸಿಇಒ ಆಗಿರುವ ಮೋಹಿತ್ ಎಂಬಾತ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿಯೂ ಬೆದರಿಸಿದ್ದಾನೆ. ನಟಿಗೆ ಬ್ಲ್ಯಾಕ್ ಮೇಲ್ ಮಾಡಿ ಲಕ್ಷಾಂತರ ರೂಪಾಯಿ ವಂಚಿಸಿದ ಬೆನ್ನಲ್ಲೇ ನಟಿ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಬೆಂಗಳೂರಿನ ಜೆ.ಜೆ. ನಗರದ ಖಾಸಗಿ ಅಪಾರ್ಟ್ ಮೆಂಟ್ ನಿವಾಸಿಯಾಗಿರುವ ವಾಸವಾಗಿರುವ 30 ವರ್ಷದ ನಟಿ ಕನ್ನಡ ಮಾತ್ರವಲ್ಲೇ ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದರು. ಕಾಫಿಡೇ ಗೆ ಹೋಗಿದ್ದ ವೇಳೆಯಲ್ಲಿ ಮೋಹಿತ್ ಎಂಬಾತನ ಪರಿಚಯವಾಗಿತ್ತು. ಮೋಹಿತ್ ಮೆಕಾಪ್ಲೈ ಕಂಪೆನಿಯ ಸಿಇಒ ಅಂತಾ ನಟಿಗೆ ಪರಿಚಯ ಮಾಡಿಕೊಂಡಿದ್ದ. ತನ್ನ ಕಂಪೆನಿಯ ಪ್ರಚಾರಕ್ಕೂ ನಟಿಯನ್ನು ಬಳಸಿಕೊಂಡಿದ್ದು, ಕಳೆದ ವರ್ಷದ ಜನವರಿ 15ರಂದು ಗೋವಾಕ್ಕೆ ಕರೆದೊಯ್ದು ಪೋಟೋ ಶೂಟ್ ಮಾಡಿಸಿದ್ದ. ಇಬ್ಬರ ನಡುವೆ ಸಲುಗೆ ಬೆಳೆಯುತ್ತಿದ್ದಂತೆಯೇ ಮೋಹಿತ್ ಆರ್ಥಿಕ ಸಮಸ್ಯೆಯಿದೆ ಎಂದು ಹೇಳಿ ಸುಮಾರು ಒಂದೂವರೆ ಲಕ್ಷ ರೂಪಾಯಿ ಹಣವನ್ನು ಪಡೆದುಕೊಂಡಿದ್ದ. ಜೂನ್ 22ರಂದು ಮೋಹಿತ್ ಹುಟ್ಟುಹಬ್ಬವನ್ನು ನಟಿಯ ಮನೆಯಲ್ಲಿಯೇ ಆಚರಿಸಿಕೊಂಡಿದ್ದ ಮೋಹಿತ್ ಮರುದಿನ ನಡೆದ ನಟಿಯ ಹುಟ್ಟುಹಬ್ಬದಲ್ಲಿಯೂ ಬಾಗಿಯಾಗಿದ್ದ. ಊಟವಾದ ನಂತರದಲ್ಲಿ ನಟಿಗೆ ತಂಪು ಪಾನೀಯದಲ್ಲಿ ಮತ್ತು ಬರುವ ಔಷಧಿ ನೀಡಿ ನಟಿಯ ಮೇಲೆ ಅತ್ಯಾಚಾರವೆಸಗಿದ್ದಾನೆ.

ಜೂನ್ 24ರಂದು ಮತ್ತೆ ನಟಿಯ ಮನೆಗೆ ಬಂದಿದ್ದ ಮೋಹಿತ್ ನಟಿಗೆ ಅತ್ಯಾಚಾರವೆಸಗಿರುವುದನ್ನು ತಿಳಿಸಿದ್ದಾನೆ. ಅಲ್ಲದೇ ವಿಡಿಯೋ ಚಿತ್ರೀಕರಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿಯೂ ಬೆದರಿಕೆಯೊಡ್ಡಿದ್ದಾನೆ. ಮೋಹಿತ್ ಬೆದರಿಕೆಯ ಬೆನ್ನಲ್ಲೇ ನಟಿಯಿಂದ 20 ಲಕ್ಷ ರೂಪಾಯಿಗೆ ಡಿಮ್ಯಾಂಡ್ ಇಟ್ಟು ನಟಿಯಿಂದ 11 ಲಕ್ಷ ರೂಪಾಯಿ ಪಡೆದುಕೊಂಡಿದ್ದ. ಇಷ್ಟಕ್ಕೆ ಸುಮ್ಮನಾಗದ ಮೋಹಿತ್ ನಂತರವೂ 9 ಲಕ್ಷ ರೂಪಾಯಿ ಪಡೆದು ಮತ್ತೊಮ್ಮೆ ಅತ್ಯಾಚಾರವೆಸಗಿದ್ದಾನೆ. ನಂತರ ವಿಷಯವನ್ನ ನಟಿ ಆರೋಪಿ ಮೋಹಿತ್ ಮನೆಯವರಿಗೆ ತಿಳಿಸಿದ್ದಾರೆ. ಆದರೆ ಮೋಹಿತ್ ಮನೆಯವರು ನಟಿಗೆ ಬೆದರಿಕೆಯೊಡ್ಡಿದ್ದಾರೆ ಎಂದು ನಟಿ ಜಗಜೀವನ್ ರಾಮ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಟಿಯ ದೂರಿನ ಮೇರೆಗೆ ನಾಯಂಡಹಳ್ಳಿಯ ಮೋಹಿತ್ ಮತ್ತು ಆತನ ತಂದೆ ಮಹದೇವ್, ತಾಯಿ ನಾಗವೇಣಿ ಮತ್ತು ರಾಹುಲ್ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಿದ್ದಾರೆ.

Leave A Reply

Your email address will not be published.