12 ಲಕ್ಷದ ಆಸೆಗೆ 26 ಲಕ್ಷ ರೂಪಾಯಿ ಕಳೆದುಕೊಂಡ ಉಡುಪಿಯ ವ್ಯಕ್ತಿ..!

0

ಉಡುಪಿ : ಮೋಸ ಹೋಗುವವರು ಇರುವವರೆಗೂ ಮೋಸ ಮಾಡೋರು ಇದ್ದೇ ಇರ್ತಾರೆ ಅನ್ನೋದಕ್ಕೆ ಈ ಸ್ಟೋರಿನೇ ಬೆಸ್ಟ್ ಎಕ್ಸಾಂಪಲ್. ಸ್ಕ್ರ್ಯಾಚ್ ಕೂಪನ್ ನಲ್ಲಿ 12 ಲಕ್ಷ ರೂಪಾಯಿ ಬಹುಮಾನ ಬಂದಿದೆ ಅಂತ ನಂಬಿಸಿ ವ್ಯಕ್ತಿಯೋರ್ವರಿಂದ ಬರೋಬ್ಬರಿ 26 ಲಕ್ಷ ರೂಪಾಯಿ ಹಣವನ್ನು ಪಡೆದು ವಂಚಿಸಲಾಗಿದೆ. ಅತ್ತ ಬಹುಮಾನದ ಮೊತ್ತವೂ ಇಲ್ಲಾ, ಇತ್ತ ಕೂಡಿಟ್ಟ ಹಣವನ್ನೂ ಕಳೆದುಕೊಂಡ ವ್ಯಕ್ತಿಯೀಗ ಪೊಲೀಸರ ಮೊರೆ ಹೋಗಿದ್ದಾರೆ.

ಹೌದು, ಉಡುಪಿಯ ನಾಗರಾಜ್ ಎಂಬವರಿಗೆ ನ್ಯಾಪ್‌‌ಟಾಲ್ ಕಂಪನಿಯ ಹೆಸರಿನಲ್ಲಿ ಲೇಟರ್ ವೊಂದು ಪೋಸ್ಟ್ ಮೂಲಕ ಮನೆಗೆ ಬಂದಿತ್ತು. ಪೋಸ್ಟ್ ತೆರೆದು ನೋಡಿದ ನಾಗರಾಜ್ ಗೆ ಖುಷಿಯಾಗಿತ್ತು. ಪೋಸ್ಟ್ ನಲ್ಲಿ ಸ್ಕ್ರ್ಯಾಚ್ ಕೂಪನ್ ಇದ್ದು, ಅದರಲ್ಲಿ ನೀವು 12 ಲಕ್ಷ ರೂಪಾಯಿ ಬಹುಮಾನ ವಿಜೇತರಾಗಿದ್ದೀರಿ ಅಂತಾ ಬರೆಯಲಾಗಿತ್ತು.

ಇದನ್ನು ನಂಬಿದ ನಾಗರಾಜ್ ಪತ್ರದಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದಾರೆ. ಬಹುಮಾನದ ಹಣವನ್ನು ಪಡೆಯಬೇಕಾದ್ರೆ ಮೊದಲು ರಿಜಿಸ್ಟ್ರೇಷನ್ ಫೀಸ್ ಪಾವತಿಸಿ ಎಂದು ಆ ಕಡೆಯಿಂದ ಕರೆ ಮಾಡಿದ್ದ ವ್ಯಕ್ತಿ ಬ್ಯಾಂಕ್ ಖಾತೆಯನ್ನು ನೀಡಿದ್ದಾನೆ. ಬ್ಯಾಂಕ್ ಖಾತೆಗೆ ನಾಗರಾಜ್ 12 ಸಾವಿರ ರೂಪಾಯಿ ಹಣ ಪಾವತಿಸಿದ್ದಾರೆ.

ನಂತರ ಅಮಿತ್ ಬಿಸ್ವಾಸ್ ಹಾಗೂ ಚೇತನ್ ಕುಮಾರ್ ಎಂಬವರು ಬೇರೆ ಬೇರೆ ಮೊಬೈಲ್ ನಂಬರ್ ನಿಂದ ಕರೆ ಮಾಡಿ ನ್ಯಾಪ್ ಟಾಲ್ ಕಂಪೆನಿಯಿಂದ ಕರೆ ಮಾಡುತ್ತಿರುವುದಾಗಿಯೂ ನಂಬಿಸಿದ್ದಾರೆ. ನಂತರದ ನೀವು 12 ಲಕ್ಷ ರೂಪಾಯಿ ಬಹುಮಾನದ ಹಣವನ್ನು ಪಡೆಯಲು ಜಿ.ಎಸ್.ಟಿ. ಟ್ಯಾಕ್ಸ್, ವೆರಿಫಿಕೇಶ್ ಚಾರ್ಜ್‌, ಸಬ್ ಚಾರ್ಜ್ ಕಟ್ಟಬೇಕೇಂದು ಹೇಳಿ ಬರೋಬ್ಬರಿ 26,47,650 ರೂ. ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿಸಿಕೊಂಡಿದ್ದಾರೆ.

ಕೊನೆಗೆ ತಾನು ಮೋಸ ಹೋಗಿರುವುದು ಅರಿವಿಗೆ ಬರುತ್ತಿದ್ದಂತೆಯೇ ನಾಗರಾಜ್ ಅವರು ಉಡುಪಿಯ ಸೆನ್ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ದ ದೂರು ನೀಡಿದ್ದಾರೆ. ಆನ್ ಲೈನ್ ಹೆಸರಲ್ಲಿ ನಿತ್ಯವೂ ವಂಚನೆ ಪ್ರಕರಣಗಳು ನಡೆಯುತ್ತಿರೋ ಬೆನ್ನಲ್ಲೇ ಉಡುಪಿಯಲ್ಲಿ ಮತ್ತೊಂದು ವಂಚನೆ ಪ್ರಕರಣ ಬಯಲಾಗಿದೆ. ಇನ್ನಾದ್ರೂ ಜನರ ಎಚ್ಚೆತ್ತುಕೊಳ್ಳುವುದು ಒಳಿತು.

Leave A Reply

Your email address will not be published.