ಎನ್ ಪಿಎಸ್ ರದ್ದು ಮಾಡಿ ಆರ್ಥಿಕ ಸಂಕಷ್ಟದಿಂದ ಪಾರಾಗಲಿ : ಯೋಜನೆ ರದ್ದು ಮಾಡದಿದ್ರೆ ಉಗ್ರ ಹೋರಾಟದ ಎಚ್ಚರಿಕೆ

0

ಉಡುಪಿ : ರಾಜ್ಯದಲ್ಲಿ ಜಾರಿಯಲ್ಲಿರುವ ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದುಗೊಳಿಸಿ, ಹಳೆ ಪಿಂಚಣಿ ವ್ಯವಸ್ಥೆಯ ಜಾರಿಗೆ ಉಡುಪಿ ಜಿಲ್ಲಾ ಎನ್ ಪಿಎಸ್ ನೌಕರರ ಸಂಘ ಆಗ್ರಹಿಸಿದೆ.

ಎನ್ ಪಿಎಸ್ ಯೋಜನೆಯಿಂದ ನೌಕರರು ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಎನ್ ಪಿಎಸ್ ಯೋಜನೆ ನೌಕರರು ಹಾಗೂ ಅವರನ್ನು ಅವಲಂಬಿತರ ಬದುಕಿನ ಮೇಲೆ ಆರ್ಥಿಕ ಹಾಗೂ ಸಾಮಾಜಿಕ ದುಷ್ಪರಿಣಾಮವನ್ನು ಬೀರುತ್ತಿದೆ. ಮರಣ ಹೊಂದಿರುವ ನೌಕರರ ಅವಲಂಬಿತರು ಹಾಗೂ ನಿವೃತ್ತಿ ಹೊಂದಿದ ನೌಕರರಿಗೆ ಮಾಸಿಕ 750 ರಿಂದ 1,200 ರೂಪಾಯಿ ವರೆಗೆ ನಿವೃತ್ತಿ ವೇತನ ಲಭ್ಯವಾಗುತ್ತಿದೆ. ಇದು ನೌಕರರ ಪಾಡಾದ್ರೆ, ಈ ಯೋಜನೆಯಿಂದ ಸರಕಾರಕ್ಕೆ ಲಾಭವೇ ಅಥವಾ ನಷ್ಟವೇ ಎಂದು ತಿಳಿಯಲು ಕನಿಷ್ಟ 2035ರ ವರೆಗೆ ಕಾಯಬೇಕಾಗಿದೆ.

ರಾಜ್ಯ ಸರಕಾರ ರಾಜ್ಯದಲ್ಲಿನ ಪ್ರಸ್ತುತ ಆರ್ಥಿಕ ಸಂಕಷ್ಟದಿಂದ ಹೊರಬರಲು ಈ ಯೋಜನೆಯನ್ನು ರದ್ದುಗೊಳಿಸುವುದು ಪರಿಹಾರ ವಾಗಲಿದೆ. 2020ರ ಎಪ್ರಿಲ್ ಬಾಬ್ತು 2,16,029 ನೌಕರರ ಪಾಲಿನ ಒಟ್ಟು 43,19,54,74,027ಹಾಗೂ ಸರಕಾರದ ಪಾಲು 46,55,36,40,080 ರೂಪಾಯಿಯಾಗಲಿದ್ದು, ಈ ಯೋಜನೆಯನ್ನು ರದ್ದುಗೊಳಿಸುವ ಮೂಲಕ ಈ ಒಟ್ಟು ಮೊತ್ತದಲ್ಲಿ 8974,91,14,107 ರೂಪಾಯಿ ಎನ್ ಪಿಎಸ್ ಪಾಲನ್ನು ಜಿಪಿಎಫ್ ಗೆ ವರ್ಗಾಯಿಸುವ ಮೂಲಕ ಸರಕಾರ ಅಭಿವೃದ್ದಿ ಕಾರ್ಯಗಳಿಗೆ ಉಪಯೋಗಿಸಿಕೊಳ್ಳಬಹುದಾಗಿದೆ. ಈ ಒಗ್ಗೆ ಸರಕಾರ ಸೂಕ್ತ ನಿರ್ಧಾರವನ್ನು ಕೈಗೊಳ್ಳಬೇಕು. ಈ ಮೂಲಕ ನೌಕರರಿಗೆ ನ್ಯಾಯ ಒದಗಿಸುವುದರ ಜೊತೆಗೆ ರಾಜ್ಯದ ಆರ್ಥಿಕ ಸಂಪನ್ಮೂಲಕ ಕ್ರೂಢೀಕರಣಕ್ಕೆ ಮುಂದಾಗಬೇಕೆಂದು ಉಡುಪಿ ಜಿಲ್ಲಾ ಎನ್ ಪಿಎಸ್ ನೌಕರರ ಸಂಘ ಆಗ್ರಹಿಸಿದೆ.

ಹಳೆ ಪಿಂಚಣಿ ವ್ಯವಸ್ಥೆಯ ಜಾರಿಗೆ ಆಗ್ರಹಿಸಿ ಎನ್ ಪಿಎಸ್ ನೌಕರರು ಈಗಾಗಲೇ ರಾಜ್ಯ ಮಟ್ಟದಲ್ಲಿ ಉಗ್ರ ಹೋರಾಟವನ್ನು ನಡೆಸಲು ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಬದ್ದತೆಯಿಂದಾಗಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಒಂದೊಮ್ಮೆ ರಾಜ್ಯ ಸರಕಾರ ಎನ್ ಪಿಎಸ್ ರದ್ದು ಮಾಡದೇ ಇದ್ರೆ ಉಗ್ರ ಹೋರಾಟ ನಡೆಸುವುದಾಗಿಯೂ ಎಚ್ಚರಿಸಿದ್ದಾರೆ.

Leave A Reply

Your email address will not be published.