Student hanging in hostel: ಹಾಸ್ಟೆಲ್‌ ಕೊಠಡಿಯಲ್ಲಿ ಕೈ ಕಟ್ಟಿ, ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆ

ರಾಂಚಿ: (Student hanging in hostel) ರಾಂಚಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ನ ವಿದ್ಯಾರ್ಥಿಯೊರ್ವನ ಶವ ಪತ್ತೆಯಾಗಿದ್ದು, ಎರಡೂ ಕೈಗಳನ್ನು ಕಟ್ಟಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಐದನೇ ಮಹಡಿಯಲ್ಲಿರುವ ತನ್ನ ಹಾಸ್ಟೆಲ್ ಕೋಣೆಯಲ್ಲಿ ವಿದ್ಯಾರ್ಥಿ ಪತ್ತೆಯಾಗಿದ್ದಾನೆ. ವಿದ್ಯಾರ್ಥಿಯನ್ನು ಉತ್ತರ ಪ್ರದೇಶದ ವಾರಣಾಸಿಯ ಶಿವಂ ಪಾಂಡೆ ಎಂದು ಗುರುತಿಸಲಾಗಿದೆ.

ಭಾನುವಾರ ರಾತ್ರಿ ವಿದ್ಯಾರ್ಥಿ ಕಿನ್ನತೆಗೆ ಒಳಗಾಗಿದ್ದ ಎನ್ನುವುದು ತಿಳಿದುಬಂದಿದ್ದು, ಸೋಮವಾರದಂದು ಆತ ಹಾಸ್ಟೆಲ್‌ ನ ಆವರಣಕ್ಕೂ ಕೂಡ ಬಂದಿರಲಿಲ್ಲ. ಕೆಲವು ವಿದ್ಯಾರ್ಥಿಗಳು ಶಿವಂ ಒಳಗೆ ಬೀಗ ಹಾಕಿಕೊಂಡು ಹೊರಗೆ ಬರುತ್ತಿಲ್ಲ ಎಂದು ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಸಿಬ್ಬಂದಿಗಳು ಬಾಗಿಲು ಒಡೆದು ನೋಡಿದಾಗ ಶಿವಂ ಮೇಲ್ಛಾವಣಿಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೈಗಳನ್ನು ಕಟ್ಟಿ ಹಾಕಿರುವುದು ಪತ್ತೆಯಾಗಿದೆ.

ನಂತರದಲ್ಲಿ ಸಂಸ್ಥೆಯ ಅಧಿಕಾರಿಗಳು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಮೃತ ಬಾಲಕನ ದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆಯ ಬಗ್ಗೆ ಪೊಲೀಸರು ವಿದ್ಯಾರ್ಥಿಯ ಕುಟುಂಬ ಸದಸ್ಯರಿಗೂ ಕೂಡ ಮಾಹಿತಿ ನೀಡಿದ್ದಾರೆ.

ಇನ್ನೂ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ತಿಳಿದುಬಂದಿಲ್ಲ. ಇದರ ಕುರಿತಾಗಿ ಪೊಲೀಸರು ತನಿಖೆ ಮಾಡುತ್ತಿದ್ದು, ಎಲ್ಲಾ ದೃಷ್ಟಿಕೋನಗಳಿಂದಲೂ ಕೂಡ ತನಿಖೆಯನ್ನು ನಡೆಸುತ್ತಿದ್ದಾರೆ. ಆದರೆ, ಮರಣೋತ್ತರ ಪರೀಕ್ಷೆಯ ವರದಿ ಬಂದಮೇಲೆ ಮಾತ್ರ ತನಿಖೆಯಲ್ಲಿ ಮುಂದುವರಿಯಲು ಸಾಧ್ಯ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ : Inhuman incident in Bangalore: ಬೆಂಗಳೂರಿನಲ್ಲಿ ಅಮಾನವೀಯ ಘಟನೆ : ವ್ಯಕ್ತಿಯನ್ನು ರಸ್ತೆಯಲ್ಲಿ ಎಳೆದೊಯ್ದ ಬೈಕ್ ಸವಾರ

ಇದನ್ನೂ ಓದಿ : Attack on bakery owner: ಬೆಂಗಳೂರಿನ ಬೇಕರಿಯೊಂದರಲ್ಲಿ ಬೈಂದೂರು ಯುವಕನ ಮೇಲೆ ಕಿಡಿಗೇಡಿಗಳಿಂದ ಹಲ್ಲೆ

ಇದನ್ನೂ ಓದಿ : Firing at the house: ಮನೆಯ ಮೇಲೆ ಗುಂಡಿನ ದಾಳಿ: ತಾಯಿ ಮಗು ಸೇರಿ 6 ಮಂದಿಯ ಭೀಕರ ಹತ್ಯೆ

ಇನ್ನೂ ಘಟನೆಯ ಕುರಿತಾಗಿ ಹಾಸ್ಟೆಲ್‌ ನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದು, ಈ ಮೂಲಕವೂ ಕೂಡ ಯಾವುದಾದರೂ ಸುಳಿವು ಸಿಗಬಹುದು ಎಂಬ ಪ್ರಯತ್ನದಲ್ಲಿ ಪೊಲೀಸರಿದ್ದಾರೆ. ಸದ್ಯ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಮೃತ ವಿದ್ಯಾರ್ಥಿಯ ಸಾವನ್ನು ಭೇದಿಸುವ ಪ್ರಯತ್ನದಲ್ಲಿದ್ದಾರೆ.

Student body found: A student’s body was found hanging in the hostel room with his hands tied

Comments are closed.