UP Crime: 3 ವರ್ಷದ ಕಂದಮ್ಮನ ಎದುರಲ್ಲೇ ಪತ್ನಿಯನ್ನು ಕೊಂದು ಪತಿ ಪರಾರಿ

UP Crime: ಮೂರು ವರ್ಷದ ಪುತ್ರಿಯ ಎದುರಲ್ಲೇ ಪತ್ನಿಯನ್ನು ಕೊಲೆ ಮಾಡಿ ತಂದೆಯು ಪರಾರಿಯಾದ ಭೀಕರ ಘಟನೆಯು ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಪಾರಾದ ಕಾನ್ಶಿರಾಮ್​​ ಕಾಲೋನಿಯಲ್ಲಿ ನಡೆದಿದೆ. ಪತ್ನಿಯನ್ನು ಕೊಲೆಗೈದ ಪರಿಯು ಮಗಳನ್ನು ಫ್ಲ್ಯಾಟ್​ನಲ್ಲಿಯೇ ಬಿಟ್ಟು ಎಸ್ಕೇಪ್​ ಆಗಿದ್ದಾನೆ. ಮೃತ ಮಹಿಳೆಯ ಸಹೋದರ ಸ್ಥಳಕ್ಕೆ ಆಗಮಿಸಿದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ.


ಜಾರಾ ಖಾನ್​ ಅಲಿಯಾಸ್​​ ಶಿವಾ ವಿಶ್ವಕರ್ಮಳನ್ನು ಆಕೆಯ ಮುಖದ ಮೇಲೆ ದಿಂಬನ್ನಿಟ್ಟು ಕೊಲೆಗೈಯಲಾಗಿದೆ. ಕಳೆದ ಕೆಲ ದಿನಗಳಿಂದ ಕೊಲೆಗಾರ ಯಾಸಿನ್​​ನ ಮೊದಲ ಪತ್ನಿಯು ಕಾಲೋನಿಯ ಸಮೀಪ ಓಡಾಡುತ್ತಿದ್ದಳು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.


ಮೃತ ಜಾರಾ ಆರೋಪಿ ಯಾಸಿನ್​ನ ಎರಡನೇ ಪತ್ನಿಯಾಗಿದ್ದಳು. ಈಕೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಈತನನ್ನು ವಿವಾಹವಾಗಿದ್ದಳು ಎನ್ನಲಾಗಿದೆ. ಜಾರಾ ಎಷ್ಟು ಬಾರಿ ಕರೆ ಮಾಡಿದರೂ ಫೋನ್​ ರಿಸೀವ್​ ಮಾಡದ ಹಿನ್ನೆಲೆಯಲ್ಲಿ ಆಕೆಯ ಸಹೋದರ ಈಕೆಯ ಮನೆಗೆ ಆಗಮಿಸಿದ್ದಾನೆ. ಇಲ್ಲಿ ತನ್ನ ಸಹೋದರಿಯ ಶವವನ್ನು ಹಾಸಿಗೆಯಲ್ಲಿ ಸುತ್ತಿಟ್ಟಿರೋದನ್ನು ಕಂಡು ಶಾಕ್​ ಆದ ಸಹೋದರ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ವಿಧಿ ವಿಜ್ಞಾನ ತಂಡ ಪರಿಶೀಲನೆ ನಡೆಸಿದೆ. ನಾಪತ್ತೆಯಾಗಿರುವ ಆರೋಪಿ ಯಾಸಿನ್​ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಶೀಘ್ರದಲ್ಲಿಯೇ ಆತನನ್ನು ಬಂಧಿಸುತ್ತೇವೆ ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

up crime husband murdered wife in front of three year old daughter in lucknow

ಇದನ್ನು ಓದಿ : India Ban International flights : ಭಾರತದಲ್ಲಿ ಫೆಬ್ರವರಿ 28 ರವರೆಗೆ ಅಂತರಾಷ್ಟ್ರೀಯ ವಿಮಾನ ಹಾರಾಟ ಬಂದ್‌

ಇದನ್ನೂ ಓದಿ : Siddaramaiah outrage : ಕೊರೋನಾ ಚಿಕಿತ್ಸೆ ಹೊಣೆ ಖಾಸಗಿಯವರಿಗೆ, ಸರ್ಕಾರ ನಿದ್ರೆಗೆ : ಚಾಟಿ ಬೀಸಿದ ಸಿದ್ಧರಾಮಯ್ಯ

Comments are closed.