three died in ksrtc bus and car collision : ಸರ್ಕಾರಿ ಬಸ್​ಗೆ ಕಾರು ಡಿಕ್ಕಿ : ಭಯಾನಕ ಅಪಘಾತದಲ್ಲಿ ಆರು ತಿಂಗಳ ಮಗು ಸೇರಿದಂತೆ ಮೂವರು ಸಾವು

ರಾಮನಗರ : three died in ksrtc bus and car collision : ಕೆಎಸ್ಆರ್ಟಿಸಿ ಬಸ್ ಹಾಗೂ ಇನ್ನೋವಾ ಕಾರಿನ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ. ರಾಮನಗರ ಜಿಲ್ಲೆಯ ಸಾತನೂರು ಬಳಿಯ ಕೆಮ್ಮಾಳೆ ದೊಡ್ಡಿ ಗ್ರಾಮದ ಬಳಿ ಘಟನೆ ನಡೆದಿದೆ. ಕೆಎಸ್ಆರ್ಟಿಸಿ ಬಸ್ ಹಾಗೂ ಇನೋವಾ ಕಾರ್ ನಡುವೆ ಡಿಕ್ಕಿಯಾಗಿದ್ದು, ಡಿಕ್ಕಿಯ ತೀವ್ರತೆಗೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತರನ್ನು ಉಡುಪಿ ಮೂಲದ ಇನ್ನೋವಾ ಕಾರು ಚಾಲಕ ಉಮೇಶ್ ಕಾರಿನಲ್ಲಿದ್ದ ಅಕ್ಷತಾ ಹಾಗೂ 6 ತಿಂಗಳ ಗಂಡು ಮಗು ಸುಮಂತ್ ಎಂದು ಗುರುತಿಸಲಾಗಿದೆ. ಕನಕಪುರದ ರೆಸ್ಟೋರೆಂಟ್ ಒಂದರಲ್ಲಿ ಕೆಲಸ‌‌ಮಾಡುತ್ತಿದ್ದ ಸುರೇಂದ್ರ ಎಂಬುವರರು ತಮ್ಮ ಸ್ನೇಹಿತರ ಕಾರಿನಲ್ಲಿ ಉಡುಪಿಯಿಂದ ಕನಕಪುರಕ್ಕೆ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಇನ್ನೊಂದು ಗಂಟೆ ಪ್ರಯಾಣ ಮುಗಿದಿದ್ದರೇ ಸುರೇಂದ್ರ ಸುರಕ್ಷಿತವಾಗಿ ತಮ್ಮ ಕುಟುಂಬದ ಜೊತೆ ತಾವು ಕೆಲಸ ಮಾಡುವ ಸ್ಥಳ ತಲುಪುತ್ತಿದ್ದರು. ಅಪಘಾತದ ತೀವ್ರತೆಗೆ ಸುರೇಂದ್ರ ಅವರ ಪುಟ್ಟ ಮಗುವು ಸ್ಥಳದಲ್ಲೇ ಸಾವನ್ನಪ್ಪಿದ್ದು, ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ. ಕಳೆದ ಕೆಲ ವರ್ಷಗಳ ಹಿಂದೆಯಷ್ಟೇ ವಿವಾಹವಾಗಿದ್ದ ಸುರೇಂದ್ರ ಹೊಟ್ಟೆಪಾ ಡಿಗಾಗಿ ಉಡುಪಿಯಿಂದ ಕನಕಪುರಕ್ಕೆ ಬಂದು ಅಲ್ಲಿನ ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಸುರೇಂದ್ರ ಜೊತೆ ಕಾರಿನಲ್ಲಿದ್ದ ನವನೀತ್ ಎಂಬುವವರಿಗೂ ಗಾಯಗಳಾಗಿದ್ದು, ಗಾಯಾಳುಗಳನ್ನು ಸಾತನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಗೆ ಕೆಎಸ್ಆರ್ಟಿಸಿ ಬಸ್ ನ ಮೀತಿ ಮೀರಿದ ವೇಗವೇ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆದರೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ‌. ಅಪಘಾತದ ತೀವ್ರತೆಗೆ ಮಹಿಳೆ ಇನ್ನೋವಾದಿಂದ ದೂರಕ್ಕೆ ಎಸೆಯಲ್ಪಟ್ಟಿದ್ದು, ರಸ್ತೆ‌ ಮಧ್ಯೆ ಆರು ತಿಂಗಳ ಗಂಡುಮಗು ತಲೆ ಒಡೆದ ಸ್ಥಿತಿಯಲ್ಲಿ ಬಿದ್ದಿದ್ದು, ಭೀಕರ ಅಪಘಾತದ ದೃಶ್ಯ ನೋಡುಗರ ಎದೆ ನಡುಗಿಸುವಂತಿತ್ತು. ಪುಟ್ಟ ಕಂದನ ದಾರುಣ ಸಾವು ಕಂಡ ಸ್ಥಳೀಯರು, ಸಾರ್ವಜನಿಕರು ಕಣ್ಣೀರಿಟ್ಟಿದ್ದಾರೆ. ನಿನ್ನೆಯಷ್ಟೇ ಬೆಂಗಳೂರಿನಲ್ಲಿ ಉಡುಪಿ ಮೂಲದ ವಿದ್ಯಾರ್ಥಿಯೊಬ್ಬ ಅತಿವೇಗವಾಗಿ ಹೊಂಡಾ ಸಿಟಿ ಕಾರು ಚಲಾಯಿಸಿ ಅಪಘಾತಕ್ಕಿಡಾಗಿ ಸಾವನ್ನಪ್ಪಿದ್ದ. ಅದರ ಬೆನ್ನಲ್ಲೇ ಮತ್ತೊಂದು ಅಪಘಾತದಲ್ಲಿ ಉಡುಪಿ ಮೂಲದ ಕುಟುಂಬ ಪ್ರಾಣ ಕಳೆದುಕೊಂಡಿದೆ.

Nice road Accident : ಬೆಂಗಳೂರಿನಲ್ಲಿ ಕಾರು- ಬಸ್ ಅಪಘಾತ : ಕೋಟ ಮೂಲದ ವಿದ್ಯಾರ್ಥಿ ಸೇರಿ, ಇಬ್ಬರ ಸಾವು

ಬೆಂಗಳೂರು : ಕಾರು ಹಾಗೂ ಮಿನಿ ಬಸ್‌ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿಗಳಿಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೆಂಗೇರಿಯ ಸೋಂಪುರ ಗೇಟ್ ಬಳಿಯ ನೈಸ್‌ ರಸ್ತೆಯಲ್ಲಿ (Nice road Accident) ನಡೆದಿದೆ. ಅಪಘಾತದಲ್ಲಿ ಬಸ್‌ನಲ್ಲಿದ್ದ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಉಡುಪಿ ಜಿಲ್ಲೆಯ ಕೋಟ ಮೂಲದ ಎಂ.ಎಸ್.‌ ರಾಮಯ್ಯ ಕಾಲೇಜಿನ ಅಂತಿಮ ವರ್ಷದ ಡಿಪ್ಲೋಮಾ ವಿದ್ಯಾರ್ಥಿ ಸುಮುಖ್‌ ಎಸ್.‌ (22 ವರ್ಷ) ಹಾಗೂ ಮೈಸೂರು ರಸ್ತೆಯ ಆರ್‌ವಿ ಕಾಲೇಜಿನ ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿನಿ, ಆರ್‌ಆರ್‌ ನಗರದ ನಿವಾಸಿ ಲೀನಾ ಜಿ ನಾಯ್ಡು (18 ವರ್ಷ) ಎಂಬವರೇ ಮೃತ ವಿದ್ಯಾರ್ಥಿಗಳಾಗಿದ್ದಾರೆ. ಉಡುಪಿ ಜಿಲ್ಲೆಯ ಕೋಟ ಮೂಲದ ಸಮುಖ್‌ ಕೂಡ ಆರ್‌ ಆರ್‌ ನಗರದ ನಿವಾಸಿಯಾಗಿದ್ದಾರೆ. ಸಂಜೆ 5.15ರ ಸುಮಾರಿಗೆ ಈ ಘಟನೆ ನಡೆದಿದ್ದು, ಅಪಘಾತದ ನಂತರ ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು ಎಂದು ಕೆಂಗೇರಿ ಸಂಚಾರ ಪೊಲೀಸರು ತಿಳಿಸಿದ್ದಾರೆ.

ಢಿಕ್ಕಿಯ ರಭಸಕ್ಕೆ ಖಾಸಗಿ ಬಸ್ ಪಕ್ಕಕ್ಕೆ ಬಿದ್ದಿದೆ. ಕೊಚ್ಚಿಹೋದ ದೇಹಗಳನ್ನು ತೆಗೆಯಲು ಪೊಲೀಸರು ಕಾರಿನ ಮೇಲ್ಛಾವಣಿಯನ್ನು ಕತ್ತರಿಸಬೇಕಾಯಿತು. ಅಪಘಾತದ ಸ್ಥಳವನ್ನು ತಲುಪಿದ ಸುಮುಖ್ ತಂದೆ ಸುಧಾಕರ್ ಅವರ ದೇಹವನ್ನು ನೋಡಿ ಪ್ರಜ್ಞೆ ಕಳೆದುಕೊಂಡರು. ಅವರನ್ನು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಸುಮುಖ್ ನಿಯಂತ್ರಣ ತಪ್ಪಿದ ಕಾರು ಲೇನ್‌ಗೆ ಜಿಗಿದು ಎದುರು ದಿಕ್ಕಿನಿಂದ ಬರುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದ್ದರಿಂದ ಈ ಅವಘಡ ಸಂಭವಿಸಿದೆ.

ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಕಾರು ಪಿಇಎಸ್ ಕಾಲೇಜು ಕಡೆಯಿಂದ ಹೋಗುತ್ತಿದ್ದು, ಬಸ್ ಕೆಂಗೇರಿಯಿಂದ ಬರುತ್ತಿತ್ತು. ಬಿಡಿಎ ಟೋಲ್ ಜಂಕ್ಷನ್ ಬಳಿ ಸುಮುಖ್ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಬಲಕ್ಕೆ ಪಲ್ಟಿಯಾಗಿದೆ. ಕಾರಿನ ಮುಂಭಾಗದ ಟೈರ್‌ ಒಡೆದು ಖಾಸಗಿ ಬಸ್‌ ಹಿಂದೆ ಬರುತ್ತಿದ್ದ ಟೊಯೊಟಾ ಫಾರ್ಚುನರ್‌ಗೆ ಡಿಕ್ಕಿ ಹೊಡೆದಿದೆ. ಆದರೆ, ಫಾರ್ಚೂನರ್‌ನಲ್ಲಿದ್ದವರು ವಾಹನಕ್ಕೆ ಹಾನಿಯಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತ ನಡೆಯುತ್ತಿದ್ದಂತೆಯೇ ಲೀನಾ ಹಾಗೂ ಸುಮುಖ್‌ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇಬ್ಬರ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ. ಬಸ್‌ ಚಾಲಕನ ಕಾಲಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ಕೆಂಗೇರಿ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ : cabinet will be expand :ಮುಂದಿನ ಮೂರು ದಿನಗಳೊಳಗಾಗಿ ಸಂಪುಟ ವಿಸ್ತರಣೆಯೆಂದ ಯಡಿಯೂರಪ್ಪ

ಇದನ್ನೂ ಓದಿ : lpg cylinder price increased : ಶ್ರೀಸಾಮಾನ್ಯನ ಜೇಬಿಗೆ ಮತ್ತೊಂದು ಬರೆ : ಗೃಹ ಬಳಕೆಯ ಸಿಲಿಂಡರ್​ ದರದಲ್ಲಿ 50 ರೂ. ಏರಿಕೆ

three died in ksrtc bus and car collision at ramanagara

Comments are closed.