ನಿತ್ಯಭವಿಷ್ಯ : 16-07-2020

0

ಮೇಷರಾಶಿ
ದಂಪತಿಗಳಿಗೆ ಸಂತಾನದ ಲಾಭವಿದೆ. ವ್ಯವಹಾರದಲ್ಲಿ ತಂದೆ ಮಕ್ಕಳೊಳಗೆ ಭಿನ್ನಾಭಿಪ್ರಾಯ ಮೂಡಬಹುದು. ದೂರಸಂಚಾರದಲ್ಲಿ ಅಪಘಾತದ ಭೀತಿ ಇದೆ. ದೇವತಾ ಕಾರ್ಯಗಳಲ್ಲಿ ಸಂತಸ ಹಾಗೂ ನೆಮ್ಮದಿ ಇದೆ. ದಾಂಪತ್ಯದಲ್ಲಿ ವಿರಸ, ಅಹಂಭಾವ, ವಾಗ್ವಾದ ಅಧಿಕ, ವಾಹನ ಚಾಲನೆಯಲ್ಲಿ ಎಚ್ಚರ, ಪೆಟ್ಟಾಗುವ ಸಾಧ್ಯತೆ, ಮಾತೃವಿನಿಂದ ಅನುಕೂಲ, ಕೃಷಿ ಭೂಮಿಯಿಂದ ಧನಲಾಭ.

ವೃಷಭರಾಶಿ
ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ಪಿತ್ರಾರ್ಜಿತ ಆಸ್ತಿಯಿಂದ ಲಾಭ, ತಾಂತ್ರಿಕ ವೃತ್ತಿಯವರಿಗೆ ಮುನ್ನಡೆ ಇದೆ. ರೈತಾಪಿ ವರ್ಗಕ್ಕೆ ಋಣಭಾಧೆ ಪರಿಹಾರವಾಗಲಿದೆ. ದಿನಸಿ ವರ್ತಕರಿಗೆ ಲಾಭಾದಿಕ್ಯವಿದೆ. ಆರೋಗ್ಯ ಭಾಗ್ಯವು ಸುಧಾರಿಸುತ್ತಾ ಹೋಗಲಿದೆ. ಧನ ವಿನಿಯೋಗದಿಂದ ಆದಾಯ ಉತ್ತಮ. ವ್ಯವಹಾರಗಳಲ್ಲಿ ಅನುಕೂಲ, ಉದ್ಯೋಗ ಸಂಕಷ್ಟದಿಂದ ಮುಕ್ತಿ,
ಉತ್ತಮ ಉದ್ಯೋಗ ಲಭಿಸುವುದು.

ಮಿಥುನರಾಶಿ
ಆರ್ಥಿಕ ಸಂಕಷ್ಟ ಅಧಿಕ, ಪಿತ್ತದೋಷದಿಂದ ಹಿರಿಯರಿಗೆ ಆರೋಗ್ಯ ಕೆಡಲಿದೆ. ಮಕ್ಕಳಿಗೆ ಉದ್ಯೋಗ ಲಾಭದ ಯೋಗ ಸಂತಸ ತರಲಿದೆ. ವೃತ್ತಿರಂಗದಲ್ಲಿ ಕೈಕೆಳಗಿನವರ ಅಸಹಕಾರದಿಂದ ದುಡಿಮೆ ಬೇಸರ ತರಲಿದೆ. ನೌಕರ ವರ್ಗಕ್ಕೆ ನಿರಾಸೆ ಇದೆ. ಮಕ್ಕಳಿಂದ ನಷ್ಟ, ನೆರೆಹೊರೆ ಬಂಧುಗಳಿಂದ ಸಂಕಷ್ಟ, ಕುಟುಂಬಸ್ಥರಿಂದಲೇ ಅವಮಾನ, ಗೌರವಕ್ಕೆ ಧಕ್ಕೆ.

ಕಟಕರಾಶಿ
ಉದ್ಯಮ-ವ್ಯಾಪಾರದಲ್ಲಿ ಲಾಭ, ವ್ಯವಹಾರದಲ್ಲಿ ಅನುಕೂಲ, ಆರ್ಥಿಕವಾಗಿ ಎಷ್ಟಿದ್ದರೂ ಸಾಲದು ಎಂಬ ಅನುಭವ ಉಂಟಾದೀತು. ಕುಟುಂಬ ಕಲಹ ಮೂರನೆಯವರ ಮಧ್ಯಸ್ಥಿಕೆಯಿಂದ ಕಾರ್ಯ ಸಾಧನೆಯಾದೀತು. ಆರೋಗ್ಯದಲ್ಲಿ ಸುಧಾರಣೆ ಕಂಡರೂ ಪ್ರಯಾಣದಿಂದ ಆರೋಗ್ಯ ಕೆಡಲಿದೆ. ಉತ್ತಮ ಹೆಸರು ಗೌರವ ಪ್ರಾಪ್ತಿ, ಮಾತೃವಿನಿಂದ ಅನುಕೂಲ, ಪಿತ್ರಾರ್ಜಿತ ಸಂಪತ್ತು ಲಭಿಸುವುದು.

ಸಿಂಹರಾಶಿ
ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಚಾಡಿ ಮಾತಿಗೆ ಮನಕೊಟ್ಟು ಸಂಬಂಧಿಕರೊಳಗೆ ಕಲಹ ತಂದೀತು. ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳಿಗೆ ಪರಸ್ಥಳಯಾನವಿದೆ. ಕೋರ್ಟು ಕಚೇರಿಯ ಕಾರ್ಯದಲ್ಲಿ ಮುನ್ನಡೆ ಇದೆ. ದಿನಾಂತ್ಯದಲ್ಲಿ ಒಳ್ಳೆಯ ವಾತಾವರಣ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸಾಲ ಬಾಧೆ, ಮಾನಸಿಕ ಹಿಂಸೆ, ಉದ್ಯೋಗ ಬದಲಾವಣೆಯಿಂದ ಅನುಕೂಲ.

ಕನ್ಯಾರಾಶಿ
ಪ್ರಯಾಣದಿಂದ ಅದೃಷ್ಟ ಒಲಿಯುವುದು, ಹಲವು ಕಾರ್ಯಗಳಲ್ಲಿ ತೊಡಗಿಸಿದ ಹಣ ಫ‌ಲಿತಕ್ಕೆ ಬಾರದೆ ಹಪಹಪಿಸುವಂತಾದೀತು. ವಿನಾಕಾರಣ ಖರ್ಚುವೆಚ್ಚ ಹೆಚ್ಚಲಿದೆ. ಕಲಿತ ವಿದ್ಯೆ ಫ‌ಲ ನೀಡಲಿದೆ. ಸ್ಥಿರ ಸೊತ್ತುಗಳ ಖರೀದಿಗಾಗಿ ಧನವ್ಯಯವು ತೋರಿಬರಲಿದೆ.ಕೋರ್ಟ್ ಕೇಸ್‍ಗಳಲ್ಲಿ ಜಯ, ಕೌಟುಂಬಿಕ ಜೀವನದಲ್ಲಿ ಅಶಾಂತಿ, ಯೋಚನೆಗಳಿಂದ ನಿದ್ರಾಭಂಗ.

ತುಲಾರಾಶಿ
ಉದ್ಯೋಗ ಸ್ಥಳದಲ್ಲಿ ವಾಗ್ವಾದ, ಪುನಃ ನಿವೇಶನ ಖರೀದಿ ಯೋಗವಿದೆ. ಕೋಪ, ಉದ್ರೇಕದಿಂದ, ರಕ್ತದೋಷದಿಂದ ಆರೋಗ್ಯದಲ್ಲಿ ಏರುಪೇರಾದೀತು. ಸಂಚಾರದಿಂದ ದೂರವಿದ್ದಷ್ಟು ಉತ್ತಮ. ಶತ್ರುಗಳ ಕಾಟ ದಮನ ಕಾರ್ಯದಲ್ಲಿ ವಿಘ್ನ ಭಯವಿದೆ. ಕಲಹ, ಕಿರಿಕಿರಿ ಹೆಚ್ಚಾಗುವುದು, ಆಕಸ್ಮಿಕ ದುರ್ಘಟನೆ, ಆತ್ಮ ಸಂಕಟ, ಅಧಿಕವಾದ ಉಷ್ಣ, ಪಿತ್ತ ಬಾಧೆ,

ವೃಶ್ಚಿಕರಾಶಿ
ಸ್ನೇಹಿತರಿಂದ ಉದ್ಯೋಗ ನಷ್ಟ, ಪಾಲು ಬಂಡವಾಳದಲ್ಲಿ ಅಂತಃಕಲಹವಾದೀತು ಹೋಟೇಲ್‌ , ಬೀದಿ ಬದಿ ವ್ಯಾಪಾರಸ್ಥರಿಗೆ ಆತಂಕ ಕಡಿಮೆಯಾಗಲಿದೆ. ವಿಲಾಸೀ ಸಾಮಾಗ್ರಿಗಳ ವರ್ತಕರಿಗೆ ಲಾಭಾಂಶ ಹೆಚ್ಚಲಿದೆ. ರಾಜಕೀಯದಲ್ಲಿ ಸ್ಥಾನಭ್ರಂಶ ಯೋಗವಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ, ಪ್ರಯಾಣದಲ್ಲಿ ಸಂಕಷ್ಟ, ಆರೋಗ್ಯದಲ್ಲಿ ಏರುಪೇರು.

ಧನಸ್ಸುರಾಶಿ
ವಿಪರೀತ ರಾಜಯೋಗ, ದೇಹದಲ್ಲಿ ಆಲಸ್ಯ, ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಗಳಿಗೆ ನಿರುತ್ಸಾಹ ತರಲಿದೆ. ಬಾಡಿಗೆದಾರರಿಗೆ ಗೃಹ ಬದಲಿ ಸಂಭವವಿದೆ. ಹೊಸ ಉದ್ಯೋಗವೊಂದು ಅಭಿವೃದ್ಧಿಗೆ ತೆರೆದುಕೊಳ್ಳಲಿದೆ. ಹಿರಿಯರ ದುರಾಭಿಮಾನದ ವರ್ತನೆ ಬೇಸರ ತಂದೀತು. ಅಧಿಕ ನಿದ್ರಾಭಾವ, ಮಿತ್ರರಿಂದ ಸಾಲ ಸಹಾಯ, ಆಕಸ್ಮಿಕ ಅದೃಷ್ಟ ಯೋಗ.

ಮಕರರಾಶಿ
ಕೆಲಸದಲ್ಲಿ ಮೇಲಾಧಿಕಾರಿಗಳ ಶ್ಲಾಘನೆಯಿಂದ ತುಸು ಸಂತಸವಾಗಲಿದೆ. ಯೋಗ್ಯ ವಯಸ್ಕರಿಗೆ ಮಂಗಲ ಕಾರ್ಯದ ಪ್ರಸ್ತಾಪ ಬಂದೀತು. ಕಾರ್ಯಕ್ಷೇತ್ರದಲ್ಲಿ ಕಾರ್ಯದೊತ್ತಡವಿದೆ. ವೈಯಕ್ತಿಕ ಆರೋಗ್ಯದಲ್ಲಿ ಜಾಗ್ರತೆ. ಪ್ರೀತಿ ಪ್ರೇಮ ವಿಚಾರದಲ್ಲಿ ಯಶಸ್ಸು, ಕುಟುಂಬದಲ್ಲಿ ಮನಃಸ್ತಾಪ, ಆಕಸ್ಮಿಕ ಉದ್ಯೋಗ ಬಡ್ತಿ, ವ್ಯಾಪಾರೋದ್ಯಮಸ್ಥರಿಗೆ ಲಾಭ.

ಕುಂಭರಾಶಿ
ಸಂಗಾತಿಯಿಂದ ಅನುಕೂಲ, ದುಡುಕು ಬುದ್ಧಿಯಿಂದ ಆಕಸ್ಮಿಕವಾಗಿ ಧನವ್ಯಯವಾದೀತು. ವಾತದೋಷಾಧಿಗಳಿಂದ ಹಿರಿಯರಿಗೆ ಔಷಧಿ ಸೇವನೆ ಅನಿವಾರ್ಯವಾದೀತು. ಸಂಚಾರದಿಂದ ದೂರವಿರಿ. ಜಲವೃತ್ತಿಯವರಿಗೆ ಉನ್ನತಿ ಇದೆ. ಪಿತ್ರಾರ್ಜಿತ ಸ್ವತ್ತು ಒಲಿಯುವುದು, ಪ್ರೀತಿ ಮಾಡಲು ಮನಸ್ಸು, ಸ್ಥಿರಾಸ್ತಿ ಮೇಲೆ ಸಾಲ ಪಡೆಯುವ ಆಲೋಚನೆ.

ಮೀನರಾಶಿ
ಸ್ವಯಂಕೃತ ಅಪರಾಧಗಳಿಂದ ನಷ್ಟ, ಅವಕಾಶಗಳು ಕೈ ತಪ್ಪುವುದು, ಹೃದಯ ಸಂಬಂಧಿ ಸಮಸ್ಯೆ ಇರುವವರು ಎಚ್ಚರ, ಸ್ವಾಭಿಮಾನಕ್ಕೆ ಧಕ್ಕೆಯಾಗಲಿದೆ. ಸ್ವಲ್ಪದರಲ್ಲಿ ಅಪಘಾತ ಭಯ ತಪ್ಪಲಿದೆ. ಉದ್ಯೋಗಿಗಳಿಗೆ ಮುಂಭಡ್ತಿ ಸಂಭವವಿದೆ. ಕ್ರೀಡಾ ಕಾರ್ಯಕ್ರಮಗಳಲ್ಲಿ ಯಶೋಲಾಭವಿದೆ. ದಿನಸಿ ವ್ಯಾಪಾರಿಗಳಿಗೆ ಒಳ್ಳೆ ಲಾಭ ಸಿಗಲಿದೆ. ಆಕಸ್ಮಿಕ ತೊಂದರೆ ಎದುರಾಗುವ ಸಾಧ್ಯತೆ, ಬಂಧುಗಳಿಂದ ಕಿರಿಕಿರಿ, ಸಾಲ ಬಾಧೆ.

Leave A Reply

Your email address will not be published.