ಈ ಬಾರಿ ಸಾಮೂಹಿಕ ನಾಗರಪಂಚಮಿ ಆಚರಿಸುವಂತಿಲ್ಲ : ಉಡುಪಿ ಜಿಲ್ಲಾಧಿಕಾರಿ

0

ಉಡುಪಿ : ಕೊರೊನಾ ವೈರಸ್ ಸೋಂಕು ಇದೀಗ ಕರಾವಳಿಯ ಧಾರ್ಮಿಕ ಆಚರಣೆಗಳ ಮೇಲೆ ಭಾರೀ ಹೊಡೆತ ಕೊಟ್ಟಿದೆ. ಕರಾವಳಿಯ ಜನರು ಹೆಚ್ಚು ಶ್ರದ್ದಾ ಭಕ್ತಿಯಿಂದ ಆಚರಿಸುವ ನಾಗರಪಂಚಮಿ ಹಬ್ಬಕ್ಕೂ ಕೊರೊನಾ ಅಡ್ಡಿಯಾಗಿದೆ.

ಆಷಾಡ ಕಳೆದು ಶ್ರಾವಣ ಮಾಸದಲ್ಲಿ ಬರುವ ನಾಗರ ಪಂಚಮಿ ಹಬ್ಬದಂದು ಪ್ರಾರಂಭಗೊಳ್ಳುವ ಹಬ್ಬಗಳ ಸಂಭ್ರಮ ವರ್ಷವಿಡಿ ಸಾಲು ಸಾಲು ಹಬ್ಬಗಳ ಮೂಲಕ ಮುಂದುವರಿಯುತ್ತದೆ. ಆದರೆ ಜುಲೈ 25ರಂದು ನಡೆಯಲಿರುವ ನಾಗರ ಪಂಚಮಿ ಹಬ್ಬವನ್ನು ಸಾಮೂಹಿಕವಾಗಿ ಆಚರಣೆ ಮಾಡದಂತೆ ಉಡುಪಿ ಜಿಲ್ಲಾಡಳಿತ ನಿಷೇಧ ಹೇರಿದೆ.

ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿರುವುದರಿಂದಾಗಿ ಕೇಂದ್ರ ಸರಕಾರ ನಿರ್ದೇಶದ ಮೇರೆಗೆ ಸಾಮೂಹಿಕವಾಗಿ ಜನರು ಬಾಗಿಯಾಗುವ ಯಾವುದೇ ಹಬ್ಬ ಹರಿದಿನಗಳನ್ನು ಆಚರಣೆ ಮಾಡದಂತೆ ಮುಖ್ಯಮಂತ್ರಿಗಳು ಆದೇಶ ಹೊರಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಶ್ರಾವಣ ಮಾಸದ ಯಾವುದೇ ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸದೆ ಜನರು ತಮ್ಮ ತಮ್ಮ ಮನೆಯಲ್ಲಿಯೇ ಆಚರಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಮನವಿ ಮಾಡಿಕೊಂಡಿದ್ದಾರೆ.

Leave A Reply

Your email address will not be published.