Horoscope : ದಿನಭವಿಷ್ಯ- ಅದೃಷ್ಟ ನಿಮ್ಮ ಹುಡುಕಿಕೊಂಡು ಬರಲಿದೆ

ಮೇಷರಾಶಿ
ನಿಮ್ಮ ನಿರೀಕ್ಷೆಗಳು ಶೀಘ್ರದಲ್ಲಿಯೇ ಸಾಕಾರಗೊಳ್ಳಲಿದೆ, ಭವಿಷ್ಯದಲ್ಲಿ ಆರ್ಥಿಕವಾಗಿ ಸದೃಢರಾಗಲು ಹಲವು ಅವಕಾಶಗಳು ಗೋಚರಿಸಲಿದೆ, ಕುಟುಂಬ ಸದಸ್ಯರ ಜೊತೆ ಹೊಂದಾಣಿಕೆ ಇರಲಿ, ಅನಗತ್ಯ ಯೋಚನೆಯನ್ನು ದೂರ ಮಾಡಿಕೊಳ್ಳಿ, ವೈವಾಹಿಕ ಜೀವನವು ಸಂತಸದಿಂದ ಕೂಡಿರಲಿದೆ, ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ.

ವೃಷಭರಾಶಿ
ನೀವಿಂದು ಆರಾಮವಾಗಿರಲಿದ್ದೀರಿ, ಹಣಕಾಸಿನ ವಿಷಯದಲ್ಲಿ ಚೇತರಿಕೆ ಕಂಡುಬರಲಿದೆ, ಖರ್ಚು ವೆಚ್ಚಗಳು ಹೆಚ್ಚುವ ಸಾಧ್ಯತೆ, ಕೌಟುಂಬಿಕ ಒತ್ತಡ ಹೆಚ್ಚಲಿದೆ, ಪ್ರಿಯಕರನ ಜೊತೆ ಸಮಯ ಕಳೆಯುವಿರಿ, ಅವಿವಾಹಿತರಿಗೆ ವಿವಾಹ ಭಾಗ್ಯ, ವೈವಾಹಿಕ ಜೀವನದಲ್ಲಿ ಹಂತ ಹಂತವಾಗಿ ನೆಮ್ಮದಿ, ಸಮಯವನ್ನು ವ್ಯರ್ಥ ಮಾಡಬೇಡಿ.

ಮಿಥುನರಾಶಿ
ಕುಟುಂಬ ಸದಸ್ಯರ ಜೊತೆಗಿನ ಪ್ರಯಾಣ ಸುಖಕರವಾಗಿರಲಿದೆ, ಹಣಕಾಸಿನ ಸ್ಥಿತಿ ಸುಧಾರಣೆಯನ್ನು ಕಾಣಲಿದೆ, ಖರ್ಚು ವೆಚ್ಚಗಳ ಮೇಲೆ ಹಿಡಿತವಿರಲಿ, ಪ್ರೀತಿ ಮತ್ತು ಪ್ರಣಯ ಸಂತೋಷಗೊಳಿಸಲಿದೆ, ಭವಿಷ್ಯದ ಯೋಜನೆಗಳ ಬಗ್ಗೆ ಚಿಂತನೆ, ಹತ್ತಿರ ಬಂಧುಗಳ ಭೇಟಿಯಿಂದ ನೆಮ್ಮದಿ, ಕೌಟುಂಬಿಕವಾಗಿ ನೆಮ್ಮದಿ.

ಕರ್ಕಾಟಕರಾಶಿ
ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಖರ್ಚು ವೆಚ್ಚದ ಮೇಲೆ ಹಿಡಿತವಿರಲಿ, ಮುಂದಿನ ದಿನಗಳಲ್ಲಿ ಆರ್ಥಿಕ ಸಮಸ್ಯೆ ಎದುರಾಗುವ ಸಾಧ್ಯತೆ, ಪ್ರೀತಿ ಪಾತ್ರರ ಭೇಟಿಯಿಂದ ಮನಸಿಗೆ ಸಂತಸ, ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ತಿಗೊಳಿಸುವಿರಿ, ಸ್ನೇಹಿತರು ನಿಮ್ಮ ಗುಣಗಾನ ಮಾಡಲಿದ್ದಾರೆ, ಕಾರ್ಯ ಕ್ಷೇತ್ರದಲ್ಲಿ ಮೇಲಾಧಿಕಾರಿಗಳ ಪ್ರಶಂಸೆ.

ಇದನ್ನೂ ಓದಿ : ದೇವಾಲಯಗಳಲ್ಲಿ ಡ್ರೆಸ್‌ ಕೋಡ್‌ ಜಾರಿ ಮಾಡಿ : ರಾಜ್ಯ ಸರಕಾರಕ್ಕೆ ಹಿಂದೂ ಮಹಾಸಭಾ ಎಚ್ಚರಿಕೆ

ಸಿಂಹರಾಶಿ
ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಆಧ್ಯಾತ್ಮದ ಮೊರೆ ಹೋಗುವಿರಿ, ಧ್ಯಾನ ಮತ್ತು ಯೋಗ ಮಾನಸಿಕ ಸದೃಢತೆಯನ್ನು ಹೆಚ್ಚಿಸುತ್ತದೆ, ಧನಾತ್ಮಕ ಯೋಚನೆಗಳಿಂದ ನೆಮ್ಮದಿ ದೊರೆಯಲಿದೆ, ನಿಮ್ಮ ಬುದ್ದಿವಂತಿಕೆ ಉತ್ತಮ ಲಾಭವನ್ನು ತಂದುಕೊಡಲಿದೆ, ವೈವಾಹಿಕ ಜೀವನ ಉತ್ತಮವಾಗಿರಲಿದೆ, ಆತ್ಮೀಯರಿಂದ ಸಂತಸ.

ಕನ್ಯಾರಾಶಿ
ಸುತ್ತಮುತ್ತಲಿನ ಜನರು ಬೆಂಬಲ ನೀಡಲಿದ್ದಾರೆ, ತಜ್ಞರ ಸಲಹೆಯ ಮೇಲೆ ಮಾಡಿದ ಹಣದ ಹೂಡಿಕೆ ಲಾಭವನ್ನು ತಂದುಕೊಡಲಿದೆ, ಸಾಮಾಜಿಕ ಕಾರ್ಯಗಳಲ್ಲಿ ಮುಕ್ತವಾಗಿ ಭಾಗವಹಿಸುವಿರಿ, ಸಾಮರ್ಥ್ಯ ಮತ್ತು ಭವಿಷ್ಯದ ಯೋಜನೆಗಳನ್ನು ಮರು ಮೌಲ್ಯ ಮಾಪನ ಮಾಡುವ ಸಮಯ, ಮನೆಯಲ್ಲಿ ಸಂಭ್ರಮ, ಸಂತಸ ಕಂಡುಬರಲಿದೆ.

ತುಲಾರಾಶಿ
ಹಳೆಯ ವಿಚಾರಗಳು ನಿಮ್ಮ ಪ್ರಗತಿಗೆ ಅಡ್ಡಿಯಾಗಲಿದೆ, ಮನೆಯಿಂದ ಹೊರ ಹೋಗುವ ಮುನ್ನ ಹಿರಿಯರ ಸಲಹೆ ಆಲಿಸಿ, ಹೊಸ ಯೋಜನೆಗಳು ಉತ್ತಮ ಲಾಭವನ್ನು ತಂದುಕೊಡಲಿದೆ, ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಯತ್ನಿಸಿ, ಅವ್ಯವಸ್ಥೆ ನಿಮಗೆ ಬೇಸರವನ್ನು ಮೂಡಿಸಲಿದೆ, ಕುಟುಂಬ ಸದಸ್ಯರ ಆಧ್ಯತೆಗಳಿಗೆ ಪ್ರಾಮುಖ್ಯತೆಯನ್ನು ನೀಡಿ.

ವೃಶ್ಚಿಕರಾಶಿ
ಕೆಲಸ ಕಾರ್ಯಗಳು ವೇಗವಾಗಿ ಮುಕ್ತಾಯವನ್ನು ಕಾಣಲಿದೆ, ಮಕ್ಕಳಿಂದ ನೆಮ್ಮದಿ, ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿ, ಸಂಗಾತಿಯ ಬೇಡಿಕೆಗಳಿಂದ ಒತ್ತಡ, ಸಾಲಗಾರರಿಂದ ಸಾಲದ ಹಣ ಮರಳಿ ಬರಲಿದೆ, ಹಣಕಾಸಿನ ಸಮಸ್ಯೆಗಳು ಪರಿಹಾರವಾಗಲಿದೆ, ಹೊಸ ಸ್ನೇಹಿತರ ಭೇಟಿ ಹೆಚ್ಚು ಲಾಭವನ್ನು ತಂದುಕೊಡಲಿದೆ.

ಇದನ್ನೂ ಓದಿ : Tirupathi Secrets : ತಿರುಪತಿ ತಿಮ್ಮಪ್ಪನ ವಿಗ್ರಹದ ವಿಸ್ಮಯ ನಿಮಗೆ ಗೊತ್ತಾ ?

ಧನಸ್ಸುರಾಶಿ
ಆಸ್ತಿ ಖರೀದಿ ಮಾರಾಟ ಅಧಿಕ ಲಾಭವನ್ನು ತಂದುಕೊಡಲಿದೆ, ಆರ್ಥಿಕ ಸಮಸ್ಯೆಯ ಪರಿಹಾರಕ್ಕೆ ನಾನಾ ಮಾರ್ಗಗಳು ಗೋಚರ, ನಿಮ್ಮ ಹೆಸರನ್ನು ಕೆಡಿಸುವವರ ಬಗ್ಗೆ ಎಚ್ಚರವಾಗಿರಿ, ಬಾಕಿ ಇರುವ ಕೆಲಸಗಳು ಶೀಘ್ರದಲ್ಲಿ ಮುಕ್ತಾಯವನ್ನು ಕಾಣಲಿದೆ, ಸಂಗಾತಿಯಿಂದ ಉತ್ತಮ ಸಹಕಾರ ದೊರೆಯಲಿದೆ, ವ್ಯವಹಾರದಲ್ಲಿ ಪ್ರಗತಿ, ಮೇಲಾಧಿಕಾರಿಗಳ ಪ್ರಶಂಸೆ.

ಮಕರರಾಶಿ
ಆಹಾರ ಸೇವನೆಯ ವೇಳೆಯಲ್ಲಿ ಎಚ್ಚರಿಕೆ ಅಗತ್ಯ, ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಬರಬೇಕಾದ ಬಾಕಿ ಹಣ ವಸೂಲಿ, ವೈವಾಹಿಕ ಜೀವನದಲ್ಲಿ ನೆಮ್ಮದಿ, ಹಿರಿಯರ ಸಲಹೆಯನ್ನು ಆಲಿಸಿ, ಪಾಲುದಾರಿಕೆ ವ್ಯವಹಾರ ಹಂತ ಹಂತವಾಗಿ ಚೇತರಿಕೆ, ಭವಿಷ್ಯದ ಯೋಜನೆಗಳ ಬಗ್ಗೆ ಚಿಂತನೆ, ನೆನಗುದಿಗೆ ಬಿದ್ದಿದ್ದ ಕೆಲಸ ಕಾರ್ಯಗಳಿಗೆ ಚಾಲನೆ.

ಕುಂಭರಾಶಿ
ನಿರಾಸೆಯ ಮನೋಭಾವವನ್ನು ದೂರಮಾಡಿ, ಪ್ರಗತಿ ಸಾಧಿಸಿಲ್ಲ ಅನ್ನೋ ಚಿಂತೆ ಬಿಟ್ಟುಬಿಡಿ, ಪ್ರಭಾವಿ ವ್ಯಕ್ತಿಗಳ ಭೇಟಿಯಿಂದ ಲಾಭ, ಸಾಮಾಜಿಕವಾಗಿ ಮನ್ನಣೆ ದೊರೆಯಲಿದೆ, ನಿಮ್ಮನ್ನು ಹಲವು ತಪ್ಪಾಗಿ ಅರ್ಥೈಸುವ ಸಾಧ್ಯತೆಯಿದೆ, ಬಿಡುವಿನ ವೇಳೆಯಲ್ಲಿ ಸಮಯ ಕಳೆಯುವಿರಿ, ಸಂಗಾತಿಯ ನಡುವೆ ಜಗಳ ಉಂಟಾಗುವ ಸಾಧ್ಯತೆಯಿದೆ.

ಮೀನರಾಶಿ
ಹೂಡಿಕೆ ಲಾಭವನ್ನು ತಂದುಕೊಡಲಿದೆ, ಕೂಡಿಟ್ಟ ಹಣ ನೀರಿನಂತೆ ಖರ್ಚಾಗುವ ಸಾಧ್ಯತೆ, ಪ್ರಿಯತಮೆಯ ಜೊತೆಗೆ ಹೊಂದಾಣಿಕೆಯಿಂದ ವರ್ತಿಸಿ, ಸ್ನೇಹಿತರೊಂದಿಗೆ ಸಂತಸದ ಕ್ಷಣ, ದುಶ್ಚಟಗಳಿಂದ ದೂರವಿರಿ, ಹಲವು ನಿರ್ಧಾರಗಳು ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರಲಿದೆ, ಹೊಸ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ತಜ್ಞರ ಸಲಹೆ ಆಲಿಸಿ.


(Horoscope today astrological prediction for September 4th)

Comments are closed.