ಸ್ನಾಯುಗಳ ಉತ್ತಮ ಆರೈಕೆಗಾಗಿ ಪ್ರೋಟೀನ್ ನ ಅಗತ್ಯತೆ

ದೇಹದ ಬೆಳವಣಿಗೆ ಮತ್ತು ಸ್ನಾಯುಗಳ ಆರೈಕೆಗಾಗಿ “ಪ್ರೋಟೀನ್” ಅತ್ಯಂತ ಅಗತ್ಯವಾದ ಬೃಹತ್ ಪೋಷಕಾಂಶಗಳು / ಮ್ಯಾಕ್ರೋನ್ಯೂಟ್ರಿಯಂಟ್‌ಗಳಲ್ಲಿ ಒಂದಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಪ್ರೋಟೀನ್ ಗಳು ಮಾನವ ದೇಹದಲ್ಲಿ, ರಚನಾತ್ಮಕ ವ್ಯವಸ್ಥೆಗಳ (ಸ್ನಾಯು, ಮೂಳೆ ಮತ್ತು ಅಂಗಗಳು), ಪ್ರತಿರಕ್ಷಣಾ ಕಾರ್ಯಗಳು/ ರೋಗ ನಿರೋಧಕ (ಬಿಳಿ ರಕ್ತ ಕಣಗಳು ಮತ್ತು ಪ್ರತಿಕಾಯಗಳು), ಹಾರ್ಮೋನುಗಳು ಮತ್ತು ಕಿಣ್ವಗಳು, ಇತ್ಯಾದಿಗಳಲ್ಲಿ 250,000 ರಿಂದ 1 ಮಿಲಿಯನ್ ವಿವಿಧ ರೀತಿಯ ಪ್ರೋಟೀನ್ ಅಣುಗಳ ಅಭಿವೃದ್ಧಿಯಲ್ಲಿ ವ್ಯಾಪಕವಾದ ಕಾರ್ಯಗಳನ್ನು ನಿರ್ವಹಿಸುತ್ತದೆ.

ದೇಹದಲ್ಲಿ ಜೀರ್ಣಕ್ರಿಯೆಯ ಸಮಯದಲ್ಲಿ ಪ್ರೋಟೀನ್ ಗಳನ್ನು ಅಮೈನೋ ಆಸಿಡ್‌ಗಳಾಗಿ ವಿಭಜಿಸಲಾಗುತ್ತದೆ, ಇದು ವಿವಿಧ ರೀತಿಯಾಗಿ ಹೀರಿಕೊಳ್ಳುತ್ತದೆ ಮತ್ತು ಆರೋಗ್ಯಕರ ಕಾರ್ಯನಿರ್ವಹಣೆಗೆ ಅಗತ್ಯವಾದ ಹೊಸ ಪ್ರೋಟೀನ್‌ಗಳಾಗಿ ಮರು ಜೋಡಣೆಗೊಳ್ಳುತ್ತದೆ. ಸ್ನಾಯುವಿನಲ್ಲಿ ಅತೀವೃದ್ಧಿಯಾದ/ಹೈಪರ್ಟ್ರೋಫಿಗೆ ಪ್ರೋಟೀನ್ ಗಳ ಅವಶ್ಯಕತೆಗಳನ್ನು ಪರಿಗಣಿಸುವಾಗ, ವಯಸ್ಸು, ಕರುಳಿನ ಆರೋಗ್ಯ, ಚಯಾಪಚಯ ಸಮಸ್ಯೆಗಳು, ಮುಂತಾದ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ. ವಯಸ್ಕರಲ್ಲಿ ಮುಖ್ಯವಾಗಿ ಸ್ನಾಯು ಪ್ರೋಟೀನ್ ಸಂಶ್ಲೇಷಣೆಯನ್ನು ಉತ್ತೇಜಿಸುತ್ತದೆ ಅಂದರೆ ಸ್ನಾಯುವಿನ ಅಂಗಾಂಶವನ್ನು ಹೆಚ್ಚಿಸುತ್ತದೆ. ಆದರೆ ಸರಿಯಾದ ಪೋಷಣೆಯೊಂದಿಗೆ ಮಾತ್ರ ಅದನ್ನು ಉಳಿಸಿ ಕೊಳ್ಳಬಹುದು.

ಪ್ರೋಟೀನ್ ಸೇವನೆ ಮತ್ತು ಕ್ರೋನೊ ಪೋಷಣೆಗೆ – ಸಮಯವು ಮುಖ್ಯವಾಗಿದೆಯೇ?

“ಕ್ರೋನೊ ಪೌಷ್ಠಿಕಾಂಶ” – ಸಮಯ ಮತ್ತು ಪೋಷಕಾಂಶಗಳ ಸೇವನೆಯು ಜೈವಿಕ ಕ್ರಿಯೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಪರಿಕಲ್ಪನೆಗೆ “ಸಿರ್ಕಾಡಿಯನ್ (ಮರುಕಳಿಸುವ) ರಿದಮ್” ಎಂದು ಹೇಳಬಹುದು. ಸ್ನಾಯುವಿನಲ್ಲಿ ಅತೀವೃದ್ಧಿಯಾದ/ಹೈಪರ್ಟ್ರೋಫಿಗೆ ಪ್ರೋಟೀನ್ ವಿಷಯಕ್ಕೆ ಬಂದಾಗ, ” ನೀವು ಯಾವಾಗ ತಿನ್ನುತ್ತೀರಿ ” ಎಂದು ಅರ್ಥಮಾಡಿಕೊಳ್ಳುವುದು ನೀವು ಹೇಗೆ ತರಬೇತಿ ಪಡೆಯುತ್ತೀರಿ ಮತ್ತು ನೀವು ಏನು ತಿನ್ನುತ್ತೀರಿ ಎಂಬುದಷ್ಟೇ ಮುಖ್ಯ ಆಗುತ್ತದೆ. ವ್ಯಾಯಾಮವು ದೇಹದ ಮೇಲೆ ಒತ್ತಡ ಹಾಕಿ ಅಡ್ರಿನಾಲಿನ್ ಮತ್ತು ಕಾರ್ಟಿಸೋಲ್ ನಂತಹ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಸ್ನಾಯು ಅಂಗಾಂಶದ ಸ್ಥಗಿತ ಮತ್ತು ದುರಸ್ತಿಗೆ ಸಹಾಯ ಮಾಡಲು ಸರಿಯಾದ ಚೇತರಿಕೆಯ ಪೋಷಣೆಯ ಅಗತ್ಯವಿದೆ. ಇತ್ತೀಚಿನ ಸಂಶೋಧನೆಯ ಪ್ರಕಾರ ಸ್ನಾಯು ಬೆಳವಣಿಗೆ/ವರ್ಧನೆ/ಪುಷ್ಟಿ ಪರಿಣಾಮಕಾರಿತ್ವವನ್ನು ಉತ್ತಮಗೊಳಿಸಲು ದಿನದ ನಿಮ್ಮ ಮೊದಲ ಊಟದಲ್ಲಿ ಪ್ರೋಟೀನ್ಗಳನ್ನು ಹೊಂದಿರುವುದು ಮುಖ್ಯ ಎಂದು ಸೂಚಿಸುತ್ತದೆ.

ನಿಯಮ #1 “ನಿಜವಾದ ಆಹಾರವನ್ನು ಸೇವಿಸಿ”

ನಿಮ್ಮ ಆಹಾರವು ಮನೆಯಲ್ಲಿಯೇ ತಯಾರಿಸಿದ ಗರಿಷ್ಠ ಗುಣಮಟ್ಟದ ಪ್ರೋಟೀನ್‌ ಗಳ ಆಹಾರವನ್ನು ಒಳಗೊಂಡಿರಬೇಕು. ಮೀನು, ಕೋಳಿ, ಸಂಪೂರ್ಣ ಮೊಟ್ಟೆ, ಹಾಲು ಇತ್ಯಾದಿಗಳಲ್ಲಿ ಸಂಪೂರ್ಣ ಪ್ರೋಟೀನ್ ಎಂದು ಕರೆಯಲಾಗುತ್ತದೆ. ಎಲ್ಲಾ ಅಗತ್ಯ ಇರುವ ಅಮೈನೋ ಆಮ್ಲಗಳನ್ನು ಒಳಗೊಂಡಿರುವ ಹೆಚ್ಚಿನ ಜೈವಿಕ ಮೌಲ್ಯದ ಪ್ರೋಟೀನ್ ಹೊಂದಿರುವ ಆಹಾರವನ್ನು ಸೇವಿಸಿದಾಗಲೂ ತರಕಾರಿಗಳು, ಬೀಜಗಳು, ಮತ್ತು ದ್ವಿದಳ ಧಾನ್ಯಗಳಲ್ಲಿಯೂ ಇರುವ ಆಹಾರ ಪ್ರೋಟಿನ್ ಗಳನ್ನು ಸಹ ಸಾಮಾನ್ಯವಾಗಿ ಅಪೂರ್ಣ ಪ್ರೋಟೀನ್ ಎಂದೇ ಕರೆಯಲಾಗುತ್ತದೆ. ನೀವು ಊಟದೊಂದಿಗೆ ಪ್ರೋಟೀನ್ ನ್ನು ಸೇವಿಸಿದಾಗ ಅದು ನಿಮಗೆ ತೃಪ್ತಿ ನೀಡುತ್ತದೆ, ಮತ್ತು ನಿಮ್ಮನ್ನು ದೀರ್ಘಕಾಲ ಹೊಟ್ಟೆ ತುಂಬಿರುವಂತೆ ಮಾಡುತ್ತದೆ.

ನಿಯಮ #2 “ಅನಾಬೋಲಿಕ್ ವಿಂಡೋ “

ನಿಮ್ಮ ಗುರಿಗಳು ಏನೇ ಇರಲಿ ನಿಮ್ಮ ಆಹಾರ ಸೇವನೆಯನ್ನು ಎಚ್ಚರಿಕೆಯಿಂದ ಯೋಜಿಸುವುದು ಅತ್ಯಗತ್ಯ. ತೂಕವನ್ನು ಎತ್ತುವಾಗ ನೀವು ಮಗುವಿನಂತೆ ಹೆಜ್ಜೆಗಳನ್ನು ಹಾಕಿದರೆ, ವ್ಯಾಯಾಮದ ನಂತರ 30-60 ನಿಮಿಷಗಳಲ್ಲಿ ಪ್ರೋಟೀನ್ ಸೇವಿಸಬೇಕೆಂಬುದು ನನ್ನ ಸಲಹೆ. ದೇಹವು ವ್ಯಾಯಾಮಗಳಿಂದ ಸ್ನಾಯುಗಳಲ್ಲಿ ಸೂಕ್ಷ್ಮ ದ್ರವ ಪುನಃ ಪೂರಣ ಮಾಡಬೇಕು ಮತ್ತು ಚೇತರಿಸಿಕೊಳ್ಳಬೇಕು. ಇತ್ತೀಚಿನ ಅಧ್ಯಯನಗಳು ” ಸಂವರ್ಧನ ಕ್ರಿಯೆ /ಅನಾಬೋಲಿಕ್ ವಿಂಡೋ” ಅನ್ನು ಸಂಶೋಧಕರು ಒಮ್ಮೆ ನಂಬಿದ್ದಕ್ಕಿಂತ ಹೆಚ್ಚು ಮೃದುವಾಗಿದೆ ಎಂದು ತೋರಿಸಿವೆ. ವಾಸ್ತವವಾಗಿ, ನೀವು ನಿಮ್ಮ ದಿನದ ಕೊನೆಯ ಊಟದ ಮುಂಚೆ, ಬಾಯಿಯನ್ನು ಅಗಲಿಸಿ/ವಿಸ್ತರಿಸಬೇಕು. ಇದರಿಂದ ಹೆಚ್ಚು ಲಾಭವನ್ನು ಪಡೆಯಬಹುದು.

ನಿಯಮ #3 ಎಲ್ಲಾ ಊಟಗಳು ಸಾಧ್ಯ!

ನಿಮ್ಮ( ಅನಾಬೊಲಿಕ್ ವಿಂಡೋವನ್ನು) ತಿನ್ನುವ ಬಾಯಿಯನ್ನು ಹ್ಯಾಗೆ/ಎಷ್ಟು ವಿಸ್ತರಿಸಬಹುದು ಎಂದು ನೀವು ಈಗಾಗಲೇ ಅರ್ಥಮಾಡಿಕೊಂಡಿದ್ದೀರಿ, ಪ್ರತಿ ಊಟದಲ್ಲೂ ಪ್ರೋಟೀನ್ ಸೇವಿಸಿ, ವಿತರಿಸುವುದು ಬಹಳ ಮುಖ್ಯ. ನೀವು ವಾರವಿಡೀ ಉಳಿದ ದಿನವನ್ನು ಒಳಗೊಂಡಂತೆ ತರಬೇತಿ ನೀಡುತ್ತಿದ್ದರೆ ಪ್ರತಿ ಊಟದಲ್ಲಿ 15-20 ಗ್ರಾಂ ಪ್ರೋಟೀನ್‌ ಪಡೆಯುತ್ತಿರುವುದು ಖಚಿತಪಡಿಸಿಕೊಳ್ಳಿ. ನಿಮ್ಮ ಉಲ್ಲೇಖಕ್ಕಾಗಿ ಒಂದು ಮಾದರಿ ಊಟ ಯೋಜನೆ ಕೆಳಗೆ ಇದೆ.

Meal ಊಟ         Sample Menu ಮಾದರಿ ಮೆನು
Breakfast  ಬೆಳಗಿನ ಉಪಾಹಾರ ಸಂಪೂರ್ಣವಾದ ಮೊಟ್ಟೆ ಬೇಯಿಸಿದ ತರಕಾರಿಗಳೊಂದಿಗೆ
Lunch/ಊಟಅನ್ನ,ಗಟ್ಟಿ ಬೇಳೆಕಾಳುಗಳೊಂದಿಗೆ, ಗುಣಾತ್ಮಕ ಕೊಬ್ಬು, ತರಕಾರಿಗಳು ಮತ್ತು ಚಿಕನ್ ನೊಂದಿಗೆ
ವ್ಯಾಯಾಮದ ನಂತರ  ಹಿಡಿಯಲ್ಲಿ  ಒಣ ಬೀಜಗಳು, ಮತ್ತು ಮೊಸರು
Dinner/ರಾತ್ರಿ ಊಟCheese cube, sweet potatoes and steamed vegetables. ಚೀಸ್, ಸಿಹಿ ಆಲೂಗಡ್ಡೆ ಮತ್ತು ಆವಿಯಲ್ಲಿ ಬೇಯಿಸಿದ ತರಕಾರಿಗಳು

ನಿಯಮ #4 ಕರುಳಿನ ಆರೋಗ್ಯ / ಸಹನೀಯ :
ಸ್ನಾಯು ಬೆಳವಣಿಗೆ ವಿಷಯಕ್ಕೆ ಬಂದಾಗ, ದಾರಿ ತಪ್ಪುವುದು ಮತ್ತು ಕೆಲವು ಕಾಳಜಿಗಳನ್ನು ಕಡೆಗಣಿಸುವುದು ಹೀಗೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ವಿಶೇಷವಾಗಿ ಹೆಚ್ಚಿದ ಒತ್ತಡದ ಹಾರ್ಮೋನುಗಳು, ಚಯಾಪಚಯ ಸಮಸ್ಯೆಗಳು, ಕಡಿಮೆ ಹೊಟ್ಟೆಯ ಆಮ್ಲ, ಪಿತ್ತರಸದ ಕೊರತೆ, ಅಥವಾ ಇತರ ಜೀರ್ಣಕಾರಿ ಸಮಸ್ಯೆಗಳಂತಹ ಅಂಶಗಳು ನಿಮಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್ ಜೀರ್ಣಿಸಿಕೊಳ್ಳಲು ತೊಂದರೆಯಾಗಬಹುದು. ಅಂತಿಮವಾಗಿ, ನೀವು ಸರಿಯಾದ ಮಾರ್ಗದರ್ಶನ ಪಡೆಯಬೇಕಾದ ಸಂದರ್ಭಗಳು ಇವು.

ಇದನ್ನೂ ಓದಿ : ಹೃದಯಾಘಾತ ದಿಢೀರ್ ಬರುವುದಿಲ್ಲ : ಮೊದಲೇ ತಿಳಿಯುತ್ತೆ !

ನಿಯಮ #5 ಇದು ಕೇವಲ ಪ್ರೋಟೀನ್ ಅಲ್ಲ!
● ನಿಮ್ಮ ಗುರಿಯು ಸ್ನಾಯು ನಿರ್ಮಾಣದ ಮೇಲೆ ಅವಲಂಬಿತವಾಗಿದ್ದರೂ, ಸಂಕೀರ್ಣವಾದ ಕಾರ್ಬೋಹೈಡ್ರೇಟ್‌ಗಳು, ಫೈಬರ್, ಗುಣಮಟ್ಟದ ಕೊಬ್ಬುಗಳು ಮತ್ತು ವಿಟಮಿನ್‌ಗಳು ಮತ್ತು ಖನಿಜಗಳಂತಹ ಅಗತ್ಯವಾದ ಸೂಕ್ಷ್ಮ ಪೋಷಕಾಂಶಗಳೊಂದಿಗೆ ಪ್ರೋಟೀನ್ ನ್ನು ಹೊಂದಿರುವಂತೆ ನೋಡಿಕೊಳ್ಳಿ.
● ಸಾಕಷ್ಟು ನಿದ್ರೆ ಯು ಚೇತರಿಕೆಯನ್ನು ಖಚಿತಪಡಿಸುತ್ತದೆ ಮತ್ತು ನಿಮ್ಮ ಒತ್ತಡವನ್ನು ದೂರವಿರಿಸುತ್ತದೆ.
● ಸ್ನಾಯುಗಳು 50% ನೀರನ್ನು ಒಳಗೊಂಡಿರುತ್ತವೆ ಆದ್ದರಿಂದ ಜಲಸಂಚಯನ ಅಗತ್ಯ. ಕಳೆದುಹೋದ ಲವಣಗಳನ್ನು ಬೆವರಿನ ಮೂಲಕ ತುಂಬಲು ಎಲೆಕ್ಟ್ರೋಲೈಟ್ಸ್ (ಸೋಡಿಯಂ, ಪೊಟ್ಯಾಸಿಯಮ್, ಮೆಗ್ನೀಷಿಯಮ್, ಇತ್ಯಾದಿ) ಜೊತೆಗೆ ಕನಿಷ್ಠ 3 ರಿಂದ 4 ಲೀಟರ್ ನೀರನ್ನು ಕುಡಿಯಿರಿ.

ವ್ಯಾಯಾಮದಿಂದ ಕೆಟ್ಟ ಆಹಾರವನ್ನು ಮೀರಿಸಲು ಸಾಧ್ಯವಿಲ್ಲ ಎಂಬುದನ್ನು ನೆನಪಿಡಿ !!!

ಇದನ್ನೂ ಓದಿ : ಈ ಟಿಫ್ಸ್‌ ಫಾಲೋ ಮಾಡಿದ್ರೆ, ಜೀರ್ಣಕ್ರೀಯೆ ಸಮಸ್ಯೆ ಹೆತ್ತಿರಕ್ಕೂ ಸುಳಿಯೋದಿಲ್ಲ

ಲೇಖಕರು:
ರೆಶ್ಮಿ ರಾಜ್ ಕುಮಾರ್
ಸೀನಿಯರ್ ಹೆಲ್ತ್ ಕೋಚ್ ಮತ್ತು ನ್ಯೂಟ್ರಿಷನಿಸ್ಟ್
ಮೆಡಾಲ್ ಬ್ಲೂಮ್

(The best time during the day to take Protein for muscle building)

Comments are closed.