ಸಂಚಾರ ನಿಯಮ ಉಲ್ಲಂಘನೆ ಎಫೆಕ್ಟ್ ..! 35 ಸಾವಿರದ ಟೂವೀಲ್ಹರ್ ಗೆ 42 ಸಾವಿರ ರೂಪಾಯಿ ದಂಡ…!!

ಬೆಂಗಳೂರು:  ಆತ ನಗರದಲ್ಲಿ ಓಡಿಸೋಕೆ ಅಂತ ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸಿದ್ದ. ಅದರ ಬೆಲೆ 35 ಸಾವಿರ ರೂಪಾಯಿ. ಆದರೆ ನಗರದಲ್ಲಿ ಮನಬಂದಂತೆ ಸಂಚಾರ ನಿಯಮ ಉಲ್ಲಂಘಿಸಿದ ಪರಿಣಾಮ ಈಗ 35 ಸಾವಿರದ ಬೈಕ್ ಗೆ 42,500 ಸಾವಿರ ರೂಪಾಯಿ ದಂಡ ಕಟ್ಟಬೇಕಾದ ಸ್ಥಿತಿ ಎದುರಾಗಿದೆ.

ಟೂ ವೀಲ್ಹರ್ ಸವಾರ ಅರುಣ್ ಕುಮಾರ್ ಇದುವರೆಗೂ 77 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದಾನೆ. 77 ಬಾರಿ ನಿಯಮ ಉಲ್ಲಂಘನೆಗೆ ಒಟ್ಟು 42,500 ರೂಪಾಯಿ  ಮೊತ್ತದ ದಂಡ ಪಾವತಿಸಬೇಕಿದೆ. ಹೀಗಾಗಿ ಮಡಿವಾಳ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಶಿವರಾಜ್ ಕುಮಾರ್ ಅಂಗಡಿ ಇನ್ಸಪೆಕ್ಟರ್ ನವೀನ್ ಕುಮಾರ್ ಮಾರ್ಗದರ್ಶನ್ ದಲ್ಲಿ ಅರುಣ ಕುಮಾರ್ ಟೂವೀಲ್ಹರ್ ಜಪ್ತಿ ಮಾಡಿ ದಂಡದ ನೊಟೀಸ್ ನೀಡಿದ್ದಾರೆ.

ಹೆಲ್ಮೆಟ್ ಧರಿಸದೇ ಇರೋದು ಸೇರಿದಂತೆ ವಿವಿಧ ಬಗೆಯ ನಿಯಮಗಳನ್ನು ಉಲ್ಲಂಘಿಸಿದ ಅರುಣ ಕುಮಾರ್, ಈಗ 42,500 ದಂಡ ಪಾವತಿಸಬೇಕಿದೆ. ಆದರೆ ದಂಡದ ರಸೀದಿ ತೆಗೆದುಕೊಂಡು ಹೋದ ಅರುಣ ಕುಮಾರ್ ಇನ್ನು ಬರದೇ ನಾಪತ್ತೆಯಾಗಿದ್ದಾನೆ.

ನಿಯಮದಂತೆ ಅರುಣಕುಮಾರ್ 42,500 ರೂಪಾಯಿ ದಂಡವನ್ನು ನ್ಯಾಯಾಲಯಕ್ಕೆ ಪಾವತಿಸಿ ರಸೀದಿ ತಂದು ಪೊಲೀಸ್ ಠಾಣೆಗೆ ತಂದು ನೀಡಿ ಗಾಡಿ ಒಯ್ಯಬೇಕಿದೆ. ಆದರೆ 35 ಸಾವಿರ ರೂಪಾಯಿಯ ಸೆಕೆಂಡ್ ಹ್ಯಾಂಡ್ ಗಾಡಿಗೆ ಅರುಣ 42 ಸಾವಿರ ರೂಪಾಯಿ ದಂಡ ಪಾವತಿಸುತ್ತಾರಾ ಅನ್ನೋ ಸಧ್ಯದ ಕುತೂಹಲ.

Comments are closed.