Horoscope : ದಿನಭವಿಷ್ಯ : ಹೊಸ ಹೂಡಿಕೆ ಲಾಭವನ್ನು ತರಲಿದೆ

ಮೇಷರಾಶಿ
ಒತ್ತಡ ನಿವಾರಣೆಗೆ ಕುಟುಂಬ ಸದಸ್ಯರ ಬೆಂಬಲ ಪಡೆಯಿರಿ, ನಿಮ್ಮೊಳಗಿನ ಭಾವನೆ ಮತ್ತು ಒತ್ತಡವನ್ನು ಮುಚ್ಚಿ ಹಾಕಬೇಡಿ, ನಿಮ್ಮ ಸಮಸ್ಯೆಗೆ ಇತರರು ಸಹಾಯ ಮಾಡಲಿದ್ದಾರೆ. ಸಹೋದ್ಯೋಗಿಗಳು ನಿಮಗೆ ಸಹಕಾರ ಮಾಡಲಿದ್ದಾರೆ, ನಂಬಿಕೆಯಿಂದ ವ್ಯವಹರಿಸಿದ್ದಲ್ಲಿ ಕಾರ್ಯಸಾಧನೆ, ಹಿಂದಿನ ತಪ್ಪು ನಿಮ್ಮನ್ನು ಬೆಂಬಿಡದೆ ಕಾಡಲಿದೆ.

ವೃಷಭರಾಶಿ
ವೈಯಕ್ತಿಕ ಸಮಸ್ಯೆಗಳು ಮಾನಸಿಕ ಸಂತೋಷವನ್ನು ಹಾಳು ಮಾಡಲಿದೆ, ಓದುವ ಹವ್ಯಾಸವು ನಿಮಗೆ ಮಾನಸಿಕ ಆರೋಗ್ಯವನ್ನು ವೃದ್ದಿಸಲಿದೆ, ಉದ್ಯೋಗ ಹಾಗೂ ವ್ಯಾಪಾರದಲ್ಲಿ ಅಧಿಕ ಆರ್ಥಕ ಸಹಾಯವನ್ನು ಪಡೆಯುವಿರಿ, ಪಾಲುದಾರಿಕೆ ವ್ಯವಹಾರ ಹೆಚ್ಚು ಲಾಭವನ್ನು ತಂದುಕೊಡಲಿದೆ, ಮಾನಸಿಕವಾಗಿ ನೆಮ್ಮದಿ ದೊರೆಯಲಿದೆ.

ಮಿಥುನರಾಶಿ
ದಾನ ಕಾರ್ಯಗಳು ಮಾನಸಿಕ ಶಾಂತಿ ಹಾಗೂ ನೆಮ್ಮದಿಯನ್ನು ತರುತ್ತದೆ, ಮನೆಯಲ್ಲಿ ಧಾರ್ಮಿಕ ಕಾರ್ಯಕ್ಕಾಗಿ ಹೆಚ್ಚಿನ ಹಣ ವ್ಯಯವಾಗಲಿದೆ, ಹಣಕಾಸಿನ ಪರಿಸ್ಥಿಯು ನಕರಾತ್ಮಕ ಪರಿಣಾಮವನ್ನುಂಟು ಮಾಡುತ್ತದೆ, ಸಂಗಾತಿಯ ಜೊತೆಗಿನ ಸಮಸ್ಯೆ ಹದಗೆಡುತ್ತದೆ, ಕನಸಿನ ಹುಡುಗಿಯನ್ನು ಇಂದು ಭೇಟಿ ಮಾಡುವಿರಿ, ಕುಟುಂಬಕ್ಕೆ ಸಮೃದ್ದಿ ತರುವ ಯೋಜನೆಯನ್ನು ಹಮ್ಮಿಕೊಳ್ಳುವಿರಿ.

ಕರ್ಕಾಟಕರಾಶಿ
ದೀರ್ಘಕಾಲದ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತೀರಿ. ಸ್ವಾರ್ಥ ಭಾವನೆಯನ್ನು ದೂರ ಮಾಡಿಕೊಳ್ಳಿ, ಸಮಸ್ಯೆಯು ಇನ್ನಷ್ಟು ಉಲ್ಬಣವಾಗಲಿದೆ, ಸ್ವತಃ ಹಣದ ಖರ್ಚಿನ ಮೇಲೆ ನಿಯಂತ್ರಣವನ್ನು ಹೇರಿ, ಮನೆಯ ಹಿರಿಯರು ಹಣಕಾಸಿನ ವಿಚಾರದಲ್ಲಿ ಸಹಾಯ ಮಾಡಲಿದ್ದಾರೆ. ಪ್ರೀತಿ ಹಾಗೂ ಒಡನಾಟ ವೃದ್ದಿಸುತ್ತದೆ, ವೈವಾಹಿಕ ಸಂಬಂಧ ಆನಂದವನ್ನು ತರಲಿದೆ.

ಸಿಂಹರಾಶಿ
ನಿಮ್ಮ ವ್ಯಕ್ತಿತ್ವವು ಇಂದು ಸುಗಂಧದಂತೆ ವರ್ತಿಸುತ್ತದೆ, ಹಲವು ಸಮಯಗಳಿಂದ ಬಾಕಿ ಉಳಿದಿದ್ದ ಕಾರ್ಯಗಳು ಪೂರ್ಣಗೊಳ್ಳಲಿದೆ, ದೂರದ ಸಂಬಂಧಿಯಿಂದ ಬಹುನಿರೀಕ್ಷಿತ ಸಂದೇಶವು ಇಡೀ ಕುಟುಂಬಕ್ಕೆ ಮತ್ತು ವಿಶೇಷವಾಗಿ ನಿಮಗಾಗಿ ಒಳ್ಳೆಯ ಸುದ್ದಿಯನ್ನು ನೀಡುತ್ತದೆ. ಹೊಸ ಆಲೋಚನೆಗಳಿಗೆ ಪಾಲುದಾರರು ಬೆಂಬಲ ನೀಡುತ್ತಾರೆ, ನಿಮ್ಮ ಸಾಮರ್ಥ್ಯವು ಉತ್ತಮ ಲಾಭಾಂಶವನ್ನು ನೀಡುತ್ತದೆ.

ಇದನ್ನೂ ಓದಿ :  10 ನೇ ಕ್ಲಾಸ್ ಉತ್ತೀರ್ಣರಾದವರಿಗೆ ಸಿಗುತ್ತೆ ಮಾಸಿಕ 3,500 ರೂ. ! ವೈರಲ್‌ ಸುದ್ದಿಯ ಅಸಲಿತ್ತೇನು ?

ಕನ್ಯಾರಾಶಿ
ತಾಳ್ಮೆಯಿಂದ ವ್ಯವಹರಿಸಿದ್ರೆ ಅಧಿಕ ಲಾಭವನ್ನು ಪಡೆಯುವಿರಿ, ವ್ಯಾಪಾರ ಕ್ಷೇತ್ರದಲ್ಲಿ ಅಧಿಕ ಲಾಭವನ್ನು ಕಂಡುಕೊಳ್ಳುವಿರಿ, ವ್ಯವಹಾರ ಕ್ಷೇತ್ರದಲ್ಲಿ ಅಭಿವೃದ್ದಿಯನ್ನು ಕಾಣುವಿರಿ, ಸಾಗರೋತ್ತರ ಸಂಬಂಧಿಕರ ಉಡುಗೊರೆ ನಿಮಗೆ ಸಂತಸವನ್ನುತರಲಿದೆ, ಅಚ್ಚರಿಯ ಸಂದೇಶ ನಿಮಗೆ ಸಿಹಿ ಕನಸನ್ನು ನೀಡುತ್ತದೆ, ಗುರಿ ಸಾಧನೆಯ ಕುರಿತು ಎಚ್ಚರಿಕೆಯ ಹೆಜ್ಜೆಯನ್ನಿ ಡಿ, ಹಲವು ಸಮಯಗಳಿಂದ ಬಾಕಿ ಉಳಿದಿದ್ದ ಕಾರ್ಯ ಪೂರ್ಣಗೊಳ್ಳಲಿದೆ.

ತುಲಾರಾಶಿ
ಸಂಬಂಧಿಕರಿಂದ ಹಣವನ್ನು ಎರವಲು ಪಡೆಯುವಿರಿ, ಸ್ನೇಹಿತರು ಮತ್ತು ಸಂಬಂಧಿಕರು ಸಹಾಯ ಮಾಡುತ್ತಾರೆ. ನಿಮ್ಮ ಪ್ರೀತಿಪಾತ್ರರು ಬದ್ಧತೆಯನ್ನು ಬಯಸುತ್ತಾರೆ. ಹೊಸ ವಿಷಯದ ಕಡೆಗೆ ಹೆಚ್ಚಿನ ಗಮನವನ್ನು ಹರಿಸಿ, ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನ ಬಲ ಅಗತ್ಯ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವುದರಿಂದ ಸಂತಸ, ಹೊಂದಾಣಿಕೆಯಿಂದ ಕಾರ್ಯ ಸಾಧನೆ.

ವೃಶ್ಚಿಕರಾಶಿ
ದೀರ್ಘಕಾಲದವರೆಗೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸುವಿರಿ, ವಾದ ವಿವಾದಕ್ಕೆ ಇಳಿಯದಂತೆ ಎಚ್ಚರಿಕೆಯನ್ನು ವಹಿಸಿ, ಕುಟುಂಬದ ಸಮಸ್ಯೆಗಳು ಪರಿಹಾರವಾಗಲಿದೆ, ಉದ್ಯಮಿಗಳು ಪಾಲುದಾರರ ವಿಚಾರದಲ್ಲಿ ಎಚ್ಚರಿಕೆಯನ್ನ ವಹಿಸಿ, ಕಚೇರಿಯನ್ನು ಬೇಗ ತಲುಪುವುದರಿಂದ ಅಧಿಕ ಲಾಭ, ಸಂಗಾತಿಯು ನಿಮಗೆ ಅದ್ಬುತ ಆಶ್ಚರ್ಯವನ್ನುಂಟು ಮಾಡಲಿದ್ದಾರೆ.

ಇದನ್ನೂ ಓದಿ : ಮಳೆ ಬರುವ ಮುನ್ನವೇ ಮುನ್ಸೂಚನೆ ಕೊಡುತ್ತೆ ಈ ದೇವಾಲಯ : ರೈತರ ಬೆಳೆ ಕಾಯುತ್ತಾನೆ ಜಗನ್ನಾಥ

ಧನಸುರಾಶಿ
ಹೃದ್ರೋಗಿಗಳು ಕಾಫಿಯನ್ನು ತ್ಯಜಿಸಲು ಇದು ಸಕಾಲ, ಹೃದಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಿ, ಸಂಗಾತಿ ನಿಮ್ಮೊಂದಿಗೆ ಹಣಕಾಸಿನ ಬಗ್ಗೆ ಚರ್ಚಿಸಬಹುದು, ಭವಿಷ್ಯಕ್ಕಾಗಿ ಸಂಪತ್ತ ನ್ನು ಕ್ರೂಢಿಕರಿಸಿ, ಹೊಸ ಸ್ನೇಹಿತರ ಭೇಟಿಯಿಂದ ಲಾಭ, ಕೆಲಸದ ಸ್ಥಳದಲ್ಲಿ ಹೊಸ ಸಮಸ್ಯೆಗಳು ಕಂಡು ಬರಲಿದೆ, ರಾಜ ತಾಂತ್ರಿಕ ವಿಚಾರಗಳ ಕುರಿತು ಎಚ್ಚರಿಕೆಯನ್ನು ವಹಿಸಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಿಂದ ನೆಮ್ಮದಿ.

ಮಕರರಾಶಿ
ನೀವು ಬಯಸಿದ ಕಾರ್ಯವನ್ನು ಇಂದು ಪೂರ್ಣಗೊಳಿಸುವಿರಿ, ಹೂಡಿಕೆ ಇಂದು ಹೆಚ್ಚು ಲಾಭವನ್ನು ತರಲಿದೆ, ಇಂದು ಮಹತ್ವದ ವ್ಯಕ್ತಿಗಳನ್ನು ಭೇಟಿಯಾಗುವಿರಿ, ಸತ್ಯವನ್ನು ನೀವಿಂದು ಅರಿತುಕೊಳ್ಳುವಿರಿ, ಮೇಲಾಧಿಕಾರಿಗಳ ಸಹಕಾರ ದೊರೆಯಲಿದೆ, ಸಂಬಂಧಿಕರ ಜೊತೆಗೆ ದೂರದ ಸ್ಥಳದಲ್ಲಿ ಸಮಯ ಕಳೆಯಲು ಇಷ್ಟ ಪಡುವಿರಿ, ಪ್ರೀತಿಯ ಅಮಲಿನಿಂದ ಹೊರಬನ್ನಿ, ಇತರರಿಗೆ ಸಹಾಯ ಮಾಡುವುದರಿಂದ ನೆಮ್ಮದಿ.

ಕುಂಭರಾಶಿ
ಆಪ್ತ ಸ್ನೇಹಿತರೊಂದಿಗೆ ಸ್ವಲ್ಪ ಸಮಯ ಕಳೆಯಿರಿ. ಹಣಕಾಸಿನ ವಿಚಾರದಲ್ಲಿ ಸಮಸ್ಯೆ ಎದುರಾಗಲಿದೆ, ನಂಬಿಕಸ್ಥರ ಜೊತೆಗೆ ಸಮಸ್ಯೆಯನ್ನು ಹಂಚಿಕೊಳ್ಳಿ, ಕೌಟುಂಬಿಕ ರಹಸ್ಯದ ಸುದ್ದಿಗಳು ನಿಮ್ಮನ್ನು ಆಶ್ಚರ್ಯಗೊಳಿಸಬಹುದು. ಸಂಗಾತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ, ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು. ಸಹೋದ್ಯೋಗಿಗಳು ಇಂದು ನಿಮ್ಮ ಕೆಲಸವನ್ನು ಮೆಚ್ಚಲಿದ್ದಾರೆ.

ಮೀನರಾಶಿ
ಆರೋಗ್ಯದ ವಿಚಾರದಲ್ಲಿ ನೆಮ್ಮದಿ ದೊರೆಯಲಿದೆ, ಹಣಕಾಸಿನ ವಿಚಾರದಲ್ಲಿ ಚಿಂತೆ ನಿಮ್ಮನ್ನು ಕಾಡಲಿದೆ, ಸ್ನೇಹಿತರು ನಿಮೆಗ ಸಹಾಯವನ್ನು ಮಾಡಲಿದ್ದಾರೆ, ಪ್ರೀತಿ ಪಾತ್ರರ ಜೊತೆ ಯಲ್ಲಿ ಸಂತಸದ ಕ್ಷಣವನ್ನು ಕಳೆಯುವಿರಿ, ಹಿರಿಯರ ಸಲಹೆ ಪ್ರಯೋಜನಕ್ಕೆ ಬರಲಿದೆ, ಆತ್ಮಸ್ಥೈರ್ಯ ಹಾಗೂ ಆತ್ಮವಿಶ್ವಾಸ ಹೆಚ್ಚಲಿದೆ, ಕೆಲವು ಕೆಟ್ಟ ವಿಚಾರ ಮನಸಿಗೆ ಘಾಸಿ ಯನ್ನುಂಟು ಮಾಡಲಿದೆ, ಸಂಗಾತಿಯೊಂದಿಗೆ ನೀವು ಪ್ರೀತಿಯಲ್ಲಿ ಬೀಳುವಿರಿ.

ಇದನ್ನೂ ಓದಿ : 7 ತಿಂಗಳ ಮಗುವಿಗೆ ಜ್ವರ, ಶೀತಕ್ಕೆ ಚಿಕಿತ್ಸೆಯೆಂದು ಬಿಸಿ ಕಬ್ಬಿಣದಿಂದ ಬರೆ ಎಳೆದ ಕ್ರೂರಿ ಮಾಂತ್ರಿಕ

(Horoscope today astrological prediction for October 18 )

Comments are closed.