ಕೋಟದಲ್ಲಿ ಭೀಕರ ಅಪಘಾತ, 2 ಲಾರಿಗಳ ನಡುವೆ ಅಪ್ಪಚ್ಚಿಯಾದ ಮಾರುತಿ ಕಾರು : ಮಾರಿಯಮ್ಮನ ಪವಾಡದಿಂದ ಪಾರಾಯ್ತು ಕುಟುಂಬ !

Maruti Suzuki Ertiga and 2 Lorry Accident in Kota :ಕಾರಿನಲ್ಲಿದ್ದವರು ನಿಜಕ್ಕೂ ಪವಾಡ ಸದೃಶವಾಗಿ ಪಾರಾಗಿದ್ದಾರೆ. ಭೀಕರ ಅಪಘಾತ ನಡೆದಿದ್ದರೂ ಕಾರಿನಲ್ಲಿದ್ದವರು ಪಾರಾಗಿರುವುದು ಮಾರಿಯಮ್ಮನ ಪವಾಡ ಎನ್ನುತ್ತಿದ್ದಾರೆ.

Maruti Suzuki Ertiga and 2 Lorry Accident in Kota : ಕೋಟ: ಲಾರಿ ಚಾಲಕ ಹೆದ್ದಾರಿಯಲ್ಲಿ ವೇಗವಾಗಿ ಸಾಗುತ್ತಿದ್ದ. ಹೋಟೆಲ್‌ ನೋಡುತ್ತಿದ್ದಂತೆಯೇ ಸಡನ್‌ ಬ್ರೇಕ್‌ ಹಾಕಿ ಲಾರಿಯನ್ನು ಬಲಗಡೆಯಿಂದ ಹೆದ್ದಾರಿಯ ಎಡಕ್ಕೆ ತಿರುಗಿಸಿದ್ದಾನೆ. ಈ ವೇಳೆಯಲ್ಲಿ ಹಿಂದಿನಿಂದ ಬರುತ್ತಿದ್ದ ಚಾಲಕ ಮಾರುತಿ ಕಾರನ್ನು ಲಾರಿಯ ಹಿಂಭಾಗದಲ್ಲಿ ತಂದು ನಿಲ್ಲಿಸಿದ್ದರು. ಆದ್ರೆ ಹಿಂದಿನಿಂದ ವೇಗವಾಗಿ ಬಂದ ಲಾರಿ ಕಾರಿಗೆ ಢಿಕ್ಕಿ ಹೊಡೆದು, ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಆದರೆ ಕಾರಿನಲ್ಲಿದ್ದವರು ಪವಾಢ ಸದೃಶರಾಗಿ ಪಾರಾಗಿರುವ ಘಟನೆ ಉಡುಪಿ ಜಿಲ್ಲೆ(Udupi)ಯ ಕೋಟದ ಚಿತ್ರಪಾಡಿಯಲ್ಲಿ ನಡೆದಿದೆ.

Maruti Suzuki Ertiga and 2 Lorry Accident in Kota Udupi, Family saved by Chitrapadi Mariyamma Temple miracle
Image Credit : Vijay Vaddarse

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಸ್ರೂರು ನಿವಾಸಿಯಾಗಿರುವ ಸಂತೋಷ್‌ ಎಂಬವರು ತನ್ನ ಕಾರಿನಲ್ಲಿ ಮಣಿಪಾಲದಿಂದ ಬಸ್ರೂರಿಗೆ ತೆರಳುತ್ತಿದ್ದರು. ಚಿತ್ರಪಾಡಿಯ ಬಳಿಯಲ್ಲಿರುವ ಮಾರಿಯಮ್ಮನ ದೇವಸ್ಥಾನದ ಎದುರಲ್ಲಿರುವ ಹೋಟೆಲ್‌ ನೋಡುತ್ತಿದ್ದಂತೆಯೇ ಲಾರಿ ಚಾಲಕ ಅಜಾಗರೂಕತೆಯಿಂದ ಲಾರಿಯನ್ನು ರಸ್ತೆಯಲ್ಲಿಯೇ ನಿಲ್ಲಿಸಿದ್ದಾನೆ.

Maruti Suzuki Ertiga and 2 Lorry Accident in Kota Udupi, Family saved by Chitrapadi Mariyamma Temple miracle
Image Credit : Vijay Vaddarse

ಸಡನ್‌ ಆಗಿ ಬಲ ಭಾಗದ ರಸ್ತೆಯಲ್ಲಿ ಸಾಗುತ್ತಿದ್ದ ಲಾರಿಯನ್ನು( MH-44-U-5277) ಲಾರಿ ಚಾಲಕ ಮಾರುತಿ ಸುದೆ ಯಾವುದೇ ಸೂಚನೆಯನ್ನೂ ನೀಡದೆ ಲಾರಿಯನ್ನು ಎಡಗಡೆಗೆ ತಿರುಗಿಸಿದ್ದಾನೆ. ಇದೇ ವೇಳೆಯಲ್ಲಿ ಹಿಂದಿನಿಂದ ಬರುತ್ತಿದ್ದ ಸಂತೋಷ್‌ ಅವರು ಕಾರನ್ನು ನಿಧಾನವಾಗಿ ಕಾರನ್ನು ನಿಲ್ಲಿಸಿದ್ದಾರೆ. ಆದರೆ ಉಡುಪಿಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಮತ್ತೊಂದು ಲಾರಿ (MH-12-NX-0980)ಚಾಲಕ ರಾಮ ಹಿಂಡಗಿ ಅತೀ ವೇಗದಿಂದ ಬಂದು ಕಾರಿಗೆ ಢಿಕ್ಕಿ ಹೊಡೆದಿದ್ದಾನೆ.

Maruti Suzuki Ertiga and 2 Lorry Accident in Kota Udupi, Family saved by Chitrapadi Mariyamma Temple miracle
Image Credit : Vijay Vaddarse

ಇದನ್ನೂ ಓದಿ : UPI ಗ್ರಾಹಕರ ಗಮನಕ್ಕೆ ! ಈ ಕೆಲಸ ಮಾಡದಿದ್ರೆ ರದ್ದಾಗಲಿದೆ ನಿಮ್ಮ ಯುಪಿಐ ಐಡಿ

ಕಾರಿನಲ್ಲಿದ್ದ ಸಂತೋಷ್‌ ಅವರ ಮಾವ ಶ್ರೀನಿವಾಸ ಎಂಬವರ ತಲೆಗೆ, ಎಡಕಿವಿಗೆ ಹಾಗೂ ಎಡ ಕುತ್ತಿಗೆಗೆ ಗಾಯವಾಗಿದೆ. ಅಲ್ಲದೇ ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾರೆ. ಕೂಡಲೇ ಗಾಯಗೊಂಡವರನ್ನು ಕೋಟೇಶ್ವರದ ಎನ್‌.ಆರ್.‌ ಆಚಾರ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗಿದೆ. ಈ ಕುರಿತು ಪೊಲೀಸ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

Maruti Suzuki Ertiga and 2 Lorry Accident in Kota Udupi, Family saved by Chitrapadi Mariyamma Temple miracle
Image Credit : Vijay Vaddarse

ಇದನ್ನೂ ಓದಿ : ಉಡುಪಿಯ ಜಯಲಕ್ಷ್ಮೀ ಸಿಲ್ಕ್ಸ್‌ ಮಳಿಗೆಯಲ್ಲಿ ಬಂದೂಕಿನಿಂದ ಸಿಡಿದ ಗುಂಡು, ಓರ್ವನಿಗೆ ಗಾಯ

ಚಿತ್ರಪಾಡಿಯ ಮಾರಿಯಮ್ಮನ ದೇವಸ್ಥಾನ ಎದುರಲ್ಲೇ ಈ ಅಪಘಾತ ನಡೆದಿದ್ದು, ಎರಡು ಲಾರಿಗಳ ನಡುವೆ ಸಿಲುಕಿರುವ ಕಾರು ಸಂಪೂರ್ಣವಾಗಿ ಅಪ್ಪಚ್ಚಿಯಾಗಿದೆ. ಕಾರಿನ ಮುಂಭಾಗದಲ್ಲಿ ಬಾರೀ ಹಾನಿಯಾಗಿದೆ. ಆದರೆ ಕಾರಿನಲ್ಲಿದ್ದವರು ನಿಜಕ್ಕೂ ಪವಾಡ ಸದೃಶವಾಗಿ ಪಾರಾಗಿದ್ದಾರೆ. ಭೀಕರ ಅಪಘಾತ ನಡೆದಿದ್ದರೂ ಕಾರಿನಲ್ಲಿದ್ದವರು ಪಾರಾಗಿರುವುದು ಮಾರಿಯಮ್ಮನ ಪವಾಡ ಎನ್ನುತ್ತಿದ್ದಾರೆ.

Maruti Suzuki Ertiga and 2 Lorry Accident in Kota Udupi, Family saved by Chitrapadi Mariyamma Temple miracle
Image Credit : Vijay Vaddarse

ಇದನ್ನೂ ಓದಿ :  LPG Link : ಎಲ್‌ಪಿಜಿ ಗ್ರಾಹಕರಿಗೆ ಡಿಸೆಂಬರ್‌ 31ರ ಒಳಗೆ EKYC ಕಡ್ಡಾಯವೇ ? ಆಹಾರ ಇಲಾಖೆಯಿಂದ ಹೊಸ ಆದೇಶ

Maruti Suzuki Ertiga and 2 Lorry Accident in Kota Udupi, Family saved by Chitrapadi Mariyamma Temple miracle

Comments are closed.