ಮೀನ ರಾಶಿಯಲ್ಲಿ ಶನಿ ಹಿಮ್ಮುಖ ಚಲನೆ : ಈ ಮೂರು ರಾಶಿಯವರು 140 ದಿನಗಳ ಕಾಲ ಬಹಳ ಎಚ್ಚರದಿಂದಿರಿ..!

ಜ್ಯೋತಿಷ್ಯ ಶಾಸ್ತ್ರದಲ್ಲಿ ಕರ್ಮಫಲದಾತನಾಗಿರುವ ಶನಿಯು ಮುಂಬರುವ 140 ದಿನಗಳ ಕಾಲ ಮೀನ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾನೆ. ಶನಿಯ ಈ ಹಿಮ್ಮುಖ ಚಲನೆಯು ಈ ಮೂರು ರಾಶಿಯರಿಗೆ ಅತ್ಯಂತ ಕಷ್ಟದ ದಿನಗಳನ್ನು ಹೊತ್ತು ತರಲಿದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ನಂಬಿಕೆಯಿಟ್ಟವರಿಗೆ ಶನಿ ಯಾವಾಗಲೂ ಆಸಕ್ತಿದಾಯಕ ಗ್ರಹವಾಗಿದೆ. ಶನಿಯು ಕನಿಷ್ಠ ಎರಡೂವರೆ ವರ್ಷಗಳ ಕಾಲ ಒಂದೇ ರಾಶಿಯಲ್ಲಿ ನೆಲೆಸಿರುತ್ತಾನೆ. ಮತ್ತೂ ಐದು ವರ್ಷಗಳ ಕಾಲ ಆ ರಾಶಿಯ ಮೇಲೆ ಕಣ್ಣಿಡುತ್ತಾನೆ. ಅಂದರೆ ಒಟ್ಟಾರೆಯಾಗಿ ಶನಿ ಒಂದು ರಾಶಿಯ ಮೇಲೆ ತನ್ನ ದೃಷ್ಟಿಯನ್ನು ಏಳೂವರೆ ವರ್ಷಗಳವರೆಗೆ ಇಡುತ್ತಾನೆ. ಇದನ್ನೇ ಶನಿಯ ಸಾಡೇ ಸಾತಿ ಎಂದು ಕರೆಯಲಾಗುತ್ತದೆ. ಅವಧಿಯಲ್ಲಿ ಶನಿಯು ವ್ಯಕ್ತಿಯನ್ನು ವಿವಿಧ ರೀತಿಯಲ್ಲಿ ಪರೀಕ್ಷಿಸುತ್ತಾನೆ. ಅದರ ಮೇಲೆ ಫಲಿತಾಂಶಗಳನ್ನು ನೀಡುತ್ತಾನೆ. ಜ್ಯೋತಿಷ್ಯದ ಪ್ರಕಾರ ಶನಿಯು ಕರ್ಮಫಲಧಾತನಾಗಿದ್ದಾನೆ. ವ್ಯಕ್ತಿಯ ಕರ್ಮದ ಮೇಲೆ ಫಲಗಳನ್ನು ನೀಡುತ್ತಾ ಹೋಗುತ್ತಾನೆ.

ಸೂರ್ಯ ದೇವನ ಮಗನಾದ ಶನಿಯು ಸದ್ಯ ಮೀನ ರಾಶಿಯಲ್ಲಿ ಸಾಗುತ್ತಿದ್ದಾನೆ. ಇದೇ ಜುಲೈ 27 (ಇಂದು) ರಂದು ಶನಿಯು ಮೀನ ರಾಶಿಯಿಂದ ಹಿಮ್ಮುಖವಾಗಿ ಚಲಿಸುತ್ತಾನೆ. ಅಂದರೆ ಮುಂದಿನ 140 ದಿನಗಳ ಕಾಲ ಹಿಮ್ಮುಖವಾಗಿ ಚಲಿಸುತ್ತಾನೆ. ಶನಿಯ ಚಲನೆಯಲ್ಲಾದ ಬದಲಾವಣೆಯು ಎಲ್ಲಾ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಮೂರು ರಾಶಿಯವರಿಗೆ ಅತ್ಯಂತ ಕಠಣಿದ ದಿನಗಳು ಎದುರಾಗಲಿದೆ. ಈ ಸಮಯದಲ್ಲಿ ಅವರ ವೃತ್ತಿಜೀವನ, ಆರ್ಥಿಕ ನಷ್ಟ, ಮಾನಸಿಕ ಕಿರಿಕಿರಿ, ಶ್ರಮದಾಯಕ ದಿನಗಳು, ಕೌಟಂಬಿಕ ಕಲಹ ಮುಂತಾದ ಕಠಿಣ ಪರಿಸ್ಥಿತಿಗಳು ಎದುರಾಗಬಹುದು. ಹಾಗಾದರೆ ಆ ಮೂರು ರಾಶಿಗಳು ಯಾವುವು? ಶನಿಯ ಕಾಟದಿಂದ ಪಾರಾಗಲು ಏನು ಮಾಡಬೇಕು? ಎಂದು ನೋಡೋಣ.

ಈ ಮೂರು ರಾಶಿಯವರಿಗೆ ಕಷ್ಟದ ಸಮಯ

ಮೇಷ ರಾಶಿ

ಈ ರಾಶಿಯ ಅಡಿಯಲ್ಲಿ ಜನಿಸಿದವರಿಗೆ ಮುಂಬರುವ ಸಮಯ ಸವಾಲುಗಳಿಂದ ತುಂಬಿರುತ್ತದೆ. ಶನಿಯ ಹಿಮ್ಮುಖ ಚಲನೆಯ ಪ್ರಭಾವದಿಂದ ಮನೆ, ಆಸ್ತಿ ಅಥವಾ ಹೊಸ ವಾಹನ ಖರೀದಿಸುವ ನಿಮ್ಮ ದೀರ್ಘಕಾಲದ ಬಯಕೆಗೆ ಅಡ್ಡಿಯಾಗಬಹುದು. ಆರ್ಥಿಕ ಒತ್ತಡದಿಂದ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಷ್ಟವಾಗಬಹುದು. ಅನಗತ್ಯ ವೆಚ್ಚಗಳು ನಿಮ್ಮ ಆತಂಕ ಹೆಚ್ಚಿಸಬಹುದು.

ಕಟಕ ರಾಶಿ

ಈ ರಾಶಿಯವರಿಗೆ ಇದು ಅತ್ಯಂತ ಸವಾಲಿನ ದಿನಗಳಾಗಲಿದೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಮತ್ತೂ ವಿಳಂಬವಾಗುವ ಸಾಧ್ಯತೆಯಿದೆ. ಕೆಲಸದಲ್ಲಿ ಹೊಸ ಅಡಚಣೆಗಳು ಉದ್ಭವಿಸಬಹುದು. ಕೆಲಸ ಮತ್ತು ವ್ಯವಹಾರದಲ್ಲಿನ ಒತ್ತಡ ನಿಮ್ಮ ಆತ್ಮವಿಶ್ವಾಸ ಕುಗ್ಗಿಸಬಹುದು. ಹಣಕಾಸಿನ ವಿಷಯದಲ್ಲಿ ಅತ್ಯಂತ ಜಾಗರೂಕರಾಗಿರಿ.

ಇದನ್ನೂ ಓದಿ: ಶ್ರಾವಣ ಮಾಸದ ಆಗಸ್ಟ್ ತಿಂಗಳ ರಾಶಿ ಭವಿಷ್ಯ: ಯಾರಿಗೆ ಶುಭ ಯಾರಿಗೆ ಅಶುಭ..

ಮೀನ ರಾಶಿ

ಶನಿಯ ಇದೇ ರಾಶಿಯಲ್ಲಿ ಹಿಮ್ಮುಖವಾಗಿದ್ದರಿಂದ ಮುಂಬರುವ ದಿನಗಳು ಈ ರಾಶಿಯವರಿಗೆ ಕಠಿಣ ಸವಾಲಿನ ದಿನಗಳಾಗಲಿದೆ. ಮಾನಸಿಕ ಒತ್ತಡ ಹೆಚ್ಚಾಗಲಿದೆ. ಆತ್ಮವಿಶ್ವಾಸದ ಕೊರತೆಯಿಂದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಷ್ಟವಾಗಬಹುದು. ಕೆಲಸದಲ್ಲಿ ಯಶಸ್ಸು ಸಿಗದಿರುವುದು ನಿಮ್ಮ ನಿರಾಶೆಗೆ ಕಾರಣವಾಗಬಹುದು.

ಪರಿಹಾರ

ಶನಿಯ ಹಿಮ್ಮುಖ ಚಲನೆಯ 140 ದಿನಗಳು ಮೂರು ರಾಶಿಯವರಿಗೆ ನಿರ್ಣಾಯಕದಿನಗಳಾಗಲಿದೆ. ಹಾಗಾಗಿ ಅವರು ಶನಿವಾರದಂದು ಶನಿ ದೇವರನ್ನು ನೆನೆಯಬೇಕು. ‘ಓಂ ಶಂ ಶನೈಶ್ಚರಾಯ ನಮಃ’ ಮಂತ್ರವನ್ನು ಭಕ್ತಿಯಿಂದ ಪಠಿಸಬೇಕು. ನಿಯಮಿತವಾಗಿ ಹನುಮಾನ್‌ ಚಾಲಿಸಾ, ಶನಿ ಸ್ತೋತ್ರ ಮತ್ತು ಶನಿ ಕವಚ ಪಠಿಸಿ. ಕಪ್ಪು ಎಳ್ಳು, ಉದ್ದಿನ ಬೇಳೆ, ಸಾಸಿವೆ ಎಣ್ಣೆ, ಕಪ್ಪು ಛತ್ರಿ ಅಥವಾ ಪಾದರಕ್ಷೆಗಳನ್ನು ದಾನ ಮಾಡುವುದರಿಂದ ಶನಿ ದೇವರ ಆಶೀರ್ವಾದ ಸುಲಭವಾಗಿ ಪಡೆಯಬಹುದಾಗಿದೆ. ಇದಿಷ್ಟೇ ಅಲ್ಲದೆ, ಶನಿ ದೇವಾಲಯದಲ್ಲಿ ಸಾಸಿವೆ ಎಣ್ಣೆಯನ್ನು ಅರ್ಪಿಸಿ ಮತ್ತು ನಿರ್ಗತಿಕರಿಗೆ ಆಹಾರವನ್ನು ನೀಡಿ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.