ದಿನಭವಿಷ್ಯ : ಕರ್ಕಾಟಕ ರಾಶಿಯಲ್ಲಿ ಗಜಕೇಸರಿ ಯೋಗ

Today Horoscope November 12 2025 : ದಿನಭವಿಷ್ಯ ಇಂದು ನವೆಂಬರ್‌ 12 2025 ಬುಧವಾರ. ಜ್ಯೋತಿಷ್ಯದ ಪ್ರಕಾರ ಗಣೇಶನಿಗೆ ಅತ್ಯಂತ ಪ್ರಿಯವಾಗಿರುವ ದಿನ. ಕರ್ಕಾಟಕರಾಶಿಯಲ್ಲಿ ಗುರು ಮತ್ತು ಚಂದ್ರನ ಸಂಯೋಗದಿಂದ ಗಜಕೇಸರಿ ಯೋಗ ರೂಪುಗೊಳ್ಳಲಿದೆ.

ತುಲಾರಾಶಿಯಲ್ಲಿ ಸೂರ್ಯ ಮತ್ತು ಶುಕ್ರನ ಸಂಚಾರದಿಂದ ಶುಕ್ರಾದಿತ್ಯ ಯೋಗ ಹಾಗೂ ವೃಚ್ಚಿಕರಾಶಿಯಲ್ಲಿ ಬುಧ ಮತ್ತು ಮಂಗಳ ಸಂಚಾರದಿಂದ ಬುಧಾದಿತ್ಯ ಯೋಗ ರೂಪುಗೊಳ್ಳಲಿದೆ. ಈ ಯೋಗಗಳು ಯಾವೆಲ್ಲಾ ರಾಶಿಗಳಿಗೆ ಶುಭವನ್ನು ತರಲಿದೆ. ಹೇಗಿದೆ ಇಂದಿನ ದಿನಭವಿಷ್ಯ ಅಂತಾ ನೋಡೋಣಾ.

ಮೇಷರಾಶಿ (Aries)
ಹಣಕಾಸಿನ ವಿಷಯದಲ್ಲಿ ಜಾಗರೂಕತೆ ಅಗತ್ಯ. ದೀರ್ಘಕಾಲದ ಹೂಡಿಕೆಗಳಿಗೆ ಉತ್ತಮ ಸಮಯ.

ವೃಷಭರಾಶಿ (Taurus)
ಮಿಶ್ರ ಫಲಗಳನ್ನು ನಿರೀಕ್ಷಿಸಬಹುದು. ವೃತ್ತಿ ಜೀವನದಲ್ಲಿ ನೆಮ್ಮದಿ ಇರಲಿದ್ದು, ವಿದೇಶ ವ್ಯಾಪಾರದ ಅವಕಾಶಗಳು ಸಿಗಬಹುದು.

ಮಿಥುನರಾಶಿ (Gemini)
ಶ್ರಮದಾಯಕ ದಿನ. ತಾಳ್ಮೆಯಿಂದ ಕೆಲಸ ಮಾಡಿದರೆ ಉದ್ಯೋಗ ಸ್ಥಳದಲ್ಲಿ ಮೆಚ್ಚುಗೆ ದೊರೆಯುತ್ತದೆ.

ಕರ್ಕಾಟಕರಾಶಿ (Cancer)
ನಿಮಗೆ ಬಯಸಿದ ಫಲ ಸಿಗಲಿದೆ. ಗಜಕೇಸರಿ ಯೋಗದಿಂದ ಕೆಲಸದ ಒತ್ತಡ ಕಡಿಮೆಯಾಗಿ ಹಠಾತ್ ಧನಲಾಭವಾಗುವ ಸಾಧ್ಯತೆ ಇದೆ.

ಸಿಂಹರಾಶಿ (Leo)
ಮಿಶ್ರ ಸಮಯ. ಇಂದು ಪ್ರಯಾಣ ಮಾಡುವಾಗ ಎಚ್ಚರಿಕೆ ಇರಲಿ. ಹೂಡಿಕೆಯಿಂದ ನಷ್ಟವಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ.

ಕನ್ಯಾರಾಶಿ (Virgo)
ಮಂಗಳಕರ ದಿನ. ಉದ್ಯೋಗ ಸ್ಥಳದಲ್ಲಿ ನಿಮ್ಮ ಶ್ರಮವನ್ನು ಗುರುತಿಸಿ ಗೌರವ ದೊರೆಯುತ್ತದೆ. ಆರ್ಥಿಕ ಕೊರತೆ ನೀಗಬಹುದು.

ತುಲಾರಾಶಿ (Libra)
ಹೊಸ ಹೂಡಿಕೆಗೆ ಇಂದು ಸಕಾಲ. ಮಹತ್ವದ ಕೆಲಸಗಳಲ್ಲಿ ಕಾರ್ಯಸಿದ್ಧಿಯಾಗಲಿದ್ದು, ವ್ಯಾಪಾರ ಕ್ಷೇತ್ರದಲ್ಲಿ ಪ್ರಗತಿ.

ವೃಶ್ಚಿಕರಾಶಿ (Scorpio)
ವ್ಯಾಪಾರ ಅಭಿವೃದ್ಧಿ. ವಸ್ತ್ರ ಮತ್ತು ಬಂಗಾರ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ. ಹೊಸ ವ್ಯವಹಾರಗಳಿಂದ ದೂರವಿರಿ.

ಧನಸ್ಸುರಾಶಿ (Sagittarius)
ಪರೋಪಕಾರ ಮಾಡಲು ಹೋಗಿ ಸಮಸ್ಯೆ ತಂದುಕೊಳ್ಳದಿರಿ. ವಿವಾಹ ಸಂಬಂಧಿತ ಸಮಸ್ಯೆಗಳು ನಿವಾರಣೆ ಆಗಲಿದೆ.

ಮಕರರಾಶಿ (Capricorn)
ಪ್ರತಿಯೊಂದು ವಿಚಾರದಲ್ಲೂ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಹಣಕಾಸು ವ್ಯವಹಾರದಲ್ಲಿ ಹೆಚ್ಚಿನ ಜಾಗರೂಕತೆ ಇರಲಿ.

ಕುಂಭರಾಶಿ (Aquarius)
ಹೊಸ ಜವಾಬ್ದಾರಿಗಳು ದೊರೆಯುವ ಸಾಧ್ಯತೆ. ದುಂದುವೆಚ್ಚದಿಂದ ಹಣ ವ್ಯಯವಾಗುವುದರಿಂದ ಎಚ್ಚರಿಕೆ ಅಗತ್ಯ.

ಮೀನರಾಶಿ (Pisces)
ಶತ್ರುಗಳಿಂದ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮುನ್ನ ಎರಡು ಬಾರಿ ಆಲೋಚಿಸಿ.

Today Horoscope Kannada Astrology November 12 2025

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories