ಮಣಿಪಾಲ ಆಸ್ಪತ್ರೆ ಸೇರಿದ್ದ ಮಹಿಳೆಗಿಲ್ಲ ಕರೋನಾ !

0

ಶಿವಮೊಗ್ಗ : ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಕೊರೊನಾ ಶಂಕಿತ ಮಹಿಳೆಗೆ ಕೊರೊನಾ ಇಲ್ಲಾ ಅನ್ನುವುದು ದೃಢಪಟ್ಟಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅಚಾಪುರ ಗ್ರಾಮದ 68 ವರ್ಷದ ಮಹಿಳೆಗೆ ಇತ್ತೀಚೆಗೆ ಮೆಕ್ಕಾ, ಮದೀನ ಪ್ರವಾಸದಿಂದ ಹಿಂದಿರುಗಿದ್ದರು, ಸೌದಿಯಲ್ಲಿದ್ದಾಗಲೇ ಮಹಿಳೆಗೆ ಜ್ವರ ಕಾಣಿಸಿಕೊಂಡಿತ್ತು.

ಶಿವಮೊಗ್ಗಕ್ಕೆ ಮರಳುತ್ತಿದ್ದಂತೆಯೇ ಜ್ವರ, ಶೀತ ಹಾಗೂ ಉಸಿರಾಟದ ಸಮಸ್ಯೆಯಿಂದ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮಹಿಳೆಯನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗ ದಾಖಲಿಸಿದ್ದರು.

ಕೊರೊನಾ ಶಂಕೆಯ ಹಿನ್ನೆಲೆಯಲ್ಲಿ ಮಹಿಳೆಯ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು ರಕ್ತ ಹಾಗೂ ಕಫದ ಮಾದರಿ ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್ ಅಂತಾ ತಿಳಿದು ಬಂದಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಮಹಿಳೆಗೆ ಕೊರೊನಾ ಇಲ್ಲಾ ಅನ್ನುವುದನ್ನು ದೃಢಪಡಿಸಿದೆ.

Leave A Reply

Your email address will not be published.