ಚರಿತ್ರೆ ಸೃಷ್ಟಿಸುತ್ತಾ ‘ಗಡಿಯಾರ’ : ಹವಾ ಎಬ್ಬಿಸಿದೆ ಚಿತ್ರದ ಟೀಸರ್

0

ಸ್ಯಾಂಡಲ್ ವುಡ್  ಬಹುನಿರೀಕ್ಷಿತ ಸಿನಿಮಾ ಗಡಿಯಾರ ಬಿಡುಗಡೆಗೆ ಸಿದ್ದವಾಗಿದೆ. ಸಿನಿಮಾ ಕಂಪ್ಲೀಟ್ ಆಗಿದ್ದು, ಸೆನ್ಸಾರ್ ಕಾರ್ಯ ನಡೆಯುತ್ತಿದೆ. ವಿಭಿನ್ನ ಹೆಸರಿನ ಮೂಲಕ ಜನರ ಗಮನ ಸೆಳೆದಿದ್ದ ಗಡಿಯಾರ ಚಿತ್ರತಂಡ ಇಂದು ಟೀಸರ್ ಬಿಡುಗಡೆ ಮಾಡಿದ್ದು, ಚಿತ್ರರಸಿಕರ ನಿದ್ದೆಗೆಡಿಸಿದೆ.

ಕನ್ನಡ ಸಿನಿಮಾದ ಮಟ್ಟಿಗೆ ಗಡಿಯಾರ ವಿಭಿನ್ನವಾಗಿರೋ ಟೀಸರ್ ಬಿಡುಗಡೆ ಮಾಡಿದೆ. ಹೆಸರಿನಿಂದಲೇ ಬಾರೀ ಕುತೂಹಲ ಮೂಡಿಸಿದ್ದ ಗಡಿಯಾದ ಇದೀಗ ಚಿತ್ರದ ಟೀಸರ್ ಸಿನಿ ರಚಿಕರ ತಲೆ ಕೆಡಿಸಿದೆ. ಹಸ್ಟಾರಿಕಲ್ ವಿಡಿಯೋ ತುಣುಕನ್ನ ಟೀಸರ್ ನಲ್ಲಿ ಹರಿಬಿಟ್ಟಿರೋ ಚಿತ್ರತಂಡ ಗಡಿಯಾರ ಸಾಮಾನ್ಯ ಸಿನಿಮಾ ಅಲ್ಲಾ ಅನ್ನೋದನ್ನು ನಿರೂಪಿಸಿದೆ.

ಲವ್, ಮಾಸ್, ಹಿಸ್ಟಾರಿಕಲ್, ಹಾರರ್, ಥ್ರಿಲ್ಲರ್ ಅಂಶವನ್ನಿಟ್ಟುಕೊಂಡು ಟೀಸರ್ ರೆಡಿ ಮಾಡಿದ್ದಾರೆ ಚಿತ್ರದ ನಿರ್ದೇಶಕ ಪ್ರಬೀಕ್ ಮೊಗವೀರ್. ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಹಾಗೂ ನಿರ್ಮಾಣ ಮಾಡಿರೋ ಪ್ರಬೀಕ್ ಮೊಗವೀರ್ ಗಡಿಯಾರ ಸಿನಿಮಾದ ಮೂಲಕ ಹೊಸತನದ ಚಿತ್ರವೊಂದನ್ನು ಸ್ಯಾಂಡಲ್ ವುಡ್ ಗೆ ಕೊಡೊದಕ್ಕೆ ಹೊರಟಿದ್ದಾರೆ ಅನ್ನೋದು ಟೀಸರ್ ನೋಡಿದ್ರೆ ಕನ್ಪರ್ಮ್ ಆಗುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ಸದ್ದು ಮಾಡುತ್ತಿರೋ ಗಡಿಯಾರ ಎಪ್ರಿಲ್ ನಲ್ಲಿ ತೆರೆಗೆ ಬರೋದು ಪಕ್ಕಾ. ಸದಾ ಹೊಸತನಕ್ಕೆ ತುಡಿಯುವ ನಿರ್ದೇಶಕ ಪ್ರಬೀಕ್ ಮೊಗವೀರ್ ಚಿತ್ರರಸಿಕರಿಗೆ ಬಾರೀ ನಿರೀಕ್ಷೆಯನ್ನು ಹುಟ್ಟುಹಾಕಿದ್ದಾರೆ.

ಬಹುತಾರಾಗಣವನ್ನು ಹೊಂದಿರೋ ಗಡಿಯಾದ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಎಸ್.ಪಿ. ಸಾಂಗ್ಲಿಯಾನ ಹಾಗೂ ಯಶ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

ಇನ್ನು ಮುಖ್ಯ ಪಾತ್ರದಲ್ಲಿ ರಾಜ್ ದೀಪಕ್ ಶೆಟ್ಟಿ, ಶೀತಲ್ ಶೆಟ್ಟಿ ಹಾಗೂ ಅತಿಥಿ ಪಾತ್ರದಲ್ಲಿ ರಿಹಾಜ್ ಮತ್ತು ಎಂ.ಟಿ.ಗೌರಿ ಶಂಕರ್ ಬಣ್ಣ ಹಚ್ಚಿದ್ದಾರೆ.

ಮುಖ್ಯಭೂಮಿಕೆಯಲ್ಲಿ ಶರತ್ ಲೋಹಿತಾಶ್ವ ಮತ್ತು ಸುಚೇಂದ್ರ ಪ್ರಸಾದ ಜೊತೆಗೆ ಪ್ರದೀಪ್ ಪೂಜಾರಿ, ಗಣೇಶ್ ರಾವ್, ಮನದೀಪ್ ರೈ, ರಾಧಾ ರಾಮಚಂದ್ರ, ಪ್ರಣಯ ಮೂರ್ತಿ, ಎಸಿಪಿ ಚಬ್ಬಿ,

ವಿನಯ್ ಕುಮಾರ್ ರಾವ್, ಲೀಲಾ ಮೋಹನ್ ಕಾಣಿಸಿಕೊಂಡಿದ್ದಾರೆ. ಗಡಿಯಾರ ಚಿತ್ರದಲ್ಲಿ ಥ್ರಿಲ್ಲರ್ ಮಂಜು ರವರ ನಾಲ್ಕು ಅದ್ಬುತ ಸಾಹಸ ಸನ್ನಿವೇಶಗಳಿವೆ.

ಸಂಗೀತ ರಾಘವ್ ಸುಭಾಷ್, ಛಾಯಾಗ್ರಹಣ ಶ್ಯಾಮ್ ಸಿಂಧನೂರ್, ಸಂಕಲನ ಎನ್.ಎಮ್.ವಿಶ್ವ ಮಾಡಿದ್ದಾರೆ.

ಹಾಡುಗಳು ಅದ್ಬುತವಾಗಿ ಮೂಡಿಬಂದಿದ್ದು, ಹೇಮಂತ್ ಕುಮಾರ್, ವ್ಯಾಸರಾಜ್, ಅನುರಾಧ ಭಟ್, ಅಪೂರ್ವ ಶ್ರಿ ಕುಮಾರ್ ಹಾಡುಗಳಿಗೆ ಧ್ವನಿಯಾಗಿದ್ದಾರೆ.

ಗಡಿಯಾರ ಸಿನಿಮಾದ ಕೇವಲ ಕನ್ನಡ ಮಾತ್ರವಲ್ಲ ಹಿಂದಿ, ತಮಿಳ್, ತೆಲುಗು, ಮಲಯಾಲಂ, ಬೊಜ್ಪುರಿ ಹಾಗೂ ಮರಾಠಿ ಭಾಷೆಗಳಿಗೂ ಡಬ್ ಆಗಲಿದೆ.

ಫಸ್ಟ್ ಲುಕ್ ನಿಂದಲೇ ನಿರೀಕ್ಷೆ ಮೂಡಿಸಿದ್ದ ಗಡಿಯಾರ ಸಿನಿಮಾ ಪ್ರೇಕ್ಷಕರ ತಲೆಗೆ ಟೀಸರ್ ಮೂಲಕ ಹುಳ ಬಿಟ್ಟಿದೆ. ಅಷ್ಟಕ್ಕೂ ಹೇಗಿದೆ ಗೊತ್ತಾ ಚಿತ್ರ ಟೀಸರ್…

https://www.youtube.com/watch?v=jeLisR2xFdA&feature=youtu.be

Leave A Reply

Your email address will not be published.