ರಘುಪತಿ ಭಟ್​ ಯಾರೆಂದು ಕೇಳಿದ್ದ ಸಿದ್ದರಾಮಯ್ಯಗೆ ಟಾಂಗ್​ ಕೊಟ್ಟ ಶಾಸಕ ರಘುಪತಿ ಭಟ್​​

ಉಡುಪಿ : ಉಡುಪಿ ಜಿಲ್ಲೆಯಿಂದ ಆರಂಭವಾಗಿರುವ ಹಿಜಬ್​ ವಿವಾದ (Hijab Controversy) ಇದೀಗ ರಾಜ್ಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಕುಂದಾಪುರದ ಸರ್ಕಾರಿ ಕಾಲೇಜಿನಲ್ಲಿ ನಿನ್ನೆ ಹಿಜಬ್​ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶವನ್ನು ತಡೆದಿದ್ದ ಪ್ರಾಂಶುಪಾಲರ ನಡೆಯನ್ನು ಖಂಡಿಸಿದ್ದ ಸಿದ್ದರಾಮಯ್ಯ ಶಾಸಕ ರಘುಪತಿ ಭಟ್​ ವಿರುದ್ಧವೂ ಕುಟುಕಿದ್ದರು. ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ ಮಾಡಿ ಎಂದು ಹೇಳಲು ರಘುಪತಿ ಭಟ್​ ಯಾರು ಎಂದು ಪ್ರಶ್ನೆ ಮಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ಶಾಸಕ ರಘುಪತಿ ಭಟ್​ ತಿರುಗೇಟು ನೀಡಿದ್ದಾರೆ.


ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಈ ವಿಚಾರವಾಗಿ ಮಾತನಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಪಿಯುಸಿ ಹಂತದಲ್ಲಿ ಸಮವಸ್ತ್ರ ಕಡ್ಡಾಯ ಎಂದು ಸರ್ಕಾರ ಎಲ್ಲಿಯೂ ಹೇಳಿಲ್ಲ.ಮುಸ್ಲಿಮರು ಬಹಳ ಹಿಂದಿನಿಂದಲೂ ಹಿಜಬ್​ ಧರಿಸುತ್ತಿದ್ದಾರೆ.ಅವರು ಕಾಲೇಜಿಗೆ ಹಿಜಬ್​ ಧರಿಸಿ ಬಂದರೆ ಅದರಿಂದ ತೊಂದರೆಯೇನು..? ಮುಸ್ಲಿಂ ಮಹಿಳೆಯರನ್ನು ವಿದ್ಯೆಯಿಂದ ವಂಚಿತಗೊಳಿಸಲು ಈ ಹುನ್ನಾರಗಳನ್ನು ಮಾಡಲಾಗುತ್ತಿದೆ. ಅಲ್ಲದೇ ಕಾಲೇಜು ಗೇಟ್​ ಬಳಿ ಹಿಜಬ್​ ಧರಿಸಿದ್ದ ವಿದ್ಯಾರ್ಥಿನಿಯರನ್ನು ತಡೆಯಲು ಕಾಲೇಜು ಪ್ರಾಂಶುಪಾಲರಿಗೆ ಯಾವ ಅಧಿಕಾರವಿದೆ..? ಮೊದಲು ಇವರನ್ನು ಕೆಲಸದಿಂದ ವಜಾ ಮಾಡಬೇಕು. ಪಿಯುಸಿ ಹಂತದಲ್ಲಿ ಸಮವಸ್ತ್ರ ಕಡ್ಡಾಯ ಮಾಡಿ ಎಂದು ಹೇಳಲು ರಘುಪತಿ ಭಟ್​ ಯಾರು ಎಂದು ಪ್ರಶ್ನೆ ಮಾಡಿದ್ದರು.


ಸಿದ್ದರಾಮಯ್ಯರ ಈ ಪ್ರಶ್ನೆಗೆ ಫೇಸ್​ಬುಕ್​ನಲ್ಲಿ ಶಾಸಕ ರಘುಪತಿ ಭಟ್​ ತಿರುಗೇಟು ನೀಡಿದ್ದಾರೆ. ಮಾಧ್ಯಮವೊಂದರ ವರದಿಯನ್ನು ಶೇರ್​ ಮಾಡಿರುವ ಶಾಸಕ ರಘುಪತಿ ಭಟ್​, ರಘುಪತಿ ಭಟ್​ ಯಾರೆಂದು ಪ್ರಶ್ನಿಸುವ ಸಿದ್ದರಾಮಯ್ಯನವರೇ , ನಾನು ಜನರಿಂದ ಆಯ್ಕೆಯಾದವನು, ನಿಮ್ಮ ಹಾಗೆ ಸ್ವಕ್ಷೇತ್ರದಲ್ಲಿ ಜನರಿಂದ ತಿರಸ್ಕೃತಗೊಂಡು, ಬೇರೆಯವರ ಕ್ಷೇತ್ರದ ಮೇಲೆ ಅವಲಂಬಿತನಾದವನಲ್ಲ.ನನ್ನ ಕ್ಷೇತ್ರದ ಸಮಸ್ಯೆಗೆ ಧ್ವನಿಯಾಗುವುದು ನನಗೆ ಸಂವಿಧಾನ ಕಲ್ಪಿಸಿದ ಹಕ್ಕು. ಅದನ್ನು ನಿಮ್ಮಿಂದ ಕಲಿಯಬೇಕಿಲ್ಲ ಎಂದು ಟಾಂಗ್​ ನೀಡಿದ್ದಾರೆ.

ಇದನ್ನು ಓದಿ : ನಿರ್ಮಾಣ ಹಂತದ ಕಟ್ಟದ ಕುಸಿದು 7 ಮಂದಿ ಕಾರ್ಮಿಕರು ದುರ್ಮರಣ

ಇದನ್ನೂ ಓದಿ : principal stops students wearing hijab : ಹಿಜಬ್​ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರನ್ನು ತಡೆದ ಪ್ರಾಂಶುಪಾಲ

Hijab Controversy : MLA Raghupati Bhatt’s outrage against opposition leader Siddaramaiah

Comments are closed.