Pramod Muthalik : ಎನ್ಐ‌ಎ ದಾಳಿ ಮತ್ತು ಬಂಧನ ತಡವಾಯಿತು: ಪ್ರಮೋದ್ ಮುತಾಲಿಕ್

ಧಾರವಾಡ : Pramod Muthalik NIA raid: ಇಂದು‌ ದೇಶಾದ್ಯಂತ ಎನ್ಐಎ ಅಧಿಕಾರಿಗಳ ತಂಡ ಎಸ್ ಡಿಪಿಐ, ಪಿಎಫ್ಐ ಸಂಘಟನೆಯ ಕಚೇರಿ, ನಾಯಕರ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದೆ. ಈ ದಾಳಿಯ ಕುರಿತಂತೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದು ಎನ್ಐ‌ಎ ದಾಳಿ ಮತ್ತು ಬಂಧನ ತಡವಾಯಿತು ಎಂದು ಹೇಳಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು ಹಿಂದೂ ಸಂಘಟನೆಗಳು ಬಹಳ ದಿನಗಳಿಂದ ಎಸ್‌ಡಿಪಿಐ, ಪಿಎಫ್‌ಐ ಬ್ಯಾನ್‌ಗೆ ಆಗ್ರಹಿಸುತ್ತ ಬಂದಿದ್ದವು. ಶಾಹಿನ್ ಬಾಗ್ ಘಟನೆ ಸೇರಿ ಅನೇಕ ಕಡೆ ನೇರವಾಗಿ ಈ ಸಂಘಟನೆಗಳು ಭಾಗಿಯಾಗಿದ್ದಾರೆ. ನೇರವಾಗಿ ಕೊಲೆಗಳಲ್ಲಿ ಭಾಗಿಯಾಗಿದ್ದಾರೆ. ಇವರಿಗೆ ಕೋಟ್ಯಂತರ ರೂಪಾಯಿ ವಿದೇಶದಿಂದ ಬರುತ್ತಿದೆ ಎಂದು ಆರೋಪಿಸಿದ್ದಾರೆ.

ಭಯೋತ್ಪಾದನೆ ಚಟುಚಟಿಕೆ ಲಿಂಕ್ ಸಹ ಬಹಿರಂಗ ಆಗಿದೆ. ಆದರೂ ಈ ಸಂಘಟನೆಗಳ ಬ್ಯಾನ್‌ಗೆ ತಡವಾಗುತ್ತಿದೆ ಎಂದ ಮುತಾಲಿಕ್ 23 ರಾಜ್ಯದಲ್ಲಿ ಎಸ್‌ಡಿಪಿಐ, ಪಿಎಫ್ಐ ಕೆಲಸ ಮಾಡುತ್ತಿದೆ ಎಂದರು‌. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿಯೂ ಇದೆ. ಕ್ಯಾನ್ಸರ್ ಮಾದರಿಯಲ್ಲಿ ಈ ದೇಶದ್ರೋಹಿ ಸಂಘಟನೆ ಹಬ್ಬುತ್ತಿದೆ.‌ ಬಿಹಾರದಲ್ಲಿ ಸಿಕ್ಕವರು ನೇರವಾಗಿ ಪ್ರಧಾನಿಯನ್ನೇ ಗುರಿ ಇಟ್ಟಿದ್ದರು. 2047ರಲ್ಲಿ ಇಸ್ಲಾಂ ರಾಷ್ಟ್ರ ಮಾಡಲು ಹೆಜ್ಜೆ ಇಡುತ್ತಿದ್ದಾರೆ. ಆದರೂ ಬ್ಯಾನ್ ಮಾಡುತ್ತಿಲ್ಲ ಅಂದ್ರೆ ಏನೋ ಷಡ್ಯಂತ್ರ ಇದೆ ಎಂದರು.

ಈ ಸಂಘಟನೆಗಳನ್ನು ಬಿಜೆಪಿಯೆ ಪೋಷಿಸುತ್ತಾರೆ ಅನ್ನೋ ಆರೋಪ ವಿದೆ. ಈ ಆರೋಪದ ಬಗ್ಗೆ ನಮಗೂ ಸಂಶಯ ಬರುತ್ತಿದೆ. ಸಂವಿಧಾನ ವಿರೋಧಿಯಾದ ಈ ಸಂಘಟನೆಯನ್ನು ಮುಗಿಸಬೇಕು. ಆ ಸಂಘಟನೆಯ ಎಲ್ಲ ಪದಾಧಿಕಾರಿ, ಕಾರ್ಯಕರ್ತರನ್ನು ಬಂಧಿಸಿ ಒಳಗೆ ಹಾಕಬೇಕು. ಮೂರುವರೆ ಲಕ್ಷ ಪ್ಯಾರಾ ಮಿಲಿಟರಿ ತಯಾರ ಮಾಡಿದ್ದಾರೆ. ಇವರೇ ಪ್ಯಾರಾ ಮಿಲಿಟರ್ ತಯಾರಿ ಮಾಡುತ್ತಿದ್ದರೆ ಸರ್ಕಾರದ ಗಮನಕ್ಕೆ ಇಲ್ಲವಾ ಎಂದು ಪ್ರಶ್ನಿಸಿದರು. ಎಸ್‌ಡಿಪಿಐ, ಪಿಎಫ್‌ಐ ಬ್ಯಾನ್‌ಗೆ ಆಗ್ರಹಿಸಿ ಆಂದೋಲನ ಮಾಡುತ್ತೇವೆ ಎಂದ ಪ್ರಮೋದ್ ಮುತಾಲಿಕ್ ಮುಂದಿನ ತಿಂಗಳು ಹಿಂದೂ ಸಂಘಟನೆಗಳ ಒಕ್ಕೂಟದ ಮೂಲಕ ಆಂದೋಲನ ಮಾಡುತ್ತೇವೆ ಎಂದರು.

ಈ ದಾಳಿ ಮೊದಲೇ ಆಗುತ್ತಿದ್ದರೆ ಹರ್ಷ, ಪ್ರವೀಣ್ ನೆಟ್ಟಾರ್, ರುದ್ರೇಶ್ ಕೊಲೆಯಾಗುತ್ತಿರಲಿಲ್ಲ. ಅಮಾಯಕರ ಜೀವ ಉಳಿಯುತ್ತಿತ್ತು. ಈ ಕೊಲೆಗಳಿಗೆ ಪರೋಕ್ಷವಾಗಿ ಬಿಜೆಪಿಯೂ ಕಾರಣವಾದಂತಾಯ್ತು. ಹೀಗಾಗಿ ಕೂಡಲೇ ಈ ಸಂಘಟನೆ ಬ್ಯಾನ್ ಮಾಡಬೇಕು. ಬಿಜೆಪಿ ಮೇಲೆ ಹಿಂದೂ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿದೆ. ಹೀಗಾಗಿ ಅಸಮಾಧಾನವನ್ನು ಸಮಾಧಾನ ಮಾಡಲು ಹೀಗೆ ಮಾಡಿರಬಹುದು, ಆ ಕಾರಣಕ್ಕೂ ಈ ದಾಳಿಗಳು ಆಗಿರಬಹುದು ಎಂದು ಮುತಾಲಿಕ್ ಸಂಶಯ ವ್ಯಕ್ತಪಡಿಸಿದರು. ಚುನಾವಣೆ ಸಮಯದಲ್ಲಾದರೂ ಈ ಬ್ಯಾನ್ ಮಾಡುವ ಧೈರ್ಯ ತೋರಿಸಲಿ. ಎಸ್‌ಡಿಪಿಐ ಬಿಜೆಪಿ ಬಿ ಟೀಮ್ ಅಂತಾ ಆರೋಪ ಇದೆ. ಆ ಆರೋಪಕ್ಕೆ ದಾರಿ ಮಾಡಿ ಕೊಡದಂತೆ ಕ್ರಮ ಆಗಬೇಕು ಎಂದು ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.

ಇದನ್ನು ಓದಿ : Doordarshan: ಬಹು ನಿರೀಕ್ಷಿತ “ದೂರದರ್ಶನ” ಸಿನಿಮಾದಲ್ಲಿ.. ಪೃಥ್ವಿ ಅಂಬಾರ್ ಜೊತೆ ಉಗ್ರಂ ಮಂಜು ಹೊಸ ಅವತಾರ

ಇದನ್ನೂ ಓದಿ : HD Deve Gowda :‘ನಾನು ಆರೋಗ್ಯವಾಗಿದ್ದೇನೆ, ಶೀಘ್ರದಲ್ಲೇ ಪಕ್ಷದ ಕಚೇರಿಗೆ ಭೇಟಿ ನೀಡುವೆ’ : ಮಾಜಿ ಪ್ರಧಾನಿ ಹೆಚ್​ಡಿಡಿ

Sriram Sena chief Pramod Muthalik upset about NIA raid

Comments are closed.