ಆಧಾರ್ ಕಾರ್ಡ್ ನೆಗೆಟಿವ್, ಮೊಬೈಲ್ ನಿಂದ ಪಾಸಿಟಿವ್ : ಪೊಲೀಸ್ ಠಾಣೆಯಲ್ಲಿ ಕೊರೊನಾ ಹರಡಿದ ವಿಚಿತ್ರ ಕಥೆ !

0

ವಿಟ್ಲ : ಆತ ಮುಂಬೈನಿಂದ ತವರಿಗೆ ಮರಳಿದ್ದ. ಸೀದಾ ಪೊಲೀಸ್ ಠಾಣೆಗೆ ತೆರಳಿ ತನ್ನನ್ನು ಕ್ವಾರಂಟೈನ್ ಗೆ ಒಳಪಡಿಸುವಂತೆ ವಿನಂತಿಸಿದ್ದ. ಮುಂಬೈ ವ್ಯಕ್ತಿಯಿಂದ ಆಧಾರ್ ಕಾರ್ಡ್ ಹಾಗೂ ಮೊಬೈಲ್ ಪಡೆದಿದ್ದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಗೆ ಕೊರೊನಾ ಸೋಂಕು ಆವರಿಸಿದೆ. ಆದ್ರೀಗ ಕೊರೊನಾ ಆಧಾರ್ ಕಾರ್ಡ್ ನಿಂದ ಹರಡಿತಾ, ಇಲ್ಲಾ ಮೊಬೈಲ್ ನಿಂದ ಹರಡಿತಾ ಅನ್ನೋ ಬಗ್ಗೆ ಚರ್ಚೆ ಆರಂಭವಾಗಿದೆ.

ಮೇ 14ರಂದು ಮುಂಬೈನಿಂದ ವ್ಯಕ್ತಿಯೋರ್ವ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲಕ್ಕೆ ಬಂದಿದ್ದ. ಮುಂಬೈನಿಂದ ಬಂದಿದ್ದ ವ್ಯಕ್ತಿ ಸೀದಾ ವಿಟ್ಲ ಪೊಲೀಸ್ ಠಾಣೆಗೆ ಬಂದಿದ್ದ. ಅಲ್ಲಿದ್ದ ಕಾನ್ಸ್ಟೇಬಲ್ ಬಳಿಯಲ್ಲಿ ತನ್ನನ್ನ ಕ್ವಾರಂಟೈನ್ ಗೆ ಒಳಪಡಿಸುವಂತೆ ಕೇಳಿಕೊಂಡಿದ್ದಾನೆ. ವ್ಯಕ್ತಿಯ ಕೈಯಲ್ಲಿದ್ದ ಆಧಾರ್ ಕಾರ್ಡ್ ಹಾಗೂ ಮೊಬೈಲ್ ನ್ನು ಠಾಣೆಯಲ್ಲಿದ್ದ ಕಾನ್ ಸ್ಟೇಬಲ್ ವೊಬ್ಬರು ಪಡೆದುಕೊಂಡು, ಹೆಡ್ ಕಾನ್ ಸ್ಟೇಬಲ್ ಗೆ ನೀಡಿದ್ದಾರೆ. ಮುಂಬೈನಿಂದ ಬಂದಿದ್ದ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು.

ಅಲ್ಲದೇ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಬೆಳೆಸಿದದ್ದ ಕಾನ್ ಸ್ಟೇಬಲ್ ಗೆ ಮರುದಿನ ಕೊರೊನಾ ಶಂಕೆಯ ಲಕ್ಷಣಗಳು ಕಾಣಿಸಿಕೊಂಡಿತ್ತು. ಹೀಗಾಗಿ ಕಾನ್ ಸ್ಟೇಬಲ್ ಹಾಗೂ ಹೆಡ್ ಕಾನ್ ಸ್ಟೇಬಲ್ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಕಾನ್ ಸ್ಟೇಬಲ್ ಗೆ ಕೊರೊನಾ ಸೋಂಕು ನೆಗೆಟಿವ್ ಬಂದಿದ್ರೆ, ಸೋಂಕಿತ ವ್ಯಕ್ತಿಯೊಂದಿಗೆ ನೇರ ಸಂಪರ್ಕ ಹೊಂದಿಲ್ಲದ ಹೆಡ್ ಕಾನ್ ಸ್ಟೇಬಲ್ ಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದೆ.

ವಿಟ್ಲ ಠಾಣೆಯ ಕಾನ್ ಸ್ಟೇಬಲ್ ಸೋಂಕಿತ ವ್ಯಕ್ತಿಯಿಂದ ಆಧಾರ್ ಕಾರ್ಡ್ ಪಡೆದುಕೊಂಡಿದ್ದ, ಆದರೆ ಮೊಬೈಲ್ ನ್ನು ಮಾತ್ರವೇ ಹೆಡ್ ಕಾನ್ ಸ್ಟೇಬಲ್ ಗೆ ನೀಡಿದ್ದರು. ಇದೀಗ ಪೊಲೀಸ್ ಸಿಬ್ಬಂಧಿಗೆ ಕೊರೊನಾ ಸೋಂಕು ಹರಡಿರುವುದಕ್ಕೆ ಮೊಬೈಲ್ ಮುಖ್ಯ ಕಾರಣ ಅನ್ನೋ ಕುರಿತು ಚರ್ಚೆ ನಡೆಯುತ್ತಿದೆ. ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸ್ ಠಾಣೆಯನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗುತ್ತಿದೆ.

ಅಲ್ಲದೇ ಠಾಣೆಯನ್ನು ಸೀಲ್ ಡೌನ್ ಮಾಡುವ ಸಾಧ್ಯತೆಯೂ ಇದೆ. ಹೆಡ್ ಕಾನ್ ಸ್ಟೇಬಲ್ ಯಾರೊಂದಿಗೆ ಪ್ರಾಥಮಿಕ ಸಂಪರ್ಕವನ್ನು ಹೊಂದಿದ್ದಾರೆ ಅನ್ನೋ ಕುರಿತು ಮಾಹಿತಿಯನ್ನು ಕಲೆ ಹಾಕಲಾಗುತ್ತಿದ್ದು, ಠಾಣೆಯ ಸಿಬ್ಬಂಧಿಗಳನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಇನ್ನು ಪೊಲೀಸ್ ಠಾಣೆಗೆ ಬಂದು ಹೋಗಿರುವವರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಹೆಡ್ ಕಾನ್ ಸ್ಟೇಬಲ್ ಆಗಿರೋದ್ರಿಂದಾಗಿ ಸಾರ್ವಜನಿಕರ ಜೊತೆಗೆ ನೇರ ಸಂಪರ್ಕವನ್ನು ಹೊಂದಿರುವ ಸಾಧ್ಯತೆಯಿದ್ದು. ವಿಟ್ಲದ ಜನರಿಗೆ ಕೊರೊನಾ ಆತಂಕ ಶುರುವಾಗಿದೆ.

https://youtu.be/YKdUlCacDXI
Leave A Reply

Your email address will not be published.