1 ವರ್ಷದ ಮಗು ಸೇರಿ ಉಡುಪಿಯಲ್ಲಿ 23 ಮಂದಿಗೆ ಸೋಂಕು : ಕರ್ನಾಟಕಕ್ಕೆ ಡೆಡ್ಲಿ ಕೊರೊನಾ ಕಂಟಕ ತಂದ ಮುಂಬೈ

0

ಬೆಂಗಳೂರು : ಗ್ರೀನ್ ಝೋನ್ ನಲ್ಲಿದ್ದ ಉಡುಪಿಯಲ್ಲೀಗ ಕೊರೊನಾ ರುದ್ರನರ್ತನ ಶುರು ಮಾಡಿದೆ. ಒಂದು ವರ್ಷದ ಮಗು ಸೇರಿ ಉಡುಪಿಯಲ್ಲಿ ಒಂದೇ ದಿನ ಬರೋಬ್ಬರಿ 23 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ರಾಜ್ಯದಲ್ಲಿಂದು ಒಂದೇ ದಿನ 130 ಮಂದಿಗೆ ಕೊರೊನಾ ಸೋಂಕು ವ್ಯಾಪಿಸಿದೆ.

ಬೆಳಗಿನ ಹೆಲ್ತ್ ಬುಲೆಟಿನ್ ನಲ್ಲಿ 97 ಮಂದಿಗೆ ಕೊರೊನಾ ಸೋಂಕಿರುವುದು ದೃಢಫಟ್ಟಿತ್ತು. ಆದ್ರೀಗ ಸಂಜೆಯ ಬುಲೆಟಿನ್ ನಲ್ಲಿ ಕೊರೊನಾ ಸೋಂಕು ಮತ್ತೆ ಶಾಕ್ ಕೊಟ್ಟಿದ್ದು, ಹೊಸದಾಗಿ 43 ಮಂದಿಗೆ ಕೊರೊನಾ ಕಾಣಿಸಿಕೊಳ್ಳುವ ಮೂಲಕ ಸೋಂಕಿತರ ಸಂಖ್ಯೆ 130ರ ಸಂಖ್ಯೆ ತಲುಪಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 2,089 ಕ್ಕೆ ಏರಿಕೆಯಾಗಿದೆ.

ಕೊರೊನಾ ವೈರಸ್ ಉಡುಪಿ ಜಿಲ್ಲೆಗೆ ಶಾಕ್ ಕೊಟ್ಟಿದೆ. ಜಿಲ್ಲೆಯಲ್ಲಿ ಮೂವರು ಪೊಲೀಸ್ ಸಿಬ್ಬಂಧಿಗಳಿಗೆ ಸೋಂಕು ಕಾಣಿಸಿಕೊಂಡಿತ್ತು. ಅಲ್ಲದೇ ಮುಂಬೈನಿಂದ ಆಗಮಿಸಿದ್ದ 1 ವರ್ಷದ ಮಗು ಸೇರಿದಂತೆ ಒಟ್ಟು 18 ಮಂದಿಗೆ ಸೋಂಕು ದೃಢಪಟ್ಟಿತ್ತು. ಆದ್ರೆ ಸಂಜೆಯ ಹೆಲ್ತ್ ಬುಲೆಟಿನ್ ನಲ್ಲಿ ಮತ್ತೆ 5 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಈ ಮೂಲಕ ಒಂದೇ ದಿನ 23 ಮಂದಿಗೆ ಕೊರೊನಾ ವ್ಯಾಪಿಸಿದ್ದು, ಕರಾವಳಿಗರಿಗೆ ಆತಂಕ ಮೂಡಿಸಿದೆ.

ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 27 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರೆ, ಯಾದಗಿರಿ ಜಿಲ್ಲೆಯಲ್ಲಿ 24 ಮಂದಿಗೆ ಮಹಾಮಾರಿ ವ್ಯಾಪಿಸಿದೆ. ಇನ್ನು ಮಂಡ್ಯ ಜಿಲ್ಲೆಯಲ್ಲಿ 15, ಹಾಸನ 14, ಬೀದರ್ 6, ಧಾರವಾಡ 6, ಉತ್ತರ ಕನ್ನಡ 2 ಹಾಗೂ ದಕ್ಷಿಣ ಕನ್ನಡ, ಕೊಡಗು, ವಿಜಯಪುರ, ಬೆಂಗಳೂರು, ದಾವಣಗೆರೆ ಜಿಲ್ಲೆಗಳಲ್ಲಿ ತಲಾ ಓರ್ವರಿಗೆ ಸೋಂಕು ದೃಢಪಟ್ಟಿದೆ.

ಮುಂಬೈನಿಂದ ಬಂದಿದ್ದವರಿಂದಲೇ ಕೊರೊನಾ ಸೋಂಕು ವ್ಯಾಪಿಸುತ್ತಿದೆ. ರಾಜ್ಯದಲ್ಲಿ ಇದುವರೆಗೆ 654 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ರೆ, 42 ಮಂದಿಯನ್ನು ಕೊರೊನಾ ಮಹಾಮಾರಿ ಬಲಿ ಪಡೆದಿದೆ. ರಾಜ್ಯದಲ್ಲಿ ಕಳೆದೊಂದು ವಾರದ ಅವಧಿಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ದುಪ್ಪಟ್ಟಾಗಿರುವುದು ಆತಂಕವನ್ನು ಮೂಡಿಸಿದೆ.

Leave A Reply

Your email address will not be published.