ರಾಜಕಾರಣಕ್ಕೆ ಸಿದ್ದು ಗುಡ್ ಬೈ ! ಮುಂದೇನು ಮಾಡ್ತಾರೆ ಗೊತ್ತಾ ?

0

ಬೆಂಗಳೂರು : ಕಾಂಗ್ರೆಸ್ ದಿನೇ ದಿನೇ ಒಡೆದ ಮನೆಯಾಗುತ್ತಿದೆ. ಈಗಾಗಲೇ ಮನೆಯೊಂದು ಮೂರು ಬಾಗಿಲು ಅನ್ನುವಂತಾಗಿದೆ ಕಾಂಗ್ರೆಸ್ ಸ್ಥಿತಿ. ಈ ನಡುವಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕಾರಣಕ್ಕೆ ಗುಡ್ ಬೈ ಹೇಳುವ ಮಾತುಗಳನ್ನಾಡಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ಚಾಪು ಮೂಡಿಸಿರೋ ಸಿದ್ದರಾಮಯ್ಯ, ಟಗರು ಅಂತಾನೇ ಕರೆಯಿಸಿಕೊಂಡವರು. ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕನೇ ಆಗಿರಲಿ. ತನಗೆ ಸಿಕ್ಕಿರೋ ಹುದ್ದೆಯನ್ನು ಸಮರ್ಥವಾಗಿ ನಿಬಾಯಿಸೋ ತಾಕತ್ತು ಹೊಂದಿರೋ ಕೆಲವೇ ಕೆಲವು ನಾಯಕರಲ್ಲಿ ಸಿದ್ದರಾಮಯ್ಯ ಕೂಡ ಒಬ್ಬರು. ತಮ್ಮದೇ ಆದ ವಿಶಿಷ್ಟ ಭಾಷಣ, ರಾಜಕಾರಣದಿಂದಲೇ ಹೆಸರುವಾಸಿಯಾಗಿರೋ ಸಿದ್ದರಾಮಯ್ಯ ಇದೀಗ ನಿವೃತ್ತಿಯ ಮಾತುಗಳನ್ನಾಡೋ ಮೂಲಕ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.

ಕಳೆದ ಕೆಲ ದಿನಗಳಿಂದ ರಾಜ್ಯ ಕಾಂಗ್ರೆಸ್ ಎಲ್ಲವೂ ಸರಿಯಿಲ್ಲ ಅನ್ನೋದು ಕಾಂಗ್ರೆಸ್ ನಾಯಕರ ಮಾತುಗಳಿಂದಲೇ ಸ್ಪಷ್ಟವಾಗುತ್ತಿದೆ. ಅದರಲ್ಲೂ ಕಾಂಗ್ರೆಸ್ ನಲ್ಲಿ ಮೂಲ ಮತ್ತು ವಲಸಿಗರೆಂಬ ಬಣಗಳು ಹುಟ್ಟಿಕೊಂಡಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಹುದ್ದೆ ಹಾಗೂ ವಿಪಕ್ಷ ನಾಯಕನ ಹುದ್ದೆಯ ಮೇಲೆ ಕಣ್ಣಿಟ್ಟಿರೋ ಸಿದ್ಗರಾಮಯ್ಯ ಎರಡೂ ಹುದ್ದೆಗಳನ್ನು ತಮಗೆ ನೀಡುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇಳಿದ್ದಾರೆ. ಅಲ್ಲದೇ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಡಿ.ಕೆ.ಶಿವಕುಮಾರ್ ಏರೋದಕ್ಕೂ ವಿರೋಧಿಸಿದ್ದು, ತನ್ನ ಪರಮಾಪ್ತರಾಗಿರೋ ಮಾಜಿ ಸಚಿವ ಎಂ.ಬಿ.ಪಾಟೀಲ್ ಗೆ ನೀಡುವಂತೆ ಸೂಚನೆಯನ್ನು ನೀಡಿದ್ರು.

ಆದ್ರೀಗ ಕೆಪಿಸಿಸಿ ಹುದ್ದೆಗೆ ಡಿಕೆಶಿ ಬಹುತೇಕ ಫಿಕ್ಸ್ ಆಗಿದ್ದು, ಹೈಕಮಾಂಡ್ ನಿರ್ಧಾರ ಕೈಗೊಳ್ಳಲು ವಿಳಂಭ ಮಾಡುತ್ತಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ದ ಮುನಿಸಿಕೊಂಡಿರೊ ಸಿದ್ದರಾಮಯ್ಯ ರಾಜಕಾರಣಕ್ಕೆ ಗುಡ್ ಬೈ ಹೇಳೋ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.

ಮತ್ತೆ ಕಪ್ಪು ಕೋಟು ಹಾಕ್ತಾರೆ ಸಿದ್ದರಾಮಯ್ಯ !
ಸಿದ್ದರಾಮಯ್ಯ ರಾಜಕಾರಣಕ್ಕೆ ಬರುವ ಮುನ್ನ ಮೈಸೂರಿನಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ. 1982ರ ವರೆಗೂ ಹಲವಾರು ಕೇಸುಗಳಲ್ಲಿ ವಾದ ಮಾಡಿ ಓರ್ವ ಯಶಸ್ವಿ ಲಾಯರ್ ಎನಿಸಿಕೊಂಡವರು. ಸುಮಾರು 38 ವರ್ಷಗಳ ಬಳಿಕ ಮತ್ತೆ ಕಪ್ಪು ಕೋಟ್ ಹಾಕಿ ವಕೀಲ ವೃತ್ತಿಗೆ ಮರಳುತ್ತೇನೆ ಅಂತಾ ತನ್ನ ಪರಮಾಪ್ತರ ಬಳಿ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. 1982ರವರೆಗೂ ವಕೀಲರಾಗಿಯೇ ಸೇವೆ ಸಲ್ಲಿಸುತ್ತಿದ್ದ ಸಿದ್ದರಾಮಯ್ಯ ರಾಜಕಾರಣಕ್ಕೆ ಬಂದ ನಂತರವೂ ಬಾರ್ ಕೌನ್ಸಿಲ್ ಎನ್ ರೋಲ್ ಮೆಂಟ್ ಮುಂದುವರಿಸಿಕೊಂಡು ಬಂದಿದ್ದರು. ಆದರೆ ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ಎನ್ ರೋಲ್ ಮೆಂಟ್ ಕಾರ್ಡ್ ಸರೆಂಡರ್ ಮಾಡಿದ್ದರು.

ಇದೀಗ ರಾಜಕಾರಣದಿಂದ ದೂರವಾಗಿ ಮತ್ತೆ ವಕೀಲ ವೃತ್ತಿಗೆ ಮರಳಲು ಮತ್ತೆ ರಿನೀವಲ್ ಮಾಡಲು ಸ್ಟೇಟ್ ಬಾರ್ ಕೌನ್ಸಿಲ್ ಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ರಿನಿವಲ್ ಗೆ ಬೇಕಾದ ದಾಖಲೆಗಳನ್ನು ಮೈಸೂರಿನಿಂದ ತರಿಸಿಕೊಂಡು ಪರಮಾಪ್ತ ವಕೀಲರಿಗೆ ದಾಖಲೆಗಳನ್ನು ನೀಡಿದ್ದಾರೆ. ಜನವರಿ ಕೊನೆಯ ವಾರದಲ್ಲಿ ವಕೀಲ ವೃತ್ತಿಗೆ ಮರಳುವುದಾಗಿ ತನ್ನ ಪರಮಾಪ್ತರ ಬಳಿ ಹೇಳಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದ್ರೆ ಸಿದ್ದರಾಮಯ್ಯ ಫೆಬ್ರವರಿ ತಿಂಗಳಿನಿಂದಲೇ ವಕೀಲ ವೃತ್ತಿಗೆ ಮರಳಲಿದ್ದಾರೆ.

Special Desk newsnext kananda

Leave A Reply

Your email address will not be published.