ರಾಹುಲ್, ಕೊಯ್ಲಿ, ಅಯ್ಯರ್ ಅಬ್ಬರಕ್ಕೆ ಕಿವಿಸ್ ಉಡೀಸ್, ಮೊದಲ ಟಿ20 ಪಂದ್ಯದಲ್ಲಿ ಗೆದ್ದು ಬೀಗಿದ ಭಾರತ

0

ಆಕ್ಲೆಂಡ್ : ಅತಿಥೇಯ ನ್ಯೂಜಿಲೆಂಡ್ ತಂಡದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀ ಇಂಡಿಯಾ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯನ್ನು 1-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ.

ಆಕ್ಲೆಂಡ್ ನ ಈಡನ್ ಪಾರ್ಕ್ ನಲ್ಲಿ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿತ್ತು. ಮೊದಲು ಬ್ಯಾಟ್ ಮಾಡಿದ ನ್ಯೂಜಿಲ್ಯಾಂಡ್ ತಂಡಕ್ಕೆ ಮಾರ್ಟಿನ್ ಗುಫ್ಟಿಲ್ ಹಾಗೂ ಕೊಲಿನ್ ಮೊನ್ರೋ ಭರ್ಜರಿ ಆರಂಭವೊದಗಿಸಿದ್ರು. ಗುಪ್ಟಿಲ್ 30 ರನ್ ಗಳಿಸಿ ಔಟಾದ್ರೆ ಕೊಲಿನ್ ಮುನ್ರೋ ಭರ್ಜರಿ ಅರ್ಧಶತಕ ಗಳಿಸಿದ್ರು. ನಂತರ ನಾಯಕ ಕೆನ್ ವಿಲಿಯಂಸನ್ 51 ಹಾಗೂ ರಾಸ್ ಟೇಲರ್ 54 ರನ್ ಗಳ ನೆರವಿನಿಂದ ನ್ಯೂಜಿಲ್ಯಾಂಡ್ ತಂಡ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಬರೋಬ್ಬರಿ 203 ರನ್ ಗಳಿಸಿತ್ತು. ಭಾರತ ಪರ ಜಸ್ಪ್ರಿತ್ ಬೂಮ್ರಾ, ಶಾರ್ದೂಲ್ ಠಾಕೂರ್, ಚಹಲ್, ಶಿವಂ ದುಬೆ ಹಾಗೂ ಜಡೇಜಾ ತಲಾ 1 ವಿಕೆಟ್ ಪಡೆದುಕೊಂಡ್ರು.

ಬೃಹತ್ ಮೊತ್ತವನ್ನು ಬೆನ್ನತ್ತಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಗಿತ್ತು. 7 ರನ್ ಗಳಿಸಿದ್ದಾಗ ರೋಹಿತ್ ಶರ್ಮಾ ಸ್ಟನ್ನರ್ ಗೆ ವಿಕೆಟ್ ಒಪ್ಪಿಸಿದ್ರು. ನಾಯಕ ಕೊಯ್ಲಿ ಜೊತೆಗೆ ಕನ್ನಡಿಗ ಕೆ.ಎಲ್.ರಾಹುಲ್ ಭರ್ಜರಿ ಆಟಕ್ಕೆ ಮುಂದಾದ್ರು. ರಾಹುಲ್ 56 ರನ್ ಗಳಿಸಿದ್ರೆ, ನಾಯಕ ವಿರಾಟ್ ಕೊಯ್ಲಿ 45ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು.

ಶ್ರೇಯಸ್ ಅಯ್ಯರ್ ಭರ್ಜರಿ ಅರ್ಧಶತಕದ ನೆರವಿನಿಂದ ಭಾರತ ಗೆಲುವಿನ ನಗೆ ಬೀರಿದೆ.

ಭಾರತ 19 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 204 ರನ್ ಗಳಿಸೋ ಮೂಲಕ ನ್ಯೂಜಿಲ್ಯಾಂಡ್ ವಿರುದ್ದ ಸೇಡು ತೀರಿಸಿಕೊಂಡಿದೆ. ನ್ಯೂಜಿಲ್ಯಾಂಡ್ ಪರ ಇಶಾ ಸೋದಿ 2 ಹಾಗೂ ಟಿಕ್ನರ್ ಹಾಗೂ ಸ್ಟನ್ನರ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.

ಸ್ಕೋರ್ ವಿವರ
ನ್ಯೂಜಿಲ್ಯಾಂಡ್ :
ಮಾರ್ಟಿನ್ ಗುಪ್ಟಿಲ್ 30, ಕೊಲಿನ್ ಮುನ್ರೋ 59, ಕೇನ್ ವಿಲಿಯಂಸನ್ 51, ರಾಸ್ ಟೇಲರ್ 54, ಬೂಮ್ರಾ 33/1, ಶಾರ್ದೂಲ್ ಠಾಕೂರ್ 44/1, ಚಹಲ್ 32/1, ಶಿವಂ ದುಬೆ 24/1, ರವೀಂದ್ರ ಜಡೇಜಾ 18/1
ಭಾರತ : ರೋಹಿತ್ ಶರ್ಮಾ 7, ಕೆ.ಎಲ್.ರಾಹುಲ್ 56, ವಿರಾಟ್ ಕೊಯ್ಲಿ 45, ಶ್ರೇಯಸ್ ಅಯ್ಯರ್ 58, ಶಿವಂ ದುಬೆ 13, ಮನೀಶ್ ಪಾಂಡೆ 14, ಇಶಾ ಸೋದಿ 36/2, ಬ್ಲೇರ್ ಟಿಕ್ನರ್ 34/1, ಮೈಕಲ್ ಸ್ಟನ್ನರ್ 50/1

Leave A Reply

Your email address will not be published.