ಹೆಡ್‌ಫೋನ್ ಬಳಸೋ ಮುನ್ನ ಎಚ್ಚರ ಎಚ್ಚರ…! ವೈರಲ್ ಆಗಿದೆ ಶಾಕಿಂಗ್ ವಿಡಿಯೋ

ಇಂದಿನ ಕಾಲದಲ್ಲಿ ಬಹುತೇಕ ಮಂದಿಗೆ ಹೆಡ್ ಪೋನ್ ಬಳಸೋದು ಮಾಮೂಲಾಗಿದೆ. ಆದರೆ ದೊಡ್ಡ ದೊಡ್ಡ ಹೆಡ್ ಪೋನ್ ಗಳನ್ನು ಪರಿಶೀಲನೆ ನಡೆಸದೆ ಬಳಸಿದ್ರೆ ಅಪಾಯ ಗ್ಯಾರಂಟಿ. ಇದೀಗ ಹೆಡೆ್ ಪೋನ್ ಒಳಗೆ ಜೇಡರ ಹುಳವೊಂದು ಇರುವ ವಿಡಿಯೋ ಇದೀಗ ಬಾರಿ ವೈರಲ್ ಆಗಿದೆ.

ಆಸ್ಟ್ರೇಲಿಯಾದಲ್ಲಿ ಈ ಘಟನೆ ನಡೆದಿದೆ. ಪರ್ತ್‌ನ ಆಲಿ ಥರ್ಸ್ಟ್ ಅವರು ತಾನು ಕೆಲಸ ಮಾಡುತ್ತಿರುವಾಗ ಹೆಡ್‌ಫೋನ್ ಬಳಸಿದ್ದರು. ಆದರೆ, ಹೆಡ್‌ಫೋನ್‌ನಲ್ಲಿ ಕೇಳುತ್ತಿದ್ದ ವಿಚಿತ್ರ ಶಬ್ದದಿಂದ ಇವರಿಗೆ ತನ್ನ ಕೆಲಸದತ್ತ ಗಮನ ಕೇಂದ್ರೀಕರಿಸಲು ಸಾಧ್ಯವಾಗಿರಲಿಲ್ಲ.

ಹೀಗಾಗಿ, ಸಮಸ್ಯೆ ಏನೆಂದು ತಿಳಿದುಕೊಳ್ಳುವ ಕುತೂಹಲದಿಂದ ಹೆಡ್‌ಫೋನ್‌ನ ಹೊರಭಾಗವನ್ನು ಇವರು ತೆಗೆದಿದ್ದರು. ಈ ವೇಳೆ, ಹೆಡ್‌ಫೋನ್‌ನ ಮೃದುವಾದ ಪ್ಯಾಡಿಂಗ್‌ನೊಳಗೆ ದೊಡ್ಡ ಗಾತ್ರದ ಜೇಡರ ಹುಳು ಆಶ್ರಯ ಪಡೆದಿರುವುದು ಇವರ ಗಮನಕ್ಕೆ ಬಂದಿತ್ತು. ಇದನ್ನು ನೋಡಿ ಇವರೊಂದು ಸಲ ದಿಗಿಲುಗೊಂಡಿದ್ದರು.

ಇಲ್ಲೊಬ್ಬರು ಫ್ಲಂಬರ್ ಬಳಸುತ್ತಿದ್ದ ದೊಡ್ಡ ಹೆಡ್‌ಫೋನ್‌ನಲ್ಲಿ ಜೇಡರ ಹುಳು ಅಡಗಿ ಕುಳಿತಿತ್ತು. ಈ ವಿಡಿಯೋವನ್ನು ಇವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಸಣ್ಣ ಕ್ಲಿಪ್ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.

ಇದಾದ ಬಳಿಕ ಹೆಡ್‌ಫೋನನ್ನು ಹೊರಗೆ ತಂದು ಜೇಡನನ್ನು ಒಳಗಿನಿಂದ ತೆಗೆಯುವ ಪ್ರಯತ್ನ ಮಾಡಲಾಗಿತ್ತು. ಆದರೆ, ಈ ಜೇಡರ ಹುಳು ಅಲ್ಲಿಂದ ಹೊರಬರುವುದೇ ಇಲ್ಲ. ಹೀಗಾಗಿ, ಇವರು ಈ ಜೇಡರ ಹುಳುವನ್ನು ಹೊರತೆಗೆಯುವ ತಮ್ಮ ಪ್ರಯತ್ನವನ್ನು ಮುಂದುವರಿಸಬೇಕಾಗಿತ್ತು.

https://www.facebook.com/watch/?ref=external&v=1275218742844890

Comments are closed.