ಸಿಲಿಕಾನ್ ಸಿಟಿಯ ಅಂದ ಹೆಚ್ಚಿಸಿದ ಲಾಕ್ ಡೌನ್ : ಹೇಗಿದೆ ಗೊತ್ತಾ ಬೆಂಗಳೂರಿನ ರಸ್ತೆಗಳ ಸೌಂದರ್ಯ ??

0

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ಅಂದ್ರೆ ಥಟ್ಟನೆ ನೆನಪಾಗೋದು ಟ್ರಾಫಿಕ್ ಕಿರಿಕಿರಿ. ದಟ್ಟ ಹೊಗೆ.. ಆದ್ರೆ ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಅಂತೆಲ್ಲಾ ಕರೆಯಿಸಿಕೊಳ್ಳೋ ಬೆಂಗಳೂರು ಇದೀಗ ತನ್ನ ನೈಜ ಸೊಬಗನ್ನು ಅನಾವರಣಗೊಳಿಸುತ್ತಿದೆ.

ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಆದೇಶ ಜಾರಿಯಾಗುತ್ತಲೇ ಬೆಂಗಳೂರು ನವವಧುವಿನಂತೆ ಸಿಂಗಾರಗೊಂಡಿವೆ.

ಬೆಂಗಳೂರು ವಾಹನ ದಟ್ಟಣೆಯಿಂದಾಗಿ ದೇಶದ ಅತ್ಯಂತ ಬ್ಯುಸಿಯಾಗಿರೋ ಸಿಟಿ ಅಂತಾನೂ ಕರೆಯಿಸಿಕೊಳ್ಳುತ್ತಿದೆ.

ಆದ್ರೀಗ ಕೊರೊನಾ ಎಫೆಕ್ಟ್ ನಿಂದಾಗಿ ಬೆಂಗಳೂರು ತನ್ನ ಮೂಲಕ್ಕೆ ಮರಳುತ್ತಿದೆ. ದಟ್ಟ ಹೊಗೆ ಮಾಯವಾಗಿದೆ. ಎಲ್ಲಿ ನೋಡಿದರಲ್ಲಿ ಹಕ್ಕಿಗಳ ಚಿಲಿಪಿಲಿ ನಾದ ಕೇಳಿಬರುತ್ತಿದೆ.

ಮರಗಳ ತುಂಬೆಲ್ಲಾ ಹೂವುಗಳು ಅರಳಿ ನಿಂತಿದ್ದು, ರಸ್ತೆಯುದ್ದಕ್ಕೂ ಹೂವುಗಳು ಬೆಂಗಳೂರು ಜನರನ್ನು ಸ್ವಾಗತಿಸುತ್ತಿವೆ.

ಆದರೆ ಬೆಂಗಳೂರಲ್ಲಿ ಹೆಚ್ಚುತ್ತಿರೋ ಕೊರೊನಾ ವೈರಸ್ ಭೀತಿಯಿಂದಾಗಿ ಬೆಂಗಳೂರಿಗರು ನಿಸರ್ಗದ ಸೌಂದರ್ಯವನ್ನು ಮಿಸ್ ಮಾಡಿಕೊಳ್ತಿದ್ದಾರೆ.

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ ಡೌನ್ ಆಗುತ್ತಿದ್ದಂತೆಯೇ ಬೆಂಗಳೂರಿಗೆ ಬೆಂಗಳೂರೇ ಬದಲಾಗಿ ಹೋಗಿದೆ. ಮಾಲಿನ್ಯದ ಪ್ರಮಾಣವೂ ಕಡಿಮೆಯಾಗಿದೆ ಅನ್ನುತ್ತಿದ್ದಾರೆ ಪರಿಸರ ಪ್ರೇಮಿಗಳು.

Leave A Reply

Your email address will not be published.